26/11 ದಾಳಿ: ಪಾಕ್ ಮೂಲದ ಉಗ್ರರಿಂದ ಕೃತ್ಯ ಎಂದ ಪಾಕ್​ನ ಮಾಜಿ ಅಧಿಕಾರಿ

0
278

2008ರ ಮುಂಬಯಿ ದಾಳಿಯ ರುವಾರಿಗಳು ಪಾಕಿಸ್ತಾನದವರೇ ಆಗಿದ್ದು ಅಲ್ಲಿಂದಲೇ ಪೂರ್ವತಯಾರಿ ನಡೆದಿತ್ತು ಎಂದು ಪಾಕಿಸ್ತಾನದ ಮಾಜಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಮಹ್ಮದ್‌ ಅಲಿ ದುರಾನಿ ಹೇಳಿದ್ದಾರೆ.

ದೆಹಲಿಯ ರಕ್ಷಣಾ ಮತ್ತು ವಿಶ್ಲೇಷಣಾ ಅಧ್ಯಯನ ಸಂಸ್ಥೆ ನಡೆಸಿದ ವಿಶೇಷ ಕಾರ್ಯಗಾರದಲ್ಲಿ ಮಾತನಾಡಿದ ದುರಾನಿ, 2008ರ ದಾಳಿಗೂ ಪಾಕ್‌ ಸರಕಾರಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ.

26/11 ಮುಂಬಯಿ ದಾಳಿಯನ್ನು ನಡೆಸಿದವರು ಪಾಕ್‌ ಪ್ರೇರಿತ ಉಗ್ರರೇ ಆಗಿದ್ದಾರೆ. ಅಲ್ಲದೇ ಈ ಘಟನೆ ಗಡಿಯಾಚೆಗಿ ಭಯೋತ್ಪಾದನೆಗೆ ಒಂದು ಉತ್ತಮ ನಿದರ್ಶನ ಎಂಬುದಾಗಿ ದುರಾನಿ ಹೇಳಿದ್ದಾರೆ.

ಇದೇ ವೇಳೆ ಉಗ್ರ ಸಂಘಟನೆಯ ಮುಖ್ಯಸ್ಥ ಹಫೀಜ್‌ ಸಯೀದ್‌ ವಿರುದ್ಧವೂ ಕಿಡಿಕಾರಿರುವ ದುರಾನಿ, ‘ಪಾಕ್‌ಗೆ ಸಯೀದ್‌ನಿಂದ ಯಾವುದೇ ಉಪಯೋಗವಿಲ್ಲ, ನಾವು ಆತನ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು’ ಎಂದಿದ್ದಾರೆ.

2008ರ ದಾಳಿಗೆ ಸಂಬಂದಿಸಿದಂತೆ ಪಾಕ್‌ ಭಾರತದಿಂದ 24 ಮಂದಿ ಸಾಕ್ಷಿಗಳನ್ನು ಕೇಳಿಕೊಂಡಿತ್ತು. ಆದರೆ ಇದಕ್ಕೆ ಪ್ರತ್ಯುತ್ತರವಾಗಿ ಭಾರತ ಮುಂಬಯಿ ದಾಳಿ ಪ್ರಕರಣವನ್ನು ಮರು ತನಿಖೆ ನಡೆಸುವಂತೆ ಕೇಳಿಕೊಂಡಿತ್ತು.

ಇದಕ್ಕೂ ಮುನ್ನ ಭಾರತ ಸೇರಿ ಹಲವು ದೇಶಗಳ ಆಗ್ರಹದ ಮೇಲೆ ಪಾಕ್‌ ಹಫೀಜ್‌ ಸಯೀದ್‌ನನ್ನು ಬಂಧಿಸಿತ್ತು.

 Click this button or press Ctrl+G to toggle between Kannada and English