ಬೆಳಗಾವಿಯ ಯೋಧ ಹುತಾತ್ಮ

0
268

ಜಮ್ಮು ಕಾಶ್ಮೀರದಲ್ಲಿ ನಡೆದ ಉಗ್ರರ ದಾಳಿಯಲ್ಲಿ ರಾಜ್ಯದ ಯೋಧನೋರ್ವ ಹುತಾತ್ಮನಾಗಿದ್ದಾರೆ. ಕಿತ್ತೂರು ತಾಲೂಕು ಬೈಲೂರು ಗ್ರಾಮದ ಬಸಪ್ಪ ಹನಮಂತಪ್ಪ ಬಜಂತ್ರಿ ಹುತಾತ್ಮ ಯೋಧ.

ಬಸಪ್ಪ ಜಮ್ಮು ಕಾಶ್ಮೀರದ CRPF ಪಡೆಯಲ್ಲಿ ಕಳೆದ 19 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದರು. ಗಸ್ತು ಕರ್ತವ್ಯದಲ್ಲಿದ್ದಾಗ ಉಗ್ರರ ದಾಳಿಯಿಂದ ಹುತಾತ್ಮರಾಗಿದ್ದಾರೆ.

ಯೋಧನ ಪಾರ್ಥಿವ ಶರೀರ ಇಂದು ಜಮ್ಮು ಕಾಶ್ಮೀರದಿಂದ ವಿಮಾನದ ಮೂಲಕ ಗೋವಾಗೆ ಬಂದು ರಸ್ತೆ ಮಾರ್ಗವಾಗಿ ಯೋಧನ ಸ್ವಗ್ರಾಮ ಬೈಲೂರು ಗ್ರಾಮಕ್ಕೆ ಬರಲಿದೆ.

 Click this button or press Ctrl+G to toggle between Kannada and English