ನಟಿ ರಾಖಿ ಸಾವಂತ್ ಬಂಧನ

0
274

ಬಾಲಿವುಡ್ ನಟಿ ರಾಖಿ ಸಾವಂತ್ ಅರೆಸ್ಟ್ ಆಗಿದ್ದಾರೆ. ಲೂಧಿಯಾನ ಪೊಲೀಸರು ಮುಂಬೈನಲ್ಲಿ ರಾಖಿ ಸಾವಂತ್ ಅವರನ್ನು ಬಂಧಿಸಿದ್ದಾರೆ. ವಾಲ್ಮೀಕಿ ಬಗ್ಗೆ, ವಾಲ್ಮೀಕಿ ಸಮುದಾಯದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ಕೇಸ್‌ನಲ್ಲಿ ರಾಖಿ ಸಾವಂತ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ರಾಖಿ ಸಾವಂತ್ ಕಳೆದ ವರ್ಷ ಟಿವಿ ಚಾನಲ್‌ವೊಂದರ ಕಾರ್ಯಕ್ರಮದಲ್ಲಿ ಹಿಂದುಗಳ ಮಹಾ ಗ್ರಂಥ ರಾಮಾಯಣದ ಸೃಷ್ಟಿಕರ್ತ ವಾಲ್ಮೀಕಿ, ವಾಲ್ಮೀಕಿ ಸಮುದಾಯದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದರು. ಇದರಿಂದ ಆ ಸಮುದಾಯದ ಜನತೆಯ ಭಾವನೆಗಳಿಗೆ ಧಕ್ಕೆ ಆಗಿದೆ ಎಂದು ರಾಖಿ ವಿರುದ್ಧ ಕೇಸ್ ದಾಖಲಾಗಿತ್ತು.

ಈ ಪ್ರಕರಣದ ವಿಚಾರಣೆಗೆ ಹಾಜರಾಗುವಂತೆ ಕೋರ್ಟ್ ಹಲವು ಬಾರಿ ಸಮನ್ಸ್  ಜಾರಿ ಮಾಡಿದ್ರೂ ರಾಖಿ ವಿಚಾರಣೆಗೆ ಹಾಜರಾಗಿರಲಿಲ್ಲ.  ಹೀಗಾಗಿ ಕಳೆದ ಮಾರ್ಚ್‌ 9 ರಂದು ನ್ಯಾಯಾಲಯ ರಾಖಿ ವಿರುದ್ಧ ಅರೆಸ್ಟ್ ವಾರೆಂಟ್ ಜಾರಿ ಮಾಡಿತ್ತು.

ಕೋರ್ಟ್ ಆದೇಶದ ಮೇರೆಗೆ ಲೂಧಿಯಾನ ಪೊಲೀಸರು ಅರೆಸ್ಟ್‌ ವಾರೆಂಟ್‌ನೊಂದಿಗೆ ಮುಂಬೈಗೆ ತೆರಳಿ ಇಂದು ರಾಖಿ ಸಾವಂತ್ ಅವರನ್ನು ಬಂಧಿಸಿದ್ದಾರೆ.

 Click this button or press Ctrl+G to toggle between Kannada and English