ರಾಮ್ ಗೋಪಾಲ್ ವರ್ಮಾ ಟ್ವೀಟ್…

0
150

ರಾಮ್ ಗೋಪಾಲ್ ವರ್ಮಾ ಇಡೀ ಭಾರತ ಚಿತ್ರರಂಗದಲ್ಲಿಯೇ ದೊಡ್ಡ ಹೆಸರು ಮಾಡಿರುವ ನಿರ್ದೇಶಕ. ಪ್ರತಿಭೆಯ ಜೊತೆ ವಿವಾದಗಳಲ್ಲೂ ರಾಮ್ ಗೋಪಾಲ್ ವರ್ಮಾ ಹೆಸರುವಾಸಿ. ಟ್ವಿಟ್ಟರ್ ನಲ್ಲಿ ಸದಾ ಸಕ್ರಿಯರಾಗಿರುತ್ತಿದ್ದ ರಾಮ್ ಗೋಪಾಲ್ ವರ್ಮಾ, ತಮ್ಮ ಟ್ವೀಟ್ ಗಳ ಮೂಲಕ ಕಾಂಟ್ರವರ್ಸಿ ಕಿಂಗ್ ಅಂತಲೇ ‘ಕು’ಖ್ಯಾತಿ ಗಳಿಸಿದವರು. ತಮಗೆ ಬೇಡದ ವಿಷಯವಾಗಿದ್ದರೂ, ಅದಕ್ಕೆ ಮೂಗು ತೂರಿಸಿ ಟ್ವಿಟ್ಟರ್ ನಲ್ಲಿ ಮನಬಂದಂತೆ ಟ್ವೀಟ್ ಮಾಡುತ್ತಿದ್ದರು. ವರ್ಮಾ ಈಗ ಇದ್ದಕ್ಕಿದ್ದ ಹಾಗೆ ಕ್ವಿಟ್ಟರ್​​​ಗೆ ಗುಡ್​ ಬಾಯ್​ ಹೇಳಿದ್ದಾರೆ. ನಾನು ಟ್ವಿಟ್ಟರ್​ಗೆ ಗುಡ್​ ಬಾಯ್​ ಹೇಳುತ್ತಿದ್ದೇನೆ, ನನ್ನ ಎಲ್ಲಾ ಫಾಲೋಯರ್ಸ್​ಗಳಿಗೂ ಧನ್ಯವಾದ ಎಂದು ಅಂತ ಟ್ವೀಟ್​ ಮಾಡಿದ್ದಾರೆ.

 Click this button or press Ctrl+G to toggle between Kannada and English