ಡ್ರೀಮ್ಸ್ ಕಂಪನಿ ಒಡೆಯ ಸಚಿನ್ ನಾಯ್ಕ್ ಬಂಧನ

0
380

2000ಕ್ಕೂ ಅಧಿಕ ಮಂದಿಗೆ ಟೋಪಿ ಹಾಕಿದ್ದ, ಮಹಾನ್ ವಂಚಕ ಸಚಿನ್ ನಾಯಕ್ ಹಾಗೂ ಆತನ ಇಬ್ಬರು ಪತ್ನಿಯರನ್ನು ಪೊಲೀಸರು ಬಂಧಿಸಿದ್ದಾರೆ. ರಾಜ್ಯಾದ್ಯಂತ ತೀವ್ರ ಚರ್ಚೆಗೀಡಾಗಿದ್ದ ಈ ಪ್ರಕರಣವನ್ನು ಸಿಐಡಿ ತನಿಖೆ ನಡೆಸಲು ಸಿಎಂ ಆದೇಶ ನೀಡಿದ್ದಾರೆ. ಇದೀಗ ಸಿಎಂ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಿರುವುದಾಗಿ ತಿಳಿಸಿದ್ದಾರೆ.

ಸಚಿನ್ ನಾಯಕ್ನ ವಂಚನೆ ಬಯಲಾಗಿದ್ದರು ಪೊಲೀಸರು ಈತನನ್ನು ಬಂಧಿಸಲು ಹಿಂದೆ ಮುಂದೆ ಯೋಚಿಸಿದ್ದರು. 2000ಕ್ಕೂ ಹೆಚ್ಚು ಮಂದಿಗೆ ಟೋಪಿ ಹಾಕಿದ್ದ ಸಚಿನ್ ನಾಯಕ್ 1000ಕೋಟಿಗೂ ಅಧಿಕ ಹಣವನ್ನು ವಂಚಿಸಿದ್ದ. ಹಣ ಕೇಳಲು ಹೋದವರ ವಿರುದ್ಧ ಗೂಂಡಾಗಿರಿಯನ್ನೂ ಮಾಡಿದ್ದ. ಇದೀಗ ಸಿಎಂ ಸಿದ್ಧರಾಮಯ್ಯ ಪ್ರಕರಣವನ್ನು ಸಿಐಡಿ ತನಿಖೆಗೆ ಆದೇಶಿಸಿದ್ದಾರೆ ಹಾಗೂ ಇದನ್ನು ತಮ್ಮ ಅಧಿಕೃತ ಟ್ವಿಟರ್ ಅಕೌಂಟ್’ನಲ್ಲಿ ಬರೆದುಕೊಂಡು ಖಚಿತಪಡಿಸಿದ್ದಾರೆ.

ಈ ಪ್ರಕರಣವನ್ನು ಮಡಿವಾಳ ಪೊಲೀಸರು ತನಿಖೆ ಮಾಡುತ್ತಿದ್ದರು. ಆದರೆ ಇವರ ತನಿಖೆ ಕುರಿತಾಗಿ ಎಲ್ಲರಲ್ಲೂ ಅನುಮಾನವಿತ್ತು ಆದರೀಗ ಈ ಪ್ರಕರಣ ಸಿಐಡಿ ಪಾಲಾಗಿದೆ. ಪ್ರಕರಣ ಸಂಬಂಧ ಪ್ರಮುಖ ಆರೋಪಿ ಸಚಿನ್ ನಾಯಕ್, ಈತನ ಇಬ್ಬರು ಪತ್ನಿಯರು ದಿಶಾ ಚೌಧರಿ ಮತ್ತು ಮಂದೀಪ್ ಕೌರ್ ಹಾಗೂ ಆತನ ಕಂಪೆನಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಇತರ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ

 Click this button or press Ctrl+G to toggle between Kannada and English