ಮಗ ಮನೆಯಲ್ಲಿ ಸ್ಟಾರ್.. ಅಪ್ಪ ಗ್ರೌಂಡ್​ನಲ್ಲಿ ಹೀರೋ!

0
211

ಆತ ಸಾಕರ್ ಲೋಕದ ಸ್ಟಾರ್ ಪ್ಲೇಯರ್. ಫುಟ್ಬಾಲ್ ಮೈದಾನದಲ್ಲಿ ತನ್ನ ಕಾಲ್ಚಳಕದ ಮೂಲಕ ಮೋಡಿ ಮಾಡೋ ಮೂಲಕ ಅಪಾರ ಆಭಿಮಾನಿಗಳ ಮನ ಗೆದ್ದಿದ್ದಾನೆ. ಆದ್ರೀಗ ಆತನಂತೆ ತನ್ನ ಮಗನೂ ಕೂಡ ಡಿಫ್ರೇಂಟ್ ಡ್ಯಾನ್ಸ್ ಮೂಲಕ ಭಾರೀ ಸದ್ದು ಮಾಡ್ತಿದ್ದಾನೆ.ಅಪ್ಪ ಗ್ರೌಂಡ್​ನಲ್ಲಿ ಹೀರೋ, ಮಗ ಮನೆಯಲ್ಲಿ ಸ್ಟಾರ್..!
ವೀಡಿಯೋ ನೋಡಿ ಡ್ಯಾನ್ಸ್ ಮಾಡ್ತಾನೆ ಜ್ಯೂನಿಯರ್ ಮೆಸ್ಸಿ..! ಯಸ್.. ಫುಟ್ಬಾಲ್​​ ಲೋಕಕ್ಕೆ ಅಪ್ಪ ಸ್ಟಾರ್ ಆದ್ರೆ, ಆ ಸ್ಟಾರ್​ಗೆ ಮಗನೇ ದೊಡ್ಡ ಸ್ಟಾರ್. ಹೌದು.. ನಾವೂ ಮಾತಾಡ್ತಿರೋದು ಬೇರೆ ಯಾರು ಅಲ್ಲ, ಫುಟ್ಬಾಲ್ ಲೋಕದ ಸ್ಟಾರ್ ಪ್ಲೇಯರ್ ಅರ್ಜೇಂಟಿನಾದ ಲಿಯೋನಲ್ ಮೆಸ್ಸಿ.ಫುಟ್ಬಾಲ್ ಮೈದಾನದಲ್ಲಿ ತನ್ನ ಕಾಲ್ಚಳಕದ ಮೂಲಕ ಮೋಡಿ ಮಾಡೋ ಮೆಸ್ಸಿಗೆ ವಿಶ್ವದಾದ್ಯಂತ ಅಪಾರ ಅಭಿಮಾನಿಗಳಿದ್ದಾರೆ. ಅಲ್ದೆ, ಮೆಸ್ಸಿ ಆಟಕ್ಕೆ ಫಿದಾ ಆಗದವರೇ ಇಲ್ಲ. ಆದ್ರೆ, ಇದೀಗ ಫುಟ್ಬಾಲ್ ಅಭಿಮಾನಿಗಳು ಜ್ಯೂನಿಯರ್ ಮೆಸ್ಸಿಗೆ ಮನಸೋತಿದ್ದಾರೆ.
ಹೌದು.. ಮೆಸ್ಸಿಯ ಮಗನಾದ ಥೈಗೋ ಮೆಸ್ಸಿಗೆ 4 ವರ್ಷ ವಯಸ್ಸು. ಆದ್ರೆ, ಈ ಜ್ಯೂನಿಯರ್ ಮೆಸ್ಸಿ ಮಾಡೋ ತುಂಟಾಟಗಳು ಒಂದೆರೆಡಲ್ಲ. ಮೆಸ್ಸಿ ಎಲ್ಲೆ ಮ್ಯಾಚ್ ಆಡಿದ್ರೂ ತಮ್ಮ ಜೊತೆ ಫ್ಯಾಮಿಲಿಯನ್ನ ಕರೆದುಕೊಂಡು ಹೋಗ್ತಾರೆ. ಫ್ಯಾಮಿಲಿಯನ್ನ ಬಿಟ್ಟಿರದ ಮೆಸ್ಸಿಗೆ ಥೈಗೋ ಮೆಸ್ಸಿ ಅಂದ್ರೆ, ಪಂಚಪ್ರಾಣ.ಆದ್ರೆ, ಥೈಗೋ ಮೆಸ್ಸಿಯನ್ನ ನೋಡಿ… ಟಿವಿ ನೋಡ್ತಾ ಹೇಗೆ ಡ್ಯಾನ್ಸ್ ಮಾಡ್ತಾನೆ ಅಂತಾ. ಮಗನ ಡ್ಯಾನ್ಸ್ ವಿಡೀಯೋವನ್ನ ಮೆಸ್ಸಿ ತಮ್ಮ ಇನ್​ಸ್ಟ್ರಾಗ್ರಾಮ್​ನಲ್ಲಿ ಪೋಸ್ಟ್ ಮಾಡಿದ್ದಾರೆ. ಮೆಸ್ಸಿ ಮಗನ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಿದೆ.  ಒಟ್ನಲ್ಲಿ ಮೆಸ್ಸಿಯಂತೆ ಜ್ಯೂನಿಯರ್ ಮೆಸ್ಸಿ ಕೂಡ ಸಖತ್ ಶಾರ್ಪ್ ಆಗಿದ್ದಾನೆ.

 Click this button or press Ctrl+G to toggle between Kannada and English