ಸಚಿವ ಡಿ ಕೆ ಶಿವಕುಮಾರ್ ನೇತೃತ್ವದಲ್ಲಿ ನಡೆದ ಒಕ್ಕಲಿಗರ ಸಂಘದ ನಿರ್ದೇಶಕರ ಸಭೆ ಅಂತ್ಯ.

0
324

ಒಕ್ಕಲಿಗರ ಸಂಘದಲ್ಲಿ ಉಲ್ಭಣಿಸಿರುವ ಬಿಕ್ಕಟ್ಟಿನ ಹಿನ್ನಲೆಯಲ್ಲಿ ಸಚಿವ ಡಿ ಕೆ ಶಿವಕುಮಾರ್ ನೇತೃತ್ವದಲ್ಲಿ ನಡೆದ ನಿರ್ದೇಶಕರ ಸಭೆ ಅಂತ್ಯವಾಗಿದೆ.

ಸದಾಶಿವ ನಗರದ ಡಿ ಕೆ ಶಿ ಗೃಹ ಕಚೇರಿಯಲ್ಲಿ ಸಭೆ ನಡೆದ್ದಿದ್ದು, ಕಳೆದ ಕೆಲ ದಿನಗಳಿಂದ ಸಂಘದ ಅಧ್ಯಕ್ಷ ಸ್ಥಾನಕ್ಕಾಗಿ ನಡೀತಿರೋ ತಿಕ್ಕಾಟ ಶಮನಕ್ಕೆ ಡಿ ಕೆ ಶಿ ಯತ್ನಿಸಿದ್ರು.

ನೂತನ ಅದ್ಯಕ್ಷ ಬೆಟ್ಟೆ ಗೌಡ ಹಾಗೂ ಮಾಜಿ ಅದ್ಯಕ್ಷ ಅಪ್ಪಾಜೀ ಗೌಡ ಬಣಗಳ ನಡುವಿನ ಕಿತ್ತಾಟ ತಾರಕ್ಕಕ್ಕೇರಿದ ಹಿನ್ನಲೆಯಲ್ಲಿ, ಸಚಿವ ಡಿ ಕೆ ಶಿವಕುಮಾರ್ ಸಂಧಾನ ಸಭೆ ನಡೆಸಿದ್ರು ಆದರೆ, ಸದ್ಯ ಯಾವುದೇ ತೀರ್ಮಾನ ಕೈಗೊಳ್ಳದಿರಲು ನಿರ್ದಾರಿಸಲಾಗಿದೆ. ಮತ್ತೋಂದು ಸುತ್ತಿನ ಚರ್ಚೆ ನಡೆಯುವ ಸಾಧ್ಯತೆ ಇದೆ.

ಮಾಜಿ ಪ್ರಧಾನಿ ದೇವೇಗೌಡ, ಅದಿ ಚುಂಚನಗಿರಿ ಶ್ರೀ ಸೇರಿದಂತೆ ಹಲವರ ಜೊತೆ ಚರ್ಚೆ ಮಾಡಲು ಚಿಂತನೆ ನಡೆಸಲಾಗಿದೆ.

 Click this button or press Ctrl+G to toggle between Kannada and English