10ನೇ ಆವೃತ್ತಿಯನಿಂದ ರಾಹುಲ್ ಔಟ್

0
220

10ನೇ ಆವೃತ್ತಿಯ ಐಪಿಎಲ್‌ ಟೂರ್ನಿ ಪ್ರಾರಂಭಕ್ಕೂ ಮುನ್ನ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡಕ್ಕೆ ಮತ್ತೊಂದು ಆಘಾತ ಉಂಟಾಗಿದೆ. ಆರ್‌ಸಿಬಿ ತಂಡದ ಪ್ರಮುಖ ಬ್ಯಾಟ್ಸ್‌ಮನ್‌ ಆಗಿದ್ದ ಕನ್ನಡಿಗ ಕೆ.ಎಲ್‌. ರಾಹುಲ್‌ ಗಾಯದ ಸಮಸ್ಯೆಯಿಂದ ಟೂರ್ನಿಯಿಂದಲೇ ಹೊರ ಬಿದ್ದಿದ್ದಾರೆ.

24 ವರ್ಷದ ರಾಹುಲ್‌ ಪುಣೆಯಲ್ಲಿ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್‌ ಪಂದ್ಯದ ವೇಳೆಯಲ್ಲಿಯೇ ಭುಜದ ನೋವಿಗೆ ಒಳಗಾಗಿದ್ದರು. ಅದಾಗ್ಯೂ ಟೂರ್ನಿಯಲ್ಲಿ ರಾಹುಲ್‌ ಮುಂದುವರೆದ್ದರು. ಇದೀಗ ಚಿಕಿತ್ಸೆಗಾಗಿ ಲಂಡನ್‌ಗೆ ತೆರಳುತ್ತಿದ್ದು ಐಪಿಎಲ್‌ನಿಂದ ಹಿಂದೆ ಸರಿದಿದ್ದಾರೆ ಎಂದು ಕ್ರಿಕೆಟ್‌ ಇನ್ಫೋ ವರದಿ ಮಾಡಿದೆ.

ಇತ್ತೀಚೆಗಷ್ಟೇ ಮುಕ್ತಾಯವಾದ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ರಾಹುಲ್‌ ಆರು ಅರ್ಧಶತಕಗಳನ್ನು ಸಿಡಿಸಿದ್ದರು. ಜೊತೆಗೆ ಸರಣಿಯಲ್ಲಿ ಒಟ್ಟು 393 ರನ್‌ ಕೂಡಿ ಹಾಕಿದ್ದರು. ಈ ಮೂಲಕ ಸರಣಿಯಲ್ಲಿ ಅತ್ಯಧಿಕ ರನ್‌ ಗಳಿಸಿದವರ ಪಟ್ಟಿಯಲ್ಲಿ ಮೂರನೇ ಸ್ಥಾನ ಗಳಿಸಿದ್ದರು.

ಭುಜದ ನೋವಿಗೆ ಒಳಗಾಗಿರುವ ಆರ್‌ಸಿಬಿ ನಾಯಕ ವಿರಾಟ್‌ ಕೊಹ್ಲಿ ಸಹ ಆರಂಭಿಕ ಪಂದ್ಯಗಳಿಂದ ದೂರ ಉಳಿಯಲಿದ್ದಾರೆ. ಹಂಗಾಮಿ ನಾಯಕನಾಗಿ ಎಬಿಡಿ ವಿಲಿಯರ್ಸ್‌ ತಂಡವನ್ನು ಮುನ್ನಡೆಸಲಿದ್ದು, ಏ.5 ರಿಂದ ಟೂರ್ನಿ ಆರಂಭವಾಗಲಿದೆ.

 Click this button or press Ctrl+G to toggle between Kannada and English