ವಿರಾಟ್ ಕೊಹ್ಲಿಗೆ ಪಾಲಿ ಉಮ್ರಿಗರ್ ಪ್ರಶಸ್ತಿ, ಆರ್.ಅಶ್ವಿನ್ ಪ್ರತಿಷ್ಠಿತ ದಿಲೀಪ್ ಸರ್ದೇಸಾಯಿ ಪ್ರಶಸ್ತಿ

0
226

ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ 3ನೇ ಬಾರಿಗೆ ವರ್ಷದ ಅಂತಾರಾಷ್ಟ್ರೀಯ ಕ್ರಿಕೆಟಿಗನಿಗೆ ಬಿಸಿಸಿಐ ನೀಡುವ ಪ್ರತಿಷ್ಠಿತ ಪಾಲಿ ಉಮ್ರಿಗರ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಎನ್.ರಾಮ್ ರಾಮಚಂದ್ರ ಗುಹಾ ಹಾಗೂ ಡಯಾನ ಎಡುಲ್ಜಿ ಇದ್ದ ಬಿಸಿಸಿಐ ವಾರ್ಷಿಕ ಪ್ರಶಸ್ತಿ ಆಯ್ಕೆ ಸಮಿತಿ, 2015-16ನೇ ಸಾಲಿನ ಗೌರವಗಳನ್ನು ಬುಧವಾರ ಪ್ರಕಟಿಸಿದೆ. ಸ್ಟಾರ್ ಸ್ಪಿನ್ನರ್ ಆರ್.ಅಶ್ವಿನ್ ಪ್ರತಿಷ್ಠಿತ ದಿಲೀಪ್ ಸರ್ದೇಸಾಯಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಮಾರ್ಚ್ 8ರಂದು ಬೆಂಗಳೂರಿನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. 2011-12 ಹಾಗೂ 2014-15ರಲ್ಲಿ ಇದೇ ಪ್ರಶಸ್ತಿ ಜಯಿಸಿದ್ದ ಕೊಹ್ಲಿ, 3 ಬಾರಿ ಪಾಲಿ ಉಮ್ರಿಗರ್ ಪ್ರಶಸ್ತಿಯ ಗೌರವ ಪಡೆದ ಮೊದಲ ಆಟಗಾರ ಎನಿಸಿದ್ದಾರೆ. ಇನ್ನು ವೆಸ್ಟ್ ಇಂಡೀಸ್ ವಿರುದ್ಧ ದ್ವಿಪಕ್ಷೀಯ ಸರಣಿಯ ನಿರ್ವಹಣೆಗಾಗಿ ನೀಡಲಾಗುವ ದಿಲೀಪ್ ಸರ್ದೇಸಾಯಿ ಪ್ರಶಸ್ತಿಯನ್ನು 2 ಬಾರಿ ಗೆದ್ದ ಮೊದಲ ಆಟಗಾರ ಎನ್ನುವ ಗೌರವಕ್ಕೆ ಅಶ್ವಿನ್ ಪಾತ್ರರಾಗಿದ್ದಾರೆ. 2011ರಲ್ಲಿ ನಡೆದ 3 ಪಂದ್ಯಗಳ ಟೆಸ್ಟ್ ಸರಣಿಯ ನಿರ್ವಹಣೆಗಾಗಿ ಈ ಗೌರವವನ್ನು ಮೊದಲ ಬಾರಿಗೆ ಪಡೆದಿದ್ದ ಅಶ್ವಿನ್, ಕಳೆದ ವರ್ಷ ವಿಂಡೀಸ್ನಲ್ಲಿ ನಡೆದ 4 ಪಂದ್ಯಗಳ ಟೆಸ್ಟ್ನಲ್ಲಿ ಸರಣಿಶ್ರೇಷ್ಠ ಗೌರವ ಪಡೆದಿದ್ದುದಕ್ಕಾಗಿ ಮತ್ತೊಮ್ಮೆ ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಆ ಸರಣಿಯಲ್ಲಿ ಅಶ್ವಿನ್ 2 ಶತಕಗಳೊಂದಿಗೆ 17 ವಿಕೆಟ್ ಗಳಿಸಿದ್ದರು.

India's captain Virat Kohli, right, holds the trophy for the Test match series Royal Stag Cup 2016 as Ravichandran Ashwin holds the trophy for the man of the series at the Queen's Park Oval in Port-of-Spain, Trinidad, Monday, Aug. 22, 2016. India won the series 2-0. (AP Photo/Ricardo Mazalan)

 Click this button or press Ctrl+G to toggle between Kannada and English