ರಾಜಸ್ಥಾನ ಸರ್ಕಾರಕ್ಕೆ ನೋಟಿಸ್ ನೀಡಿದ ರಾಷ್ಟ್ರೀಯ ಮಾನವ ಹಕ್ಕು ಆಯೋಗ

0
243

ನವದೆಹಲಿ: ರಾಜಸ್ಥಾನದ ಆಳ್ವಾರ್​ನಲ್ಲಿ ಗೋರಕ್ಷಕರ ನಡೆಸಿದ ದಾಳಿ ಕುರಿತು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ರಾಜಸ್ಥಾನ ಸರ್ಕಾರಕ್ಕೆ ನೋಟಿಸ್ ನೀಡಿದೆ. ಮಾಧ್ಯಮಗಳ ವರದಿಗಳನ್ನು ಆಧರಿಸಿ ಎನ್​ಎಚ್​ಆರ್​ಸಿ ಸ್ವಯಂಪ್ರೇರಿತವಾಗಿ ಕಾರ್ಯಪ್ರವೃತ್ತವಾಗಿದೆ.ಏಪ್ರಿಲ್ 1ರಂದು ಹರ್ಯಾಣದ ಡೈರಿ ಮಾಲೀಕ ಪೆಹ್ಲು ಖಾನ್ ಸೇರಿದಂತೆ ಒಟ್ಟು 5 ಜನರ ಮೇಲೆ ಸ್ವಯಂ ಘೋಷಿತ ಗೋರಕ್ಷಕರು ದಾಳಿ ನಡೆಸಿದ್ದರು.

ಚಿಕಿತ್ಸೆ ಫಲಕಾರಿಯಾಗದೆ, ಪೆಹ್ಲುಖಾನ್ ಸೋಮವಾರ ಸಾವಿಗೀಡಾಗಿದ್ದರು. ಅಲ್ಲದೇ, ದಾಳಿಗೊಳಗಾದವರಿಂದ ಒಂದು ಲಕ್ಷ ರೂ. ಮತ್ತು ಮೊಬೈಲ್​ಗಳನ್ನು ಕೂಡ ದುಷ್ಕರ್ಮಿಗಳು ದೋಚಿ ಪರಾರಿಯಾಗಿದ್ದರು. ರಾಜಸ್ಥಾನ ಪೊಲೀಸರು 3 ಅಪರಾಧಿಗಳನ್ನು ಬಂಧಿಸಿ, ಅವರ ವಿರುದ್ಧ ಎಫ್​ಐಆರ್ ದಾಖಲಿಸಿದ್ದಾರೆ.

ರಾಜಸ್ಥಾನ ಸರ್ಕಾರದ ಜೊತೆಗೆ ಕೇಂದ್ರ ಗೃಹ ಸಚಿವಾಲಯದ ಕಾರ್ಯದರ್ಶಿ ರಾಜೀವ್ ಮಹರ್ಷಿಯವರಿಗೆ ಕೂಡ ಎನ್​ಎಚ್​ಆರ್​ಸಿ ನೋಟಿಸ್ ನೀಡಿದೆ. ಹತ್ಯೆ ನಂತರ ಕೈಗೊಂಡಿರುವ ಅಥವಾ ಕೈಗೊಳ್ಳಲು ಉದ್ದೇಶಿಸಿರುವ ಕ್ರಮಗಳ ಕುರಿತು, ನಾಲ್ಕು ವಾರಗಳ ಒಳಗೆ ವರದಿ ನೀಡುವಂತೆ ಸೂಚಿಸಿದೆ. ಗುಜರಾತ್​​​ನ ಗಿರ್ ಸೋಮನಾರ್ಥ್ ಜಿಲ್ಲೆಯಲ್ಲಿ ಕಳೆದ ವರ್ಷದ ಜುಲೈನಲ್ಲಿ 4 ದಲಿತರ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಲಾಗಿತ್ತು.

 Click this button or press Ctrl+G to toggle between Kannada and English