ರಜಿನಿಕಾಂತ್ ರಾಜಕೀಯ ಪ್ರವೇಶದ ಪರ ನಡಿಗೆ

0
180

ಚೆನ್ನೈ: ಸಾವಿರಾರು ಜನ, ಅಭಿಮಾನಿಗಳು ಸೂಪರ್ ಸ್ಟಾರ್ ರಜಿನಿಕಾಂತ್ ಅವರ ರಾಜಕೀಯ ಪ್ರವೇಶವನ್ನು ಬೆಂಬಲಿಸಿ, ಚೆನ್ನೈನಲ್ಲಿ ನಡಿಗೆಗೆ ಮುಂದಾದರು. ನಿನ್ನೆ ತಮಿಳರ್​​ ಮುನ್ನೇತ್ರ ಪಡೈ ನಿನ್ನೆ ಕರ್ನಾಟಕ ಮೂಲದ ರಜಿನಿಕಾಂತ್ ತಮಿಳುನಾಡು ರಾಜಕೀಯ ಪ್ರವೇಶಿಸಬಾರದು ಎಂದು ಪ್ರತಿಭಟನೆ ನಡೆಸಿತ್ತು.

ಅಲ್ಲದೇ, ಅವರ ಮನೆಗೆ ಮುತ್ತಿಗೆ ಹಾಕಲು ಪ್ರಯತ್ನಿಸಿತ್ತು. ಕೊಯಮತ್ತೂರಿನಲ್ಲಿ ಅವರ ಪ್ರತಿಕೃತಿಯನ್ನು ಕೂಡ ದಹಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಅವರ ಸಕ್ರಿಯ ರಾಜಕೀಯ ಪ್ರವೇಶವನ್ನು ಇಂದು ಅವರ ಅಭಿಮಾನಿಗಳು ಬೆಂಬಲಿಸಿ ರಸ್ತೆಗಿಳಿದಿದ್ದಾರೆ.

ರಜಿನಿಕಾಂತ್ ಅವರಿಗೆ ಪಕ್ಷವನ್ನು ಸೇರುವಂತೆ ಬಿಜೆಪಿ ಮುಕ್ತ ಆಹ್ವಾನ ನೀಡಿದೆ. ಆದರೆ ಅವರು ಈ ಕರೆಗೆ ಓಗೊಟ್ಟಿಲ್ಲ. ಆದರೆ ಅವರು ಇದಕ್ಕೆ ಸಹಮತ ಅಥವಾ ನಿರಾಕರಣೆಯನ್ನೂ ವ್ಯಕ್ತಪಡಿಸಿಲ್ಲ. ಕಳೆದ ಸೋಮವಾರ ತಮಗೆ ರಾಜಕೀಯ ಆಕಾಂಕ್ಷೆ ಇಲ್ಲ ಎಂದಿದ್ದರು. ಆದರೆ, ದೇವರು ಬಯಸಿದಲ್ಲಿ ನಾನು ನಾಳೆ ರಾಜಕೀಯ ಪ್ರವೇಶಿಸಬಹುದು ಎಂದು ಕೂಡ ಹೇಳುವ ಮೂಲಕ ರಾಜಕೀಯ ಪ್ರವೇಶದ ಕುರಿತು ಸುಳಿವು ನೀಡಿದ್ದರು.

ಈ ನಡುವೆ ಅವರ ಸಂಭಾವ್ಯ ರಾಜಕೀಯ ಪ್ರವೇಶವನ್ನು ತಮಿಳುನಾಡಿನ ಮುಖ್ಯಧಾರೆಯಲ್ಲಿಲ್ಲದ ತಮಿಳರ್ ಮುನ್ನೇತ್ರ ಪಡೈ ವಿರೋಧಿಸಿತ್ತು. ಇವರ ವಿರುದ್ಧ ಇಂದು ರಜಿನಿ ಅಭಿಮಾನಿಗಳು ಬೀದಿಗಿಳಿದು, ರಜಿನಿಕಾಂತ್ ಸಕ್ರಿಯ ರಾಜಕೀಯ ಪ್ರವೇಶ ಮಾಡುವುದರ ಪರ ಪ್ರತಿಭಟನೆ ನಡೆಸುತ್ತಿದ್ದಾರೆ.

ಪ್ರದೀಪ್ ಮಾಲ್ಗುಡಿ ನ್ಯಾಷನಲ್ ಡೆಸ್ಕ್ ಸುದ್ದಿ ಟಿವಿ

 Click this button or press Ctrl+G to toggle between Kannada and English