ಆಳಂದ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಕಟ್ಟಡ ಹಾಳುಕೊಂಪೆಯಂತಾಗಿದೆ.

0
243

ಕಲ್ಬುರ್ಗಿ ಜಿಲ್ಲೆಯ ಆಳಂದ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಕಟ್ಟಡ ಶೀತಲಾವಸ್ಥೆಯಲ್ಲಿದೆ.

ಇದೆ ಕಟ್ಟಡದಲ್ಲಿ ಕನ್ನಡ, ಹಿಂದಿ, ಉರ್ದು ಮಾಧ್ಯಮದ ಫ್ರೌಡಶಾಲೆ, ಪಿಯುಸಿ ಹಾಗೂ ಡಿಗ್ರಿ ಕಾಲೇಜ್‌ಗಳಿವೆ. ನೂರಾರು ವಿದ್ಯಾರ್ಥಿಗಳಿದ್ದು, ಚಿಕ್ಕ ಚಿಕ್ಕ ಕೋಣೆಯಲ್ಲಿ ಕುಳಿತು ಭಯದಲ್ಲಿಯೇ ಪಾಠವನ್ನ ಕೇಳ್ತಿದ್ದಾರೆ. ಕಟ್ಟಡದ ಗೋಡೆಗಳೆಲ್ಲವೂ ಬಿರಕು ಬಿಟ್ಟಿದೆ, ಕಿಟಕಿ ಬಾಗಿಲುಗಳು ಮುರಿದು ಹೋಗಿವೆ. ಸುಣ್ಣ ಬಣ್ಣವಿಲ್ಲದೆ ಹಾಳುಕೊಂಪೆಯಂತಾಗಿದೆ.

ದುರಸ್ಥಿ ಕಾರ್ಯಕ್ಕಾಗಿ 50 ಲಕ್ಷ ರೂ ಬಿಡುಗಡೆ ಮಾಡಲಾಗಿದೆ ಆದರೆ, ದುರಸ್ಥಿ ಕಾಮಗಾರಿ ಕೂಡ ನಡೀತಿಲ್ಲ ಅನ್ನೋ ಆರೋಪ ಕೇಳಿಬಂದಿದೆ. ಸಂಬಂಧಪಟ್ಟ ಅಧಿಕಾರಿಗಳು ಕ್ರಮಕೈಗೊಳ್ಳಬೇಕೆಂದು ವಿದ್ಯಾರ್ಥಿಗಳ ಆಗ್ರಹ.

 Click this button or press Ctrl+G to toggle between Kannada and English