ಡಿಎಸ್​​ಪಿ ಹುದ್ದೆಗೆ ಆಫರ್​ ಮಾಡಿದ ಹರಿಯಾಣ, ಪಂಜಾಬ್​..

0
199

ಐಸಿಸಿ ಮಹಿಳಾ ವಿಶ್ವಕಪ್​​ನಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ ಟೀಮ್ ಇಂಡಿಯಾ ಮಹಿಳೆಯರಿಗೆ ಈಗಾಗಲೇ ಅದ್ದೂರಿ ಸ್ವಾಗತ ಸಿಕ್ಕಾಗಿದೆ. ವನಿತೆಯರ ಸಾಧನೆಯನ್ನ ಗುರುತಿಸಿ ಬಹುಮಾನಗಳು ಹರಿದು ಬರುತ್ತಿವೆ. ಈಗಾಗಲೇ ಕೆಲ ರಾಜ್ಯಗಳು ತಮ್ಮ ರಾಜ್ಯದ ಸಾಧಕಿಯರಿಗೆ ಸರ್ಕಾರಿ ಹುದ್ದೆಯನ್ನ ಆಫರ್​ ಮಾಡಿದೆ.. ಇಂಗ್ಲೆಂಡ್​ನಲ್ಲಿ ನಡೆದ ಐಸಿಸಿ ಮಹಿಳಾ ವಿಶ್ವಕಪ್​ನಲ್ಲಿ ನಾರಿಮಣಿಯರು ವಿಶ್ವಕಪ್​ಗೆಲ್ಲದಿದ್ರೂ ಈಗಾಗಲೇ ಜಗದ ಮನ ಗೆದ್ದಿದ್ದಾಗಿದೆ. ಫೈನಲ್​ನಲ್ಲಿ ವಿರೋಚಿತ ಸೋಲನ್ನ ಕಂಡ ಮಹಿಳೆಯರು ಶುಭಾಶಯಗಳ ಮಹಾಪೂರದ ಜೊತೆಗೆ ಬಹುಮಾನಗಳು ಹರಿದು ಬರುತ್ತಿವೆ. ಈ ಲಿಸ್ಟ್​​ಗೆ ಈಗ ಸರ್ಕಾರಿ ಉದ್ಯೋಗವೂ ಸೇರಿದೆ.

ಬಿಸಿಸಿಐ ಫೈನಲ್​ಗೂ ಮುನ್ನವೇ ಟೀಮ್ ಇಂಡಿಯಾದ ಪ್ರತಿ ಆಟಗಾರ್ತಿಯರಿಗೂ ತಲಾ 50 ಲಕ್ಷ ರೂಪಾಯಿ ಘೋಷಿಸಿತ್ತು. ಇದ್ರ ಜೊತೆಗೆ ದೇಶದ ಸಾಧಕಿಯರನ್ನ ರಾಜ್ಯ ಸರ್ಕಾರಗಳು ಗುರುತಿಸುತ್ತಿವೆ. ಈಗಾಗಲೇ ಮಧ್ಯಪ್ರದೇಶ ಸರ್ಕಾರ ಇಡೀ ತಂಡಕ್ಕೆ 50 ಲಕ್ಷ ರೂಪಾಯಿ ಬಹುಮಾನ ಘೋಷಿಸಿದೆ. ಇದ್ರ ಜೊತೆಗೆ ತಮ್ಮ ತಮ್ಮ ರಾಜ್ಯದ ಸಾಧಕಿಯರನ್ನ ಗೌರವಿಸಲು ಜಾಬ್​ ಆಫರ್ ಮಾಡುತ್ತಿವೆ.ವಿಶ್ವಕಪ್​ನ ಸೆಮಿಫೈನಲ್​ ಆಸ್ಟ್ರೇಲಿಯಾ ವಿರುದ್ಧ ಅಜೇಯ 171ರನ್ ಸಿಡಿಸಿದ ಹರ್ಮನ್​ಪ್ರೀತ್ ಕೌರ್​​ಗೆ ಪಂಜಾಬ್​​ ಸರ್ಕಾರ ಈಗಾಗಲೇ ಡಿಎಸ್​ಪಿ ಹುದ್ದೆಯನ್ನ ಆಫರ್ ಮಾಡಿದೆ. ಇದೇ ರೀತಿಯಲ್ಲಿ ಹರಿಯಾಣ ಸರ್ಕಾರವೂ ಸುಶ್ಮಾಗೆ ಡಿಎಸ್​ಪಿ ಹುದ್ದೆ ನೀಡುವುದಾಗಿ ಘೋಷಿಸಿದೆ. ಇನ್ನೂ ಕೆಲ ರಾಜ್ಯಗಳು ತಮ್ಮ ರಾಜ್ಯದ ಆಟಗಾರ್ತಿಯರಿಗೆ ಜಾಬ್ ಆಫರ್​ ನೀಡಲು ಸಿದ್ದತೆ ನಡೆಸಿವೆ.

ಆದ್ರೆ ಈ ಸರ್ಕಾರಿ ಹುದ್ದೆ ಪಡೆಯೋಕೆ ಮೊದಲೇ ಟೀಮ್ ಇಂಡಿಯಾದ ಬಹುತೇಕ ವನಿತೆಯರು ಸರ್ಕಾರಿ ಹುದ್ದೆಯಲ್ಲಿದ್ದಾರೆ…ಅಂದ್ರೆ ನಂಬಲೇಬೇಕು.. ಅವರ ಲಿಸ್ಟ್ ಇಂತಿದೆ

ಆಟಗಾರ್ತಿಯರು ಸರ್ಕಾರಿ ಹುದ್ದೆ
ಮಿಥಾಲಿ ರಾಜ್​​ ರೈಲ್ವೇ ಅಧಿಕಾರಿ
ಹರ್ಮನ್​ ಪ್ರೀತ್ ಕೌರ್​​ ವೆಸ್ಟ್ರನ್​ ರೈಲ್ವೇ ಅಧಿಕಾರಿ
ಶಿಖಾ ಪಾಂಡೆ ಏರ್​ಫೊರ್ಸ್​​ ಅಧಿಕಾರಿ
ಏಕ್ತಾ ಬಿಷ್ತ್​​ ರೈಲ್ವೇಯಲ್ಲಿ ನೌಕರಿ
ವೇದಾ ಕೃಷ್ಣಮೂರ್ತಿ ರೈಲ್ವೇಯಲ್ಲಿ ನೌಕರಿ
ಮೋನಾ ಮೆಶ್ರಮ್​ ರೈಲ್ವೇಯಲ್ಲಿ ನೌಕರಿ
ಪೂನಂ ಯಾದವ್​ ರೈಲ್ವೇಯಲ್ಲಿ ನೌಕರಿ
ರಾಜೇಶ್ವರಿ ಗಾಯಕ್ವಾಡ್ ​​ ರೈಲ್ವೇಯಲ್ಲಿ ನೌಕರಿ

ಅಧಿಕಾರಿಯಾಗಿದ್ದಾರೆ. ಇನ್ನು ಬೌಲರ್ ಶಿಖಾ ಪಾಂಡೆ ಏರ್​ಫೋರ್ಸ್​​​ ಹುದ್ದೆಯಲ್ಲಿದ್ದು, ಏಕ್ಯಾ ಬಿಷ್ತ್​, ವೇದಾ ಕೃಷ್ಣಮೂರ್ತಿ, ಮೋನಾ ಮೆಶ್ರಮ್, ಪೂನಂ ಯಾದವ್ ಹಾಗೂ ರಾಜೇಶ್ವರಿ ಗಾಯಕ್ವಾಡ್​ ರೈಲ್ವೇಯಲ್ಲಿ ನೌಕರಿ ಹೊಂದಿದ್ದಾರೆ. ಈ ಹುದ್ದೆಯ ಜೊತೆಗೆ ಈಗ ರಾಜ್ಯ ಸರ್ಕಾರಗಳಿಂದಲೂ ಇವರಿಗೆ ಆಫರ್​ ಬರತೊಡಗಿದೆ. ಈ ಮೂಲಕ ಭಾರತದ ವನಿತೆಯರ ಸಾಧನೆಯನ್ನ ಗುರುತಿಸುತ್ತಿರುವ ಪ್ರಕ್ರಿಯೆಗೆ ಮತ್ತಷ್ಟು ಚುರುಕು ಪಡೆದಿದೆ.

ಸ್ಪೋರ್ಟ್ಸ್​​ ಬ್ಯೂರೋ, ಸುದ್ದಿ ಟಿವಿ

 Click this button or press Ctrl+G to toggle between Kannada and English