ಪ್ರದೀಪ್ ಆಟಕ್ಕೆ ಕಂಗಾಲಾದ ಬೆಂಗಳೂರು ಬುಲ್ಸ್..!

0
174

ಐದನೇ ಆವೃತ್ತಿಯ ಪ್ರೋ ಕಬಡ್ಡಿ ಲೀಗ್​ನ 17ನೇ ಪಂದ್ಯದಲ್ಲಿ ಬಲಿಷ್ಠ ಬೆಂಗಳೂರು ಬುಲ್ಸ್ ಹಾಗೂ ಪಾಟ್ನಾ ಪೈರೇಟ್ಸ್ ತಂಡಗಳು ಮುಖಾ-ಮುಖಿಯಾಗಿದ್ವು. ಆದ್ರೆ, 3ಬಾರಿ ಆಲೌಟ್ ಆದ ಬೆಂಗಳೂರು ಬುಲ್ಸ್ ತಂಡ ಅಭಿಮಾನಿಗಳಿಗೆ ನಿರಾಸೆ ಮೂಡಿಸಿತು. ಇನ್ನು, ನಾಯಕನ ಆಟವಾಡಿದ ಪಾಟ್ನಾ ಪೈರೇಟ್ಸ್​ನ ಸ್ಟಾರ್ ರೈಡರ್ ಪ್ರದೀಪ್ ನರ್ವಾಲ್ ಅಭಿಮಾನಿಗಳನ್ನ ರಂಜಿಸಿದ್ರು.ನಿನ್ನೆ ಭಾರೀ ಜಿದ್ದಾಜಿದ್ದಿನ ಕೂಡಿದ ಪ್ರೋ ಕಬಡ್ಡಿ ಲೀಗ್​ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ತಂಡ ಪಾಟ್ನಾ ಪೈರೇಟ್ಸ್​ಗೆ ಶಾಕ್ ಕೊಡುತ್ತೆ ಅಂತಾ ಎಲ್ಲರೂ ಲೆಕ್ಕಾಚಾರ ಹಾಕಿಕೊಂಡಿದ್ರು. ಆದ್ರೆ, ಲೀಗ್​ನ 17ನೇ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ತಂಡ 14 ಅಂಕಗಳ ಅಂತರದಿಂದ ಸೋಲೋಪ್ಪಿಕೊಂಡಿತು.

ಪಂದ್ಯದ ಆರಂಭದ ಮೊದಲ 5 ನಿಮಿಷದಲ್ಲಿ 3 ಅಂಕ ಕಲೆಹಾಕಿ ಮುಂದಿದ್ದ ರೋಹಿತ್ ಪಡೆ, ಎದುರಾಳಿ ತಂಡದ ಮೇಲೆ ಹಿಡಿತ ಸಾಧಿಸೋ ಸೂಚನೆ ನೀಡಿತು. ಆದ್ರೆ, ಪಾಟ್ನಾ ಪೈರೇಟ್ಸ್ ತಂಡದ ನಾಯಕ ಸ್ಟಾರ್ ರೈಡರ್ ಪ್ರದೀಪ್ ನರ್ವಾಲ್ ಬುಲ್ಸ್ ಮೇಲೆ ರೈಡಿಂಗ್​ನಲ್ಲಿ ಅಬ್ಬರಿಸಿದ್ರು. ಆಕರ್ಷಕ ರೈಡಿಂಗ್​ಗಳ ಮೂಲಕ ಅಂಕಗಳ ಮೇಲೆ ಅಂಕ ಕಲೆಹಾಕುತ್ತ ಸ್ಕೋರ್ ಹೆಚ್ಚಿಸಿಕೊಳ್ತಿದ್ದ ಪಾಟ್ನಾ ಬುಲ್ಸ್ ತಂಡವನ್ನ ಮೊದಲಾವಧಿಯಲ್ಲಿ 2 ಬಾರಿ ಅಲೌಟ್ ಮಾಡಿತು.ಮೊದಲಾವಧಿಯಲ್ಲಿ 11-22 ಅಂಕಗಳ ಅಂತರದಿಂದ ಮುಂದಿದ್ದ ಪಾಟ್ನಾ ಪೈರೇಟ್ಸ್ 2ನೇ ಅವಧಿಯಲ್ಲೂ ತನ್ನ ರೈಡಿಂಗ್ ದಾಳಿಯನ್ನ ಮುಂದುವರೆಸಿತು. ಫಸ್ಟ್ ಹಾಫ್​ನಲ್ಲಿ ಮಿಂಚಿದ್ದ ಪ್ರದೀಪ್ ರೈಡಿಂಗ್​ನಲ್ಲಿ 10 ಅಂಕಗಳನ್ನ ಕಲೆಹಾಕಿದ್ರು. 2ನೇ ರೌಂಡ್​ನಲ್ಲೂ ಪಾಟ್ನಾ ದಾಳಿಗೆ ರೋಹಿತ್ ಪಡೆ ಪುಟಿದೇಳಲೆ ಇಲ್ಲ, ಪದೇ-ಪದೇ ಮಾಡಿದ ತಪ್ಪನ್ನ ಮಾಡಿದ ಬುಲ್ಸ್ ರೈಡಿಂಗ್​ನಲ್ಲೂ ಖದರ್ ಇರಲಿಲ್ಲ.

ಅಂತಿಮವಾಗಿ ಬೆಂಗಳೂರು ಬುಲ್ಸ್14 ಅಂಕಗಳ ಅಂತರದಿಂದ 32-46 ರಿಂದ ಪರಾಭವಗೊಂಡಿತು. ಈ ಮೂಲಕ ರೋಹಿತ್ ಪಡೆ ಟೂರ್ನಿಯಲ್ಲಿ ಸತತ 2ನೇ ಸೋಲು ಕಾಣೋ ಮೂಲಕ ನೆರೆದಿದ್ದ ಅಭಿಮಾನಿಗಳಿಗೆ ನಿರಾಸೆ ಮೂಡಿಸಿತು. ಪಂದ್ಯದಲ್ಲಿ ಮಿಂಚಿದ ಪ್ರದೀಪ್ ನರ್ವಾಲ್ 15 ಅಂಕಗಳನ್ನ ಕಲೆಹಾಕಿ, ನೆರೆದಿದ್ದ ಪ್ರೇಕ್ಷಕರನ್ನ ರಂಜಿಸಿದ್ರು. ಅಲ್ದೇ ಹ್ಯಾಟ್ರಿಕ್ ಗೆಲುವು ದಾಖಲಿಸಿದ ಪಾಟ್ನಾ ಪೈರೇಟ್ಸ್ ಬಿ ಗುಂಪಿನ ಅಂಕ ಪಟ್ಟಿಯಲ್ಲಿ ಆಗ್ರಸ್ಥಾನ ಕಾಯ್ದುಕೊಂಡಿತು.ಇದಕ್ಕೂ ಮೊದಲು ನಡೆದ 16ನೇ ಪಂದ್ಯದಲ್ಲಿ ಬೆಂಗಾಲ್ ವಾರಿಯರ್ಸ್ ಕೂಡ ಯುಪಿ ಯೋಧಾ ವಿರುದ್ಧ ಭರ್ಜರಿ ಗೆಲುವು ದಾಖಲಿಸಿತು. 40-20 ಅಂಕಗಳ ಅಂತರದಿಂದ ಯುಪಿ ತಂಡವನ್ನ ಮಣಿಸಿ ಗೆಲುವಿನ ಕೇಕೆ ಹಾಕಿತು.

ಆರಂಭದಿಂದಲೇ ಯುಪಿ ಯೋಧಾ ಮೇಲೆ ಸವಾರಿ ಮಾಡಿದ ಬೆಂಗಾಲ್ ವಾರಿಯರ್ಸ್ ಆಕ್ರಮಣಕಾರಿ ಆಟವಾಡಿತು. ಎಲ್ಲೂ ಕೂಡ ಎದುರಾಳಿ ತಂಡಕ್ಕೆ ಪಾಯಿಂಟ್ ಬಿಟ್ಟುಕೊಡುವಲ್ಲಿ ಎಡವಲಿಲ್ಲ. ಹೀಗಾಗಿ ಬೆಂಗಾಲ್ ವಾರಿಯರ್ಸ್ ಕೂಡ ಆಡಿದ 2 ಪಂದ್ಯಗಳಲ್ಲೂ ಗೆಲುವು ದಾಖಲಿಸಿ ಅಜೇಯ ಗೆಲುವಿನ ಓಟವನ್ನ ಮುಂದುವರಸಿದೆ.ಒಟ್ನಲ್ಲಿ ಸಂಡೇ ನಡೆದ ಈ ಎರಡು ಪ್ರೋ ಕಬಡ್ಡಿ ಪಂದ್ಯಗಳು ಅಭಿಮಾನಿಗಳಿಗೆ ಸಖತ್ ಮನರಂಜನೆ ನೀಡಿದಂತೂ ಸುಳ್ಳಲ್ಲ…………
ಸ್ಪೋರ್ಟ್ಸ್ ಬ್ಯೂರೋ ಸುದ್ದಿಟಿವಿ

 Click this button or press Ctrl+G to toggle between Kannada and English