ಸಾಲಬಾಧೆಗೆ ರೈತ ಆತ್ಮಹತ್ಯೆ…

0
258

ಸಾಲಭಾದೆ ತಾಳಲಾರದೆ ಹೊಲದಲ್ಲಿರೋ ಬೋರವೆಲ್ ಮೋಟರ್ ವಿದ್ಯುತ್ ಹಿಡಿದು ರೈತ ಆತ್ಮಹತ್ಯೆ ಮಾಡಿಕೊಂಡಿರೋ ಘಟನೆ ಕೊಪ್ಪಳದ ಮೋರನಾಳ ಗ್ರಾಮದಲ್ಲಿ ನಡೆದಿದೆ. 40 ವರ್ಷದ ಭರಮಪ್ಪ ಅನಬಿ ಆತ್ಮಹತ್ಯೆಗೆ ಶರಣಾದ ರೈತ.. ಅಂದಹಾಗೆ ಭರಮಪ್ಪ ಕೈಗಡ ಹಾಗೂ ರಾಷ್ಟ್ರೀಕೃತ ಬ್ಯಾಂಕ್​ನಲ್ಲಿ ಲಕ್ಷಾಂತರ ರೂಪಾಯಿ ಸಾಲ ಮಾಡಿದ್ದ. ಇತ್ತೀಚೆಗೆ ಇದ್ದ ಕುರಿಗಳನ್ನೆಲ್ಲಾ ಮಾರಾಟ ಮಾಡಿ ಹೇಗೋ 1 ಲಕ್ಷದ 20 ಸಾವಿರ ರೂಪಾಯಿ ಕೈಗಡ ಸಾಲವನ್ನ ತೀರಿಸಿದ್ದ. ಆದ್ರೆ ಇನ್ನು ರಾಷ್ಟ್ರೀಕೃತ ಬ್ಯಾಂಕ್​ನಲ್ಲಿ ಮಾಡಿದ್ದ ಸಾಲವನ್ನ ತೀರಿಸಲು ದಾರಿ ಕಾಣದ ರೈತ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

 Click this button or press Ctrl+G to toggle between Kannada and English