ಫೈನಲ್​​ ಪಂದ್ಯದಲ್ಲಿ ಆಂಗ್ಲರ ವಿರುದ್ಧ ಮಂಕಾದ ನಾಯಕಿ…

0
148

ಒಂದೇ ಒಂದು ವಿಶ್ವಕಪ್ ಗೆಲ್ಲಬೇಕು ಎಂಬ ಆಸೆ, ವಿಶ್ವಕಪ್​ನೊಂದಿಗೆ ವಿದಾಯ ಹೇಳೋ ತವಕ ಆದ್ರೇ, ಈ ಎರಡು ಕನಸು ಕೂಡ ಆ ಕ್ರಿಕೆಟರ್​​ ಲೈಫಲ್ಲಿ ನಡೆಯಲೇ ಇಲ್ಲ. ಫೈನಲ್​ವರೆಗೂ ಬಂದ್ರೂ ಪ್ರಶಸ್ತಿ ಎತ್ತಿ ಹಿಡಿಯೋ ಅವಕಾಶವನ್ನ ಕಳೆದುಕೊಂಡ್ರು.. ಅದು, ಆಕೆಯ 12 ವರ್ಷಗಳ ಕನಸು, ಆ ಒಂದು ಕನಸು ನನಸಾಗಿಸಿಕೊಂಡು ಕ್ರಿಕೆಟ್ ಬದುಕಿಗೆ ವಿದಾಯ ಹೇಳೋ ಉತ್ಸಾಹದಲ್ಲಿದ್ದ ಆಕೆಗೆ ಆಗಿದ್ದು ಮಾತ್ರ ನಿರಾಸೆ, ಫೈನಲ್ ವರೆಗೂ ಬಂದೂ ಪ್ರಶಸ್ತಿ ಹೊಸ್ತಿಲಲ್ಲಿ ಆಕೆ ಎಡವಿದ್ಲು. ಹೌದು.. ಆಕೆ ಬೇರ್ಯಾರು ಅಲ್ಲ, ಟೀಮ್ ಇಂಡಿಯಾದ ನಾಯಕಿ ಮಿಥಾಲಿ ರಾಜ್.

ಈ ಬಾರಿ ಇಂಗ್ಲೆಂಡ್​ನಲ್ಲಿ ನಡೆದ ಐಸಿಸಿ ಮಹಿಳಾ ವಿಶ್ವಕಪ್​ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲಲ್ಲೇಬೇಕು ಎಂಬ ಛಲವಿಟ್ಟುಕೊಂಡು ಇಂಗ್ಲೆಂಡ್​ಗೆ ತೆರಳಿದ್ದ ಭಾರತ ವನಿತೆಯರ ತಂಡ, ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ನೀಡಿತ್ತು. ಅಲ್ದೇ, ತಂಡದ ಆಟಗಾರ್ತಿಯರು ಕೂಡ ನಾಯಕಿ ಮಿಥಾಲಿ ಹಾಗೂ ಜೂಲನ್ ಗೋಸ್ವಾಮಿಗೆ ವಿಶ್ವಕಪ್ ಗಿಫ್ಟ್ ಕೊಡೋ ಭರವಸೆಯನ್ನ ಮೂಡಿಸಿದ್ರು. ಲೀಗ್​ನಲ್ಲಿನ ತಂಡದ ಪ್ರದರ್ಶನ ಕಂಡು ಮಿಥಾಲಿ ರಾಜ್ ಫುಲ್ ಖುಷ್ ಆಗಿದ್ರು. ಆರಂಭದಿಂದಲೂ ಪ್ರತಿ ಮ್ಯಾಚ್​ನಲ್ಲೂ ಕಪ್ ಗೆದ್ದಷ್ಟೇ ಸಂಭ್ರಮದಲ್ಲೇ ಮಿಥಾಲಿ ಇರ್ತಿದ್ರು. ಆಕೆಯ ಬಾಡಿ ಲಾಂಗ್ವೇಜ್ ಕೂಡ ಅಷ್ಟೇ ಲವಲವಿಕೆಯಿಂದ ಇತ್ತು.

ಫೈನಲ್ ಪಂದ್ಯದ ಕೊನೆಯ 5 ಓವರ್​ಗಳವರೆಗೂ ಮಿಥಾಲಿ ಯುದ್ದ ಗೆದ್ದ ಸಂಭ್ರಮದಲ್ಲಿದ್ರು. ಆದ್ರೆ, ಯಾವಾಗ, ಗೆಲುವಿನ ಸನಿಹದಲ್ಲಿದ್ದಾಗ ವಿಕೆಟ್ ಮೇಲೆ ವಿಕೆಟ್ ಕಳೆದುಕೊಂಡಿತೋ ತಂಡ, ಅವಾಗ ಕೊಂಚ ಮಿಥಾಲಿ ಮುಖದಲ್ಲೂ ಮೋಡ ಕವಿದ ವಾತಾವರಣ ಅವರಿಸಿತ್ತು. ಭಾರತ 8ವಿಕೆಟ್ ಕಳೆದುಕೊಂಡಾಗ ಗೆಲುವಿಗೆ ಇನ್ನು, 11 ರನ್​ಗಳ ಅಗತ್ಯವಿತ್ತು. ಇನ್ನೇನು ಗೆದ್ದೆ ಬಿಟ್ಟೆವು ಎಂಬುದ್ರಲ್ಲೇ, ದೀಪ್ತಿ ಶರ್ಮಾ ವಿಕೆಟ್ ಬಿತ್ತು. ಆಗ ಮಿಥಾಲಿಗೆ ನಾವೂ ಪಂದ್ಯ ಕೈಚೆಲ್ಲಿದೆವು ಎಂಬುದು ಕನ್ಫರ್ಮ್ ಆಗಿತ್ತು. ಅಂತೆಯೆ ಭಾರತ 9 ರನ್​ಗಳ ಹೀನಾಯ ಸೋಲು ಕಂಡಿತು.

ಲೀಗ್​ನಿಂದ ಫೈನಲ್​ವರೆಗೆ ಇದ್ದ ಮಿಥಾಲಿಯ ಲವಲವಿಕೆ ಕೆಲವೇ ಕ್ಷಣಗಳಲ್ಲಿ ನುಚ್ಚು ನೂರಾಯಿತು. 12 ವರ್ಷಗಳ ಕನಸು ಒಂದೆ ಸಮನೇ ಕಣ್ಣೀರಿನ ಮೂಲಕ ಮೈದಾನದಲ್ಲೇ ಹರಿಯಿತು… ಏನೇ ಆಗಲಿ ಫೈನಲ್​ವರೆಗಿನ ಮಿಥಾಲಿ ಪಡೆಯ ಅದ್ಭುತ ಬ್ಯಾಟಿಂಗ್ ಮಾತ್ರ ಕ್ರಿಕೆಟ್ ಅಭಿಮಾನಿಗಳ ಮನಗೆದ್ದಿದ್ದಂತೂ ಸುಳ್ಳಲ್ಲ.
ಶಿವಕುಮಾರ್, ಕೆ. ಸ್ಪೋರ್ಟ್ಸ್ ಬ್ಯೂರೋ ಸುದ್ದಿಟಿವಿ

 Click this button or press Ctrl+G to toggle between Kannada and English