ಬಿಜೆಪಿಯಿಂದ 36 ಕೋಟಿ ರೂ. ಆಮಿಷ: ಇರೋಮ್ ಶರ್ಮಿಳಾ

0
231

ಬಿಜೆಪಿ ಪಕ್ಷದಿಂದ ಚುನಾವಣೆಗೆ ಸ್ಪರ್ಧಿಸಿದರೆ, ನನಗೆ ಬರೋಬ್ಬರಿ 36 ಕೋಟಿ ರೂ. ಕೊಡುವುದಾಗಿ ಆಮಿಷ ಒಡ್ಡಲಾಗಿತ್ತು ಅಂತ ಸಾಮಾಜಿಕ ಹೋರಾಟಗಾರ್ತಿ ಇರೋಮ್ ಶರ್ಮಿಳಾ ಹೇಳಿದ್ದಾರೆ. ಈ ಆರೋಪವನ್ನು ಬಿಜೆಪಿ ತಿರಸ್ಕರಿಸಿದೆ.

ಉಪವಾಸ ಸತ್ಯಾಗ್ರಹ ತ್ಯಜಿಸಿದ ನಂತರ, ಪ್ರಸ್ತುತ ರಾಜಕಾರಣದ ಕುರಿತು ಸಲಹೆ ಪಡೆಯೋ ಸಲುವಾಗಿ ನಾನು ಒಬ್ಬ ಬಿಜೆಪಿ ನಾಯಕರನ್ನು ಭೇಟಿಯಾಗಿದ್ದೆ. ಆಗ ಅವರು ಚುನಾವಣೆಯಲ್ಲಿ ಸ್ಪರ್ಧಿಸೋಕೆ 36 ಕೋಟಿ ರೂ. ಬೇಕಾಗುತ್ತೆ. ಕೇಂದ್ರ ಈ ಮೊತ್ತವನ್ನು ಕೊಡದಿದ್ದ ಪಕ್ಷದಲ್ಲಿ, ನಾನು ನಿಮಗೆ ಅಷ್ಟು ಮೊತ್ತವನ್ನು ಕೊಡ್ತೇನೆ ಅಂತ ಹೇಳಿದ್ರು ಅಂತ ಶರ್ಮಿಳಾ ಬಿಜೆಪಿ ವಿರುದ್ಧ ಗಂಭೀರವಾದ ಆರೋಪವನ್ನು ಮಾಡಿದ್ದಾರೆ.

Imphal: Irom Sharmila smiles after getting free from JNIMS security ward in Imphal on Saturday. PTI Photo(PTI8_27_2016_000126B)

 Click this button or press Ctrl+G to toggle between Kannada and English