ಅಮೆರಿಕವನ್ನು ನಡುಗಿಸಿದ್ದ ಕ್ರಾಂತಿಕಾರಿ ಫಿಡೆಲ್ ಕ್ಯಾಸ್ಟ್ರೋ

0
173

ಅಮೆರಿಕದಿಂದ ಕೇವಲ 90 ಮೈಲಿ ದೂರದಲ್ಲಿದ್ದುಕೊಂಡು, ಅಮೆರಿಕವನ್ನು ದಿಟ್ಟವಾಗಿ ಎದುರಿಸಿದ ಸಾಧನೆ ಮೆರೆದದ್ದು ಫಿಡೆಲ್ ಕ್ಯಾಸ್ಟ್ರೋ. ಜಗತ್ತಿನ ದೊಡ್ಡಣ್ಣನ ಎದೆಯಲ್ಲಿ 50 ವರ್ಷಗಳ ಕಾಲ ನಡುಕ ಹುಟ್ಟಿಸಿದ್ದ ಸಮಾಜವಾದಿ ನಾಯಕ ಕ್ಯಾಸ್ಟ್ರೋ ಅಮೆರಿಕವನ್ನು ಎದುರಿಸಿದ್ದು ಹೇಗೆ? ಅಮೆರಿಕ ಕ್ಯಾಸ್ಟ್ರೋ ಅವ್ರನ್ನು ಹಣಿಯೋಕೆ ಹೂಡಿದ ತಂತ್ರಗಳೇನು? ಅಮೆರಿಕದ ನಿರಂತರ ಕಿರುಕುಳದ ನಡುವೆ ಕ್ಯಾಸ್ಟ್ರೋ ಕ್ಯೂಬಾದಲ್ಲಿ ಮಾಡಿದ್ದೇನು ಅನ್ನೋದು ರೋಮಾಂಚಕ ಪಯಣ.
1959ರಿಂದ 1976ರವರೆಗೆ ಪ್ರಧಾನಮಂತ್ರಿ
1976ರಿಂದ 2008ರವರೆಗೆ ಅಧ್ಯಕ್ಷ
ಅನಾರೋಗ್ಯದ ಕಾರಣದಿಂದ 2008ರಲ್ಲಿ ಕ್ಯೂಬಾ ಅಧ್ಯಕ್ಷ ಹುದ್ದೆ ತೊರೆದ ಕ್ಯಾಸ್ಟ್ರೋ
ಸೋದರ ರೌಲ್‌ ಕಾಸ್ಟ್ರೊಗೆ ಅಧಿಕಾರ ಚುಕ್ಕಾಣಿ ಹಸ್ತಾಂತರ
ಆಗಸ್ಟ್​ 13ರಂದು ತಮ್ಮ 90ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ರು
ತಮ್ಮ ಕಡೆಯ ಹುಟ್ಟು ಹಬ್ಬಕ್ಕೂ ಮುನ್ನ, ಇನ್ನು ಕೆಲವೇ ಕೆಲವು ದಿನಗಳಲ್ಲಿ ನನಗೆ 90 ವರ್ಷ ಆಗುತ್ತೆ. ಜೀವನದಲ್ಲಿ ಇಷ್ಟು ವರ್ಷಗಳನ್ನು ನಾನು ನೋಡ್ತೇನೆ ಅಂತ ಭಾವಿಸಿರ್ಲಿಲ್ಲ. ಈ ದೇಶವನ್ನು ಚೆನ್ನಾಗಿ ನೋಡಿಕೊಳ್ಳಿ ಅಂತ ಕೊನೆಯ ಸಂದೇಶವನ್ನು ದೇಶದ ಜನತೆಗೆ ನೀಡಿದ್ರು ಫಿಡೆಲ್ ಕ್ಯಾಸ್ಟ್ರೋ.
ಕ್ಯೂಬಾದ ಇತಿಹಾಸದ ಪುಟದಲ್ಲಿ ಮುಕ್ಕಾಲು ಭಾಗವನ್ನು ಫಿಡೆಲ್ ಕ್ಯಾಸ್ಟ್ರೋ ಅವ್ರೇ ವ್ಯಾಪಿಸಿಕೊಂಡಿದ್ದಾರೆ. ಅವ್ರನ್ನು ಹೊರತಪಡಿಸಿ ಕ್ಯೂಬಾದ ಇತಿಹಾಸವನ್ನು ರಚಿಸೋದಕ್ಕೂ ಸಾಧ್ಯವಿಲ್ಲ. ಅಂತ ಮಹತ್ವದ ಹೆಜ್ಜೆಗಳನ್ನು ಕ್ಯೂಬಾದಲ್ಲಿ ಕ್ಯಾಸ್ಟ್ರೋ ಇಟ್ಟಿದ್ದಾರೆ. ಉದ್ದನೆಯ ತೋಳು, ಎರಡು ಜೇಬಿನ ಮಿಲಿಟರಿ ದಿರಿಸಿನಲ್ಲಿ ರಾರಾಜಿಸ್ತಿದ್ದ ಆಜಾನುಬಾಹುವಿನ ಕೈಯಲ್ಲಿ ಸಿಗಾರ್ ಇರ್ತಿತ್ತು. ಇನ್ನು ಗಡ್ಡಧಾರಿ ಕ್ಯಾಸ್ಟ್ರೋ ಸಮವಸ್ತ್ರ ತೊಟ್ಟ, ಸಿಗಾರ್ ಎಳೆಯುತ್ತಿರುವ ಗಡ್ಡದಾರಿ ಕ್ಯಾಸ್ಟ್ರೊ ಮುಖವೇ ಕ್ಯೂಬಾದ ಇತಿಹಾಸದಲ್ಲಿ ಎದ್ದು ಕಾಣುತ್ತೆ.
ಸ್ಪ್ಯಾನಿಷ್- ಅಮೆರಿಕನ್ ಯುದ್ಧದ ಬಳಿಕ ಕ್ಯೂಬಾ ಸ್ವತಂತ್ರವಾಗಿತ್ತು. ಆದ್ರೆ, ಅದ್ರ ಮೇಲಿನ ಹಿಡಿತವನ್ನು ಅಮೆರಿಕ ಬಿಟ್ಟುಕೊಡೋಕೆ ಸಿದ್ಧವಾಗಿರ್ಲಿಲ್ಲ. ಇನ್ನು ಕ್ಯೂಬಾದಿಂದ ತನ್ನ ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳೋಕೆ ಕೂಡ ಷರತ್ತುಗಳನ್ನು ವಿಧಿಸಿತ್ತು. ಈ ಮೂಲಕ ಪರೋಕ್ಷವಾಗಿ ಕ್ಯೂಬಾ ಮೇಲಿನ ತನ್ನ ಹಿಡಿತವನ್ನು ಕಳೆದುಕೊಳ್ಳೋಕೆ ಇಷ್ಟ್ರವಿಲ್ಲ ಅನ್ನೋದನ್ನು ಅಮೆರಿಕ ಹೇಳಿತ್ತು.
1933ರಲ್ಲಿ ಗೆರಾರ್ಡೋ ಮಚ್ಯಾಡೋ ಆಡಳಿತವಿತ್ತು. ಅವ್ರ ವಿರುದ್ಧ ವಿರುದ್ಧ ಬಂಡಾಯ ಎದ್ದ ಮಿಲಿಟರಿ ನಾಯಕ ಫುಲ್ಗೆನ್ಸಿಯೋ ಬತಿಸ್ತಾ, ಕ್ರಾಂತಿಯ ಮಾತುಗಳನ್ನಾಡಿ ಅಧಿಕಾರ ಹಿಡಿಯೋದ್ರಲ್ಲಿ ಸಫಲವಾದ್ರು. ಆದ್ರೆ, ಕೆಲವೇ ವರ್ಷಗಳಲ್ಲಿ ಬತಿಸ್ತಾ ಸ್ವತಃ ಸರ್ವಾಧಿಕಾರಿಯಾಗಿದ ಬದಲಾದ್ರು. ಇದ್ರಿಂದ ಆಡಳಿತ ಯಂತ್ರ ಕುಸಿದು ಹೋಗಿತ್ತು. ಇನ್ನು ಭ್ರಷ್ಟಾಚಾರದ ಕಳೆ ಕೂಡ ಹೆಚ್ಚಾಗಿತ್ತು.
ಬತಿಸ್ತಾ ಆಡಳಿತದ ವಿರುದ್ಧ ಕ್ರಾಂತಿಯ ಕಹಳೆ ಊದಿದ್ದು ಫಿಡೆಲ್ ಕ್ಯಾಸ್ಟ್ರೋ, ಚೆಗೆವಾರ ಮತ್ತು ರೌಲ್ ಕ್ಯಾಸ್ಟ್ರೊ. ಈ ಯುವಕರ ಗುಂಪು 1953ರ ಜುಲೈನಲ್ಲಿ ಸೇನಾ ಬಂಡಾಯಕ್ಕೆ ಪ್ರಯತ್ತಿಸ್ತು. ಆದ್ರೆ, ವಿಫಲವಾದ್ರು. ಇದ್ರಿಂದಾಗಿ ಫಿಡೆಲ್ 15 ವರ್ಷದ ಸೆರೆಮನೆವಾಸದ ಶಿಕ್ಷೆ ಸಿಕ್ತು. ಆದ್ರೆ, 2 ವರ್ಷದ ನಂತ್ರ ಕ್ಷಮಾದಾನ ನೀಡಿ ಬಿಡುಗಡೆ ಮಾಡಲಾಗಿತ್ತು. ಬಿಡುಗಡೆಯಾದ ನಂತರ ಕ್ಯಾಸ್ಟ್ರೊ ಅಮೆರಿಕಕ್ಕೆ ತೆರಳಿದ್ರು. ಅಲ್ಲಿಂದ ಮೆಕ್ಸಿಕೊಗೆ ಸಾಗಿದ್ರು. ಆ ಅವಧಿಯಲ್ಲೇ ಸರ್ವಾಧಿಕಾರಿ ಬತಿಸ್ತಾ ವಿರುದ್ಧ ಗೆರಿಲ್ಲಾ ಹೋರಾಟಕ್ಕೆ ರೂಪರೇಷೆಗಳು ಸಿದ್ಧವಾದ್ವು.
1956ರಲ್ಲಿ ಕ್ಯಾಸ್ಟ್ರೊ ನೇತೃತ್ವದಲ್ಲಿ ಸಣ್ಣ ಕ್ರಾಂತಿಕಾರಿಗಳ ಗುಂಪು ಕ್ಯೂಬಾಕ್ಕೆ ಬಂದಿಳಿದಿತ್ತು. ಅಲ್ಲಿಂದ ಬೆಟ್ಟಗುಡ್ಡಗಳಲ್ಲಿ ಅವಿತುಕೊಂಡು,ಅಲ್ಲಿಂದ್ಲೇ ಬತಿಸ್ತಾ ವಿರುದ್ಧ ಜನಾಭಿಪ್ರಾಯ ರೂಪಿಸಿದ್ರು. ಇನ್ನು ಯುವಕರನ್ನು ಚಳವಳಿಗೆ ಸೆಳೆಯೋ ಕೆಲಸವನ್ನೂ ಮಾಡಿದ್ರು. ಸಶಸ್ತ್ರ ಬಂಡಾಯಕ್ಕೂ ಸಜ್ಜಾದ್ರು.
ಈ ನಡುವೆ ಬತಿಸ್ತಾ ಸರ್ವಾಧಿಕಾರಿ ಧೋರಣೆಯಿಂದ ಬೇಸತ್ತಿದ್ದ ನಾಗರಿಕರು, ಕ್ಯಾಸ್ಟ್ರೋ ಅವ್ರಿಗೆ ಸಂಪೂರಣ ಬೆಂಬಲ ನೀಡಿದ್ರು.ಯುವಕರು, ವಿದ್ಯಾರ್ಥಿಗಳಿಗೆ ಕ್ಯಾಸ್ಟ್ರೋ ಹೊಸ ನಾಯಕನಾಗಿ ಕಾಣಿಸಿಕೊಂಡ್ರು. 80 ಜನರಿಂದ ಆರಂಭವಾದ ಕ್ಯಾಸ್ಟ್ರೋ ಹೋರಾಟಕ್ಕೆ, 1958ರ ಹೊತ್ತಿಗೆ ಭಾರೀ ಜನಸಮೂಹವೇ ಸೇರಿಕೊಂಡು, ಬತಿಸ್ತಾ ವಿರುದ್ಧ ಬೀದಿಗಿಳೀತು. ಈ ಬಂಡಾಯದಿಂದಾಗಿ ದೇಶದಲ್ಲಿ ಅರಾಜಕತೆ ಸೃಷ್ಟಿಯಾಯ್ತು. ತನ್ನ ಸ್ವಯಂಕೃತ ಅಪರಾಧದಿಂದಾಗಿ ಬತಿಸ್ತಾ, 1959ರ ಜನವರಿ 1ರಂದು ಅಧಿಕಾರ ತೊರೆದು ಅಮೆರಿಕಾದಲ್ಲಿ ಆಶ್ರಯ ಪಡೀಬೇಕಾಯ್ತು. ಬತಿಸ್ತಾ ನಂತರ ಕ್ಯೂಬಾದಲ್ಲಿ ಅಧಿಕಾರ ವಹಿಸಿಕೊಂಡ ಸಂದರ್ಭದಲ್ಲಿ ಕ್ಯಾಸ್ಟ್ರೋ ಅವ್ರಿಗೆ ಕೇವಲ 33 ವರ್ಷ.
ಮಾರ್ಕ್ಸ್ ಮತ್ತು ಲೆನಿನ್ ಮಾರ್ಗದಲ್ಲಿ ನಡೆಯುವುದಾಗಿ ಘೋಷಣೆ
ಆರ್ಥಿಕತೆಯ ಮೇಲಿದ್ದ ಅಮೆರಿಕದ ಹಿಡಿತ ಸಡಿಲಿಸಿದ ಕ್ಯಾಸ್ಟ್ರೋ
ಅಮೆರಿಕನ್ನರ ಒಡೆತನದ ಎಲ್ಲ ಉದ್ದಿಮೆಗಳ ರಾಷ್ಟ್ರೀಕರಣ
ಅಮೆರಿಕದ ಭೂಮಾಲೀಕರನ್ನು ದೇಶದಿಂದ ಹೊರಹಾಕಿದ ಕ್ರಾಂತಿಕಾರಿ
ಉಳುವವನಿಗೆ ಭೂಮಿ ಸಿಗುವಂತೆ ಮಾಡಲಾಯ್ತು
ಉದ್ದಿಮೆಗಳ ಲಾಭಾಂಶದಲ್ಲಿ ಶೇ. 30ರಷ್ಟನ್ನು ನೌಕರರಿಗೆ ಹಂಚಬೇಕೆಂಬ ನಿಯಮ ಜಾರಿಗೆ
ಕ್ಯೂಬಾದಲ್ಲಿ ಎದುರಾದ ಇಂತಹ ಸುಧಾರಣ ಕ್ರಮಗಳಿಂದ ಸ್ವದೇಶೀಯರೂ ಆತಂಕಿತರಾಗಿದ್ರು. ನೆರೆಯಲ್ಲಿರೋ ಅಮೆರಿಕ ದೇಶದ ವಿರುದ್ಧ ತೊಡೆ ತಟ್ಟಿ ಚಿಕ್ಕ ದೇಶ ಉಳಿಯೋದ್ಹೇಗೆ? ಅನ್ನೋ ಅನುಮಾನ ಎಲ್ರಲ್ಲೂ ಮೂಡಿತ್ತು. ಇದ್ರಿಂದಾಗಿ ವೈದ್ಯರು, ತಂತ್ರಜ್ಞರು, ವಿವಿಧ ಕ್ಷೇತ್ರಗಳ ತಜ್ಞರು ರಾತ್ರೋರಾತ್ರಿ ದೇಶ ತೊರೆದು ಅಮೆರಿಕ ಸೇರಿಕೊಂಡ್ರು.
ಕ್ಯೂಬಾದಲ್ಲಿ ಎದುರಾದ ಇಂತಹ ಸುಧಾರಣ ಕ್ರಮಗಳಿಂದ ಸ್ವದೇಶೀಯರೂ ಆತಂಕಿತರಾಗಿದ್ರು. ನೆರೆಯಲ್ಲಿರೋ ಅಮೆರಿಕ ದೇಶದ ವಿರುದ್ಧ ತೊಡೆ ತಟ್ಟಿ ಚಿಕ್ಕ ದೇಶ ಉಳಿಯೋದ್ಹೇಗೆ? ಅನ್ನೋ ಅನುಮಾನ ಎಲ್ರಲ್ಲೂ ಮೂಡಿತ್ತು. ಇದ್ರಿಂದಾಗಿ ವೈದ್ಯರು, ತಂತ್ರಜ್ಞರು, ವಿವಿಧ ಕ್ಷೇತ್ರಗಳ ತಜ್ಞರು ರಾತ್ರೋರಾತ್ರಿ ದೇಶ ತೊರೆದು ಅಮೆರಿಕ ಸೇರಿಕೊಂಡ್ರು.
ಅಮೆರಿಕವನ್ನು ಹಿಡಿತದಲ್ಲಿಟ್ಕೊಳ್ಳೋ ಸಲುವಾಗಿ ರಷ್ಯಾದೊಂದಿಗಿನ ಕ್ಯಾಸ್ಟ್ರೋ ಸ್ನೇಹ ಹಸ್ತ ಚಾಚಿದ್ರು. ಆದ್ರಿಂದ, ಕ್ಯಾಸ್ಟ್ರೊರನ್ನು ಪದಚ್ಯುತಗೊಳಿಸೋಕೆ ಅಮೆರಿಕ ನಿದ್ದೆಗೆಟ್ಟು ಕೆಲಸ ಮಾಡ್ತು. ನೆರೆಯ ರಾಷ್ಟ್ರದ ಪ್ರಧಾನಿಯ ಪದಚ್ಯುತಿಗೆ ಅಮೆರಿಕ ಕೋಟಿಗಟ್ಟಲೆ ಹಣ ನಿಗದಿಮಾಡಿತ್ತು. ಕಡೆಗೆ ಕೆನಡಿ ಅವ್ರ ಅಧಿಕಾರಾವಧಿಯಲ್ಲಿ ಅಮೆರಿಕದ ಈ ಯತ್ನ ತಾರಕಕ್ಕೇರ್ತು.
ಫಿಡೆಲ್ ಕ್ಯಾಸ್ಟ್ರೋ ಪದಚ್ಯುತಗೊಳಿಸಲು ಯತ್ನಿಸಿದ ಅಮೆರಿಕ
ಕ್ಯಾಸ್ಟರೋ ಹತ್ಯೆಗೆ ಸಂಚು ರೂಪಿಸಿದ ಸಿಐಎ
ಕ್ಯಾಸ್ಟ್ರೊ ವಿರೋಧಿ ಕ್ರಾಂತಿಕಾರಿಗಳನ್ನು ಒಂದುಗೂಡಿಸಿದ ಅಮರಿಕ
ಹಣ, ಶಸ್ತ್ರಾಸ್ತ್ರಗಳನ್ನೂ ಒದಗಿಸಿದ ವಿಶ್ವದ ದೊಡ್ಡಣ್ಣ
ಬೇ ಆಫ್ ಪಿಗ್ಸ್ ದಾಳಿಗೆ ಪ್ರಚೋದಿಸಿದ ಅಮೆರಿಕ
ಬ್ರಿಗೇಡ್ 2506 ಹೆಸರಿನಲ್ಲಿ 1400 ಜನರ ಗುಂಪನ್ನು ಸಿದ್ಧಗೊಳಿಸಿದ ಅಮೆರಿಕ
1961ರ ಏಪ್ರಿಲ್ 17ರಲ್ಲಿ ಕ್ಯೂಬಾದ ಮೇಲೆ ದಾಳಿ
ಮೇಲುಗೈ ಸಾಧಿಸಿದ ಕ್ಯೂಬಾದ ಮಿಲಿಟರಿ ಶಕ್ತಿ
ಬ್ರಿಗೇಡ್​ಅನ್ನು ಐದು ಗುಂಪುಗಳಾಗಿ ವಿಂಗಡಿಸಿ, ಅನೇಕ ದಿಕ್ಕುಗಳಿಂದ ಏಕಕಾಲಕ್ಕೆ ಕ್ಯೂಬಾದಲ್ಲಿ ದಾಳಿ ನಡೆಸೋದಕ್ಕೆ ಅಮೆರಿಕ ಸಂಚು ರೂಪಿಸಿತ್ತು. ಆದ್ರೆ, ಈ ದಾಳಿಯಲ್ಲಿ ಸೋತ ಅಮೆರಿಕಕ್ಕೆ ಮುಖಭಂಗವಾಯ್ತು. ಇನ್ನು ಈ ದಾಳಿಯಲ್ಲಿ ಅಮೆರಿಕ ಕೈವಾಡವಿದೆ ಅನ್ನೋ ವಿಷಯ ಕೂಡ ಬಹಿರಂಗವಾಗಿತ್ತು. ಇದ್ರಿಂದಾಗಿ ಅಮೆರಿಕದ ಅಧ್ಯಕ್ಷ ಕೆನಡಿ ಅಖಾಡದಿಂದ ಹಿಂದೆ ಸರಿದ್ರು. ಈ ಗೆಲುವಿನಿಂದಾಗಿ ಕ್ಯಾಸ್ಟ್ರೋ ಅವ್ರಿಗೆ ಮತ್ತಷ್ಟು ಜನಪ್ರಿಯತೆ ಸಿಕ್ತು. ಇನ್ನು ರಷ್ಯಾ ಮತ್ತು ಕ್ಯೂಬಾ ಮತ್ತಷ್ಟು ಹತ್ತಿರವಾದ್ವು.
ಆದ್ರೆ, ಇದಾದ ನಂತರ, 1962ರ ಅಕ್ಟೋಬರ್ 14ರಿಂದ 23ರವರೆಗೆ ಕ್ಯೂಬಾ ಜಗತ್ತಿನ ಕುತೂಹಲದ ಕೇಂದ್ರವಾಗಿಬಿಟ್ಟಿತ್ತು. ಸೋವಿಯತ್ ರಷ್ಯಾ, ಕ್ಯೂಬಾ ಸಹಕಾರದಿಂದ ಅಮೆರಿಕದ ನಗರಗಳ ಮೇಲೆ ದಾಳಿ ನಡೆಸೋಕೆ ಅಣ್ವಸ್ತ್ರ ಕ್ಷಿಪಣಿಗಳನ್ನು ಕ್ಯೂಬಾದಲ್ಲಿ ಸನ್ನದ್ಧವಾಗಿಟ್ಟಿತ್ತು. ಯುದ್ಧದ ಮುಂದಾಳತ್ವ ವಹಿಸಿಕೊಳ್ಳೋಕೆ ಚೆಗೆವಾರ ಸಿದ್ಧವಾಗಿದ್ರು.
ಆದ್ರೆ, ಅಮೆರಿಕ ಅಧ್ಯಕ್ಷ ಜಾನ್ ಕೆನಡಿ ರಷ್ಯಾ ನಾಯಕ ಕ್ರುಶ್ಚೇವ್ ಜೊತೆ ಒಪ್ಪಂದ ಮಾಡಿಕೊಂಡ್ರು. ಇದ್ರಿಂದಾಗಿ ಅಮೆರಿಕ ಟರ್ಕಿಯಲ್ಲಿ ನಿಲ್ಲಿಸಿದ್ದ ಅಣ್ವಸ್ತ್ರ ಕ್ಷಿಪಣಿಗಳನ್ನು ವಾಪಸ್ ಕರೆಸಿಕೊಳ್ತು. ಇನ್ನು ಕ್ಯೂಬಾದಿಂದ ಸೋವಿಯತ್ ಯೂನಿಯನ್ ಕೂಡ ಹೊರಬಂತು. ಈ ಒಪ್ಪಂದದಿಂದಾಗಿ ಕ್ಯಾಸ್ಟ್ರೋಗೆ ಅಸಮಾಧಾನವಾಗಿತ್ತು. ಕ್ಷಿಪಣಿಗಳು ನಮ್ಮ ಒಡೆತನದಲ್ಲಿದ್ದಿದ್ದಲ್ಲಿ ಕತೆ ಬೇರೆಯೇ ತಿರುವು ಪಡೀತಿತ್ತು ಅಂತ ಕ್ರಾಂತಿಕಾರ ಅರ್ನೆಸ್ಟೋ ಚೆಗೆವಾರ ಈ ಕುರಿತು ಪ್ರತಿಕ್ರಿಯಿಸಿದ್ದಾರೆ.
ಅಮೆರಿಕ ರಷ್ಯಾ ಒಪ್ಪಂದದ ನಂತರ ಕೂಡ ಸಿಐಎ ಮೂಲಕ ಕ್ಯಾಸ್ಟ್ರೊ ಅವ್ರನ್ನು ಪದಚ್ಯುತಗೊಳಿಸೋಕೆ ಅನೇಕ ಬಾರಿ ಪ್ರಯತ್ನಿಸಿ, ಸೋತಿತು. ಕಡೆಗೆ ಹತಾಶ ಸ್ಥಿತಿಗೆ ತಲುಪಿದ ಅಮೆರಿಕ, ಫಿಡೆಲ್ ಕ್ಯಾಸ್ಟ್ರೋ ಅವ್ರನ್ನು ಕೊಲ್ಲೋಕೆ ಪ್ರಯತ್ನಿಸ್ತು.
600ಕ್ಕೂ ಹೆಚ್ಚು ಬಾರಿ ಫಿಡೆಲ್ ಕ್ಯಾಸ್ಟ್ರೋರನ್ನು ಕೊಲ್ಲಲು ಯತ್ನ
ಸಿಗಾರ್ ಸ್ಫೋಟಿಸಿ ಕೊಲ್ಲುವ ಪ್ರಯೋಗ ವಿಫಲ
ವಿಷ ಪ್ರಾಶನದ ಮೂಲಕ ಹತ್ಯೆ ಮಾಡುವ ಪ್ರಯತ್ನವನ್ನೂ ವಿಫಲಗೊಳಿಸಿದ ಕ್ಯಾಸ್ಟ್ರೋ
ಅಮೆರಿಕ ತನ್ನನ್ನು ಕೊಲ್ಲಲು ನಡೆಸಿದ ಪ್ರಯತ್ನಗಳನ್ನು ಕುರಿತು ಆಗಾಗ ಹಲವು ವೇದಿಕೆಗಳಲ್ಲಿ ಫಿಡೆಲ್ ಕ್ಯಾಸ್ಟ್ರೋ ಪ್ರತಿಕ್ರಿಯಿಸಿದ್ದಾರೆ. ಒಲಿಂಪಿಕ್​ನಲ್ಲಿ ಹತ್ಯೆ ಪ್ರಯತ್ನದಿಂದ ಬಚಾವಾದವ್ರಿಗೆ ಏನಾದ್ರು ಪ್ರಶಸ್ತಿ ಕೊಡೋ ಹಾಗಿದ್ದಿದ್ದಲ್ಲಿ, ನನಗೆ ಗೋಲ್ಡ್​ ಮೆಡಲ್ ಗ್ಯಾರಂಟಿ ಸಿಕ್ತಿತ್ತು ಅಂತ ತಮ್ಮನ್ನು ಕೊಲ್ಲಲು ಯತ್ನಿಸಿದ ಅಮೆರಿಕದ ನಡೆಯನ್ನು ವ್ಯಂಗ್ಯವಾಗಿ ಆಡಿಕೊಂಡ ಉದಾಹರಣೆ ಕೂಡ ಇದೆ.
ಆದ್ರೆ, ಅಮೆರಿಕದ ಎಲ್ಲ ಸಂಚುಗಳನ್ನೂ ಸೋಲಿಸಿದ ಫಿಡೆಲ್ ಕ್ಯಾಸ್ಟ್ರೋ ನಾಯಕತ್ವ ಕೂಡ, ಕ್ಯೂಬಾದಲ್ಲಿ ಒಳಿತು ಮತ್ತು ಕೆಡುಕುಗಳಿಗೆ ಕಾರಣವಾಯ್ತು. ಸರ್ವಾಧಿಕಾರವನ್ನು ವಿರೋಧಿಸಿ ಅಧಿಕಾರ ಹಿಡಿದಿದ್ದ ಕ್ಯಾಸ್ಟ್ರೋ ಆಡಳಿತದ ಅವಧಿಯಲ್ಲೇ ಮಾನವ ಹಕ್ಕುಗಳ ಉಲ್ಲಂಘನೆ ಆರೋಪ ಕೇಳಿಬಂತು. ಅಲ್ದೇ, ಸೈದ್ಧಾಂತಿಕ ಭಿನ್ನಾಭಿಪ್ರಾಯಗಳನ್ನು ಕ್ಯಾಸ್ಟ್ರೋ ದಮನ ಮಾಡಿದ್ರು ಅಂತ ಕೂಡ ಅವ್ರ ವಿರೋಧಿಗಳು ಹೇಳಿಕೆ ನೀಡಿದ್ರು. ಜೊತೆಗೆ ಮಾಧ್ಯಮಗಳನ್ನು ಸರ್ಕಾರದ ಅಧೀನಕ್ಕೆ ತೆಗೆದುಕೊಳ್ಳಲಾಯ್ತು. ಇವೆಲ್ಲವುಗಳ ನಡುವೆ ಕ್ಯೂಬಾದಲ್ಲಿ ಆರ್ಥಿಕ ಕುಸಿತವಾಯ್ತು.
ಇನ್ನು 1991ರ ನಂತರ ಸೋವಿಯತ್ ಒಕ್ಕೂಟ ಒಡೆದು ಚೂರಾಯಿತು. ಇಲ್ಲಿಂದ ಮುಂದೆ ಕ್ಯೂಬಾಗೆ ಕಠಿಣ ಹಾದಿ ಆರಂಭವಾಯ್ತು. ಇಷ್ಟು ದಿನಗಳ ಕಾಲ, ಎಲ್ಲದಕ್ಕೂ ಸೋವಿಯತ್ ಒಕ್ಕೂಟವನ್ನು ಅವಲಂಬಿಸಿದ್ದ ದೇಶಕ್ಕೆ ಇದ್ದಕ್ಕಿದ್ದಂತೆ ದೊಡ್ಡ ಆಘಾತ ಕಾದಿತ್ತು. ಇನ್ನು ಅಮೆರಿಕ ಕೂಡ ಆರ್ಥಿಕ ದಿಗ್ಬಂಧನ ವಿಧಿಸೋದ್ರ ಜೊತೆಗೆ, ಕ್ಯೂಬಾದ ವಸ್ತುಗಳ ಆಮದನ್ನೂ ತಿರಸ್ಕರಿಸಿತ್ತು.
ಇಂತ ಸಂದಿಗ್ಧ ಸಂದರ್ಭದಲ್ಲಿ ಕೂಡ ಕ್ಯೂಬಾ ಅಮೆರಿಕ ಎದುರು ತಲೆತಗ್ಗಿಸಲಿಲ್ಲ. ಬದಲಾಗಿ, ತಮ್ಮಲ್ಲಿ ಲಭ್ಯವಿರೋ ಸಂಪನ್ಮೂಲಗಳನ್ನೇ ಬಳಸಿಕೊಂಡು, ದೇಶದ ಆಂತರಿಕ ಸ್ವಾಯತ್ತತೆಯನ್ನು ಉಳಿಸಿಕೊಳ್ಳುವ ಪ್ರಯತ್ನ ನಡೀತು. ಅಲ್ದೇ, ಆರ್ಥಿಕವಾಗಿ ಕೂಡ ಹೊಸ ಪ್ರಯತ್ನ ಆರಂಭವಾಯ್ತು.
1926, ಆಗಸ್ಟ್​ 13ರಂದು ಶ್ರೀಮಂತ ಕುಟುಂಬದಲ್ಲಿ ಫಿಡಲ್ ಕ್ಯಾಸ್ಟ್ರೋ ಹುಟ್ಟಿದ್ರು. ಪ್ರಾಥಮಿಕ ಶಿಕ್ಷಣವನ್ನು ಕ್ಯಾಥೋಲಿಕ್ ಶಾಲೆಯಲ್ಲಿ, ಹವಾನ ವಿಶ್ವವಿದ್ಯಾಲಯದಲ್ಲಿ ಕಾನೂನು ಪದವಿ ಪಡೆದಿದ್ರು. ಬೇಸ್ ಬಾಲ್ ಆಟಗಾರನಾಗೋ ಕನಸು ಕಂಡಿದ್ದ ಕ್ಯಾಸ್ಟ್ರೋ, ಅಮೆರಿಕ ನಡೆಸುವ ಲೀಗ್​ಗಳಲ್ಲಿ ಮಹತ್ವದ ಪಾತ್ರ ವಹಿಸ್ಬೇಕು ಅಂತ ಬಯಸಿದ್ರು. ಆದ್ರೆ, ಆಗಿದ್ದು ಮಾತ್ರ ಅಮೆರಿಕದ ಬದ್ಧವೈರಿ.
ಈ ವಿಶ್ವದ ಮಹಾನ್ ಪ್ರಜಾಪ್ರಭುತ್ವ ದೇಶ, ಮಾನವ ಹಕ್ಕುಗಳ ಸಂರಕ್ಷಕ , ಅಂತಾರಾಷ್ಟ್ರೀಯ ಭಯೋತ್ಪಾದನೆ ವಿರುದ್ಧ ಹೋರಾಡುವ ದೇಶ ಅಂತ ಅಮೆರಿಕ ಬಡಾಯಿ ಕೊಚ್ಚಿಕೊಳ್ಳೋದ್ರ ವಿರುದ್ಧ ಮೊಟ್ಟ ಮೊದಲು ದನಿ ಎತ್ತಿದ್ದು ಫಿಡೆಲ್ ಕ್ಯಾಸ್ಟ್ರೋ ವಿಶೇಷತೆಗಳಲ್ಲೊಂದು. ಅಮೆರಿಕದ ಡಬಲ್ ಸ್ಟಾಂಡರ್ಡ್, ಯುದ್ಧೋನ್ಮಾದ, ಸಾಮ್ರಾಜ್ಯಶಾಹಿ ಮನಸ್ಥಿತಿ, ಗೋಮುಖ ವ್ಯಾಘ್ರತನಗಳನ್ನು ಜಗಜ್ಜಾಹೀರು ಮಾಡಿದ್ದು ಇದೇ ಫಿಡೆಲ್ ಕ್ಯಾಸ್ಟ್ರೋ.
ಅಮೆರಿಕದ ಸಾಮ್ರಾಜ್ಯಶಾಹಿ ಧೋರಣೆಗೆ ಅನೇಕ ದೇಶಗಳಲ್ಲಿ ಅಸ್ಥಿರತೆ ಉಂಟಾಗಿದೆ. ಆದ್ರೆ, ಇದನ್ನು ಮೊಟ್ಟ ಮೊದಲು ಅರಿತದ್ದು ಫಿಡೆಲ್ ಕ್ಯಾಸ್ಟ್ರೋ. ಲಿಬಿಯಾ, ಲೆಬನಾನ್, ಕ್ಯೂಬಾ, ಇರಾನ್, ಇರಾಕ್, ವೆನಿಜುವೆಲಾ, ಅರ್ಜೆಂಟೈನಾ, ಬೊಲಿವಿಯಾ, ವಿಯೆಟ್ನಾಂ, ಕಾಂಬೋಡಿಯಾ, ಚಿಲಿ, ಪೆರುಗ್ವೆ, ಕೋಸೋರಿಕಾ, ಸಾಲ್ವೋಡಾರ್ ಮೊದಲಾದ ದೇಶಗಳಲ್ಲಿ ಆಂತರಿಕ ವಿಷಯಗಳಿಗೆ ತಲೆಹಾಕಿದ್ದು ಇದೇ ಅಮೆರಿಕ. ಆದ್ರೆ, ತಾನು ಬದುಕಿರುವಷ್ಟು ಕಾಲ ಅಮೆರಿಕವನ್ನು ಬೆಚ್ಚಿಬೀಳಿಸಿದ್ದು ಫಿಡೆಲ್ ಕ್ಯಾಸ್ಟ್ರೋ.
ಅಮೆರಿಕದ ಸಾಮ್ರಾಜ್ಯಶಾಹಿ ಅಬ್ಬರದ ನಡುವೆ, ಅದರ ಎಲ್ಲ ಕುತಂತ್ರಗಳನ್ನೂ ಮೀರಿದ ಜಗತ್ತಿನ ಏಕೈಕ ವ್ಯಕ್ತಿ ಅಂದ್ರೆ ಅದು ಫಿಡೆಲ್ ಕ್ಯಾಸ್ಟ್ರೋ. ಕ್ಯೂಬಾವನ್ನು ತನ್ನ ತೆಕ್ಕೆಗೆ ತೆಗೆದುಕೋಬೇಕು ಅಂತ ಅಮೆರಿಕ ದಶಕಗಟ್ಟಲೇ ಪ್ರಯತ್ನಿಸಿದ್ರೂ, ಅದನ್ನು ವಿಫಲಗೊಳಿಸಿದ್ದು ಕ್ಯಾಸ್ಟ್ರೋ ಶಕ್ತಿಗೆ ಸಾಕ್ಷಿ. ಗಮನಾರ್ಹ ಸಂಗತಿ ಅಂದ್ರೆ, ಕ್ಯಾಸ್ಟ್ರೋ ಬದುಕಿರುವವರೆಗೆ ಅಮೆರಿಕದ ಈ ಆಸೆ ಈಡೇರಲಿಲ್ಲ.
ಅಮೆರಿಕದಿಂದ ಕೇವಲ 90 ಮೈಲಿ ದೂರ ಇರುವ ದ್ವೀಪರಾಷ್ಟ್ರ ಕ್ಯೂಬಾವನ್ನು ಅಮೆರಿಕದ ಎಂದಿಗೂ ಮರೆಯೋಕೆ ಸಾಧ್ಯವಿಲ್ಲ. ಫಿಡೆಲ್ ಕ್ಯಾಸ್ಟ್ರೋವನ್ನು ಕನಸಿನಲ್ಲಿ ಕಂಡ್ರೂ ಅಮೆರಿಕದ ಅಧ್ಯಕ್ಷರು ಬೆಚ್ಚಿಬೀಳ್ತಾರೆ. ಆದ್ರೆ, ಅಮೆರಿಕದ ಈ ಯಾವ ಪ್ರಯತ್ನಗಳಲ್ಲೂ ಯಶಸ್ಸು ಸಿಕ್ಲಿಲ್ಲ. ಅಮೆರಿಕದ ನಿರಂತರ ಕಿರುಕುಳದ ನಡುವೆ ಬರೋಬ್ಬರಿ 50 ವರ್ಷಗಳ ಕಾಲ ಕ್ಯೂಬಾವನ್ನು ಕ್ಯಾಸ್ಟ್ರೋ ಯಶಸ್ವಿಯಾಗಿ ಮುನ್ನಡೆಸಿದ್ರು.
50 ವರ್ಷಗಳ ಕಾಲ ಕ್ಯೂಬಾವನ್ನು ಕೆಚ್ಚೆದೆಯಿಂದ ಮುನ್ನೆಡಿಸಿದ ಕ್ಯಾಸ್ಟ್ರೋ ಕ್ಯೂಬಾದಲ್ಲಿ ಸಾಕ್ಷರತೆ, ಮನೆ, ಆರೋಗ್ಯ ಮೊದಲಾದ ಕ್ಷೇತ್ರದಲ್ಲಿ ಅಭಿವೃದ್ಧಿಯಾಗಿದೆ. ಆದ್ರೆ, ಇಲ್ಲಿ ಆರ್ಥಿಕತೆಯಲ್ಲಿ ನಿರೀಕ್ಷಿತ ಪ್ರಮಾಣದ ಪ್ರಗತಿ ಸಾಧ್ಯವಾಗಿಲ್ಲ ಅನ್ನೋ ಕೂಗು ಕೇಳಿಬಂದಿದೆ. ಇನ್ನು ಸ್ವಾತಂತ್ರ್ಯವನ್ನು ಬಯಸುವವರ ಸಂಖ್ಯೆ ಕೂಡ ಹೆಚ್ಚಿದೆ.
ಇನ್ನು ಫಿಡೆಲ್ ಸರ್ವಾಧಿಕಾರಿ ಧೋರಣೆಯನ್ನು ವಿರೋಧಿಸಿ, ಕ್ರಾಂತಿಯ ಮೂಲಕ ಅಧಿಕಾರ ಹಿಡಿದವ್ರು. ಆದ್ರೆ, ಅವ್ರ ವಿರುದ್ಧ ಕೂಡ ಸರ್ವಾಧಿಕಾರಿ ಧೋರಣೆ ಹೊಂದಿರೋ ಆರೋಪ ಕೂಡ ಎದುರಾಗಿತ್ತು. ಆರ್ಥಿಕವಾಗಿ ದೇಶವನ್ನು ದುಃಸ್ಥಿತಿಗೆ ತಳ್ಳಿರೋ ಆರೋಪ ಕೂಡ ಕೇಳಿ ಬಂದಿದೆ.
ಇದ್ರ ನಡುವೆ ಕೂಡ ಅಮೆರಿಕದಂತ ದೈತ್ಯ ಶಕ್ತಿಯ ವಿರೋಧ ಕಟ್ಟಿಕೊಂಡು 50 ವರ್ಷಗಳ ಕಾಲ ಆಡಳಿತ ನಡೆಸೋದು ಸಾಮಾನ್ಯ ಸಂಗತಿಯಲ್ಲ. ಇನ್ನು ಕ್ಯಾಸ್ಟ್ರೋ ದೊಡ್ಡ ಆಲದ ಮರದಂತಿದ್ದವರು. ಇದ್ರಿಂದಾಗಿ ಎರಡನೇ ತಲೆಮಾರು ಅವ್ರ ನೆರಳಿನಲ್ಲಿ ಚಿಗುರೋಕೆ ಸಾಧ್ಯವಾಗ್ಲೇ ಇಲ್ಲ. ಆದ್ರೆ, ಕ್ಯೂಬಾದ ನಾಗರಿಕರು ಇವ್ರಿಗೆ ನೀಡಿದ ಬೆಂಬಲಕ್ಕೆ ಎಣೆಯೇ ಇಲ್ಲ. ಕ್ಯಾಸ್ಟ್ರೋ ಕೂಡ ತನ್ನ ದೇಶದ ಜನರ ಆಶೋತ್ತರಗಳಿಗೆ ದ್ರೋಹ ಬಗೆಯಲಿಲ್ಲ.
ಜನವರಿ 1, 1959ರವರೆಗೆ ಸರ್ವಾಧಿಕಾರಿ ಬತಿಸ್ತಾ ಕ್ಯೂಬಾವನ್ನು ಆಳಿದ್ರು. ಆದ್ರೆ, ಫಿಡೆಲ್, ಚೆಗೆವಾರ, ರೌಲ್ ಅವ್ರ ಸಣ್ಣ ಗುಂಪು ಗೆರಿಲ್ಲಾ ಯುದ್ಧದ ಮೂಲಕ ಕ್ಯೂಬಾಗೆ ಸ್ವಾತಂತ್ರ್ಯ ತಂದುಕೊಟ್ಟಿತ್ತು. ಈ ಹೋರಾಟದಲ್ಲಿ ಕ್ಯಾಸ್ಟ್ರೋ ಅವ್ರಿಗೆ 15 ವರ್ಷಗಳ ಕಾಲ ಸೆರೆವಾಸ ವಿಧಿಸಲಾಗಿತ್ತು. ಆದ್ರೆ, 2 ವರ್ಷಕ್ಕೆ ಬಿಡುಗಡೆ ಮಾಡಲಾಗಿತ್ತು. ಇದನ್ನೇ ಅಸ್ತ್ರವನ್ನಾಗಿಸಿಕೊಂಡ ಕ್ಯಾಸ್ಟ್ರೋ, ಬತಿಸ್ತಾ ವಿರುದ್ಧ ಹೋರಾಟವನ್ನು ನಡೆಸಿದ್ರು.
1960ರಲ್ಲಿ ಫಿಡೆಲ್ ಕ್ಯೂಬಾದಲ್ಲಿ ಅಧಿಕಾರ ವಹಿಸಿಕೊಂಡ್ರು. ಇದುವರೆಗೆ ಎಲ್ಲ ದೇಶದ ಪ್ರಧಾನಿ, ಅಧ್ಯಕ್ಷರು ಅಮೆರಿಕ ದೇಶದ ನೆರವು ಕೇಳೋದು ಸಹಜ. ಆದ್ರೆ, ಅಧಿಕಾರ ವಹಿಸಿಕೊಂಡ ದಿನದಿಂದ ಅಮೆರಿಕದ ನೆರವನ್ನು ಸಾರಾಸಗಟಾಗಿ ತಿರಸ್ಕರಿಸಿ, ದೇಶವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ದದ್ದು ಕ್ಯಾಸ್ಟ್ರೋ ಸಾಮರ್ಥ್ಯವನ್ನು ತೋರಿಸುತ್ತೆ.
ಕ್ಯಾಸ್ಟ್ರೋ ಅವ್ರ ಈ ನಿರ್ಧಾರದಿಂದಾಗಿ ಅಮೆರಿಕ ಸಕ್ಕರೆ ಆಮದನ್ನು ರದ್ದುಗೊಳಿಸ್ತು. ಆದ್ರೆ, ಇಂದು ವಿಶ್ವದಲ್ಲಿ ಸಕ್ಕರೆ ರಫ್ತು ಮಾಡುವ ಸಾಲಿನಲ್ಲಿ ಕ್ಯೂಬಾಗೆ ಕೂಡ ಸ್ಥಾನ ಸಿಕ್ಕಿದೆ. ಇಂತಹ ಸಣ್ಣ ವಿಷಯವನ್ನೂ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವ ಸಾತ್ವಿಕ ಹಠ ಕ್ಯಾಸ್ಟ್ರೋ ಅವ್ರ ಶಕ್ತಿಯಾಗಿತ್ತು.
ಕ್ಯಾಸ್ಟ್ರೋ ಎಲ್ಲ ಮಿತಿಗಳ ನಡುವೆ ಕೂಡ ಸಾಕ್ಷರತೆಯಲ್ಲಿ ಕ್ಯೂಬಾ ಶೇ. 100ರಷ್ಟು ಪ್ರಗತಿ
ಜನಾಂಗೀಯ ಕಲಹಗಳಿಗೆ ದೇಶದಲ್ಲಿ ಸ್ಥಾನವಿಲ್ಲ
ಉಚಿತ ಶಿಕ್ಷಣ ನೀಡುತ್ತಿರುವ ದೇಶ ಕ್ಯೂಬ
ವಿದ್ಯಾರ್ಥಿಗಳಿಗೆ ಉಚಿತ ಬೋಧನೆ, ಪುಸ್ತಕ ಲಭ್ಯ
ವಿದ್ಯಾರ್ಥಿಗಳಿಗೆ ಗೌರವಧನ ನೀಡುತ್ತಿರುವ ದೇಶ
ಎಲ್ಲ ಹಂತದ ವಿದ್ಯಾಭ್ಯಾಸ ಉಚಿತ
ವಯಸ್ಕರಿಗೂ ವಿದ್ಯಾಭ್ಯಾಸಕ್ಕೆ ಅವಕಾಶ
ಮಧ್ಯವಯಸ್ಕರಿಗೆ ವಿಶ್ವವಿದ್ಯಾಲಯಗಳಿಗೆ ಉಚಿತ ಪ್ರವೇಶ
ಧಾರ್ಮಿಕ ಸ್ವಾತಂತ್ರ್ಯ ನೀಡಿರುವ ದೇಶ
ಇಂತಹ ಯೋಜನೆಗಳ ಮೂಲಕ ದೇಶವನ್ನು ಸಾಮಾಜಿಕ ನ್ಯಾಯದ ಹಂಚಿಕೆಯಲ್ಲಿ ದೊಡ್ಡ ಎತ್ತರಕ್ಕೆ ಫಿಡೆಲ್ ಕ್ಯಾಸ್ಟ್ರೋ ಕೊಂಡೊಯ್ದಿದ್ದಾರೆ. ಇನ್ನು ಈ ದೇಶ ಸಮಾಜವಾದಿ ತಳಹದಿಯ ಮೇಲೆ ನಿಂತಿದೆ. ಇಲ್ಲಿ ಸ್ವಂತ ಸೂರಿಲ್ಲದ ಜನರೇ ಇಲ್ಲ. ಇನ್ನು ಜನರಲ್ಲಿ ಆರ್ಥಿಕ ಅಸಮಾನತೆ ಇಲ್ಲ. ಅಮೆರಿಕದ ಆರ್ಥಿಕ ದಿಗ್ಬಂಧನದ ನಡುವೆ ಕೂಡ ಆರ್ಥಿಕ ಅಸಮಾನತೆಯನ್ನು ಹೋಗಲಾಡಿಸಿರುವಲ್ಲಿ ಫಿಡೆಲ್ ಕ್ಯಾಸ್ಟ್ರೋ ಅವ್ರ ಸಮಾಜವಾದಿ ಸಿದ್ಧಾಂತದ ಚಿಂತನೆ ಪೂರಕವಾಗಿದೆ.
ಪ್ರದೀಪ್ ಮಾಲ್ಗುಡಿ ನ್ಯಾಷನಲ್ ಡೆಸ್ಕ್ ಸುದ್ದಿ ಟಿವಿ

 Click this button or press Ctrl+G to toggle between Kannada and English