ಅಶ್ವಿನ್ ಮ್ಯಾಜಿಕ್, ಕೊಹ್ಲಿ ಬಳಗಕ್ಕೆ 75 ರನ್ ಗಳ ಭರ್ಜರಿ ಜಯ

0
257

ಬೆಂಗಳೂರು: ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ ಜಯ ಗಳಿಸಿದೆ.

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದ ದ್ವಿತೀಯ ಇನ್ನಿಂಗ್ಸ್ ನಲ್ಲಿ ಗೆಲ್ಲಲು 188 ರನ್ ಗಳ ಗುರಿ ಪಡೆದಿದ್ದ ಆಸ್ಟ್ರೇಲಿಯಾವನ್ನು 112 ರನ್ ಗಳಿಗೆ ಆಲೌಟ್ ಮಾಡಿದ 75 ರನ್ ಗಳ ಅಂತರದಿಂದ ಜಯಗಳಿಸಿದೆ.

ಟಾಸ್ ಗೆದ್ದು ಇನ್ನಿಂಗ್ಸ್ ಆರಂಭಿಸಿದ್ದ ಟೀಂ ಇಂಡಿಯಾ 189 ರನ್ ಗಳಿಗೆ ಆಲೌಟ್ ಆಗಿತ್ತು. ಬಳಿಕ ಇನ್ನಿಂಗ್ಸ್ ಪ್ರಾರಂಭಿಸಿದ್ದ ಆಸ್ಟ್ರೇಲಿಯಾ 276 ರನ್ ಗಳಿಗೆ ಆಲೌಟ್ ಆಗಿ 87 ರನ್ ಮುನ್ನಡೆ ಸಾಧಿಸಿತ್ತು. ನಂತರ ಬ್ಯಾಟ್ ಮಾಡಿದ ಭಾರತ ಎಚ್ಚರಿಕೆಯ ಬ್ಯಾಟಿಂಗ್ ಮಾಡಿ 274 ರನ್ ಗಳಿಸಿತು. ಇದರೊಂದಿಗೆ ಭಾರತ ಆಸ್ಟ್ರೇಲಿಯಾಗೆ 188 ರನ್ ಗಳ ಗುರಿ ನೀಡಿತು ಇದನ್ನು ಬೆನ್ನಟ್ಟಿದ ಆಸ್ಟ್ರೇಲಿಯಾ 112 ರನ್ ಗಳಿಗೆ ಆಲೌಟ್ ಆಗಿ ಭಾರತಕ್ಕೆ ಶರಣಾಯಿತು.

ಆರ್ ಅಶ್ವಿನ್ ಅವರ ಮಾರಕ ದಾಳಿಗೆ ಆಸ್ಟ್ರೇಲಿಯಾ ಆಟಗಾರರು ಪೆವಿಲಿಯನ್ ಪರೇಡ್ ನಡೆಸಿದರು. ಅಶ್ವಿನ್ 41 ರನ್ ಗಳನ್ನು ನೀಡಿ 6 ವಿಕೆಟ್ ಪಡೆದಿದ್ದಾರೆ.

ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಉಭಯ ತಂಡಗಳು 1-1 ಅಂತರದಿಂದ ಸಮಬಲ ಸಾಧಿಸಿದೆ.

 Click this button or press Ctrl+G to toggle between Kannada and English