ಕೊಲಂಬೊ ಅಂಗಳದಲ್ಲಿ ಐತಿಹಾಸಿಕ ಪಂದ್ಯನ್ನಾಡಲಿದ್ದಾರೆ ಎಂಎಸ್​​ಡಿ

0
138

ಇನ್ನು ಇವತ್ತಿನ ಪಂದ್ಯ ಟೀಮ್ ಇಂಡಿಯಾದ ಕೂಲ್ ಆಟಗಾರ.. ಮಾಜಿ ನಾಯಕ ಮಹೇಂದ್ರ ಸಿಂಗ್​ ಧೋನಿಗೆ ವೆರಿ ವೆರಿ ಸ್ಪೆಷಲ್​. ಯಾಕಂದ್ರೆ ಮಾಹಿ ಇಂದು 300ನೇ ಏಕದಿನ ಪಂದ್ಯವನ್ನಾಡಲಿದ್ದಾರೆ.. ನಿಗದಿತ ಓವರ್​ಗಳ ಕ್ರಿಕೆಟ್​​ನಲ್ಲಿ ದೈತ್ಯನಾಗಿರೋ ಧೋನಿಗೆ ಇದೊಂದು ಐತಿಹಾಸಿಕ ಪಂದ್ಯವಾಗ್ಲಿದೆ.. ಜಾರ್ಖಂಡ್​​ನಂತಹ ಪುಟ್ಟ ರಾಜ್ಯದಿಂದು ಬಂದು.. ಭಾರತೀಯ ಕ್ರಿಕೆಟ್​ನಲ್ಲಿ ಅನೇಕ ಅದ್ಭುತಗಳನ್ನೇ ಸೃಷ್ಟಿಸಿದ.. ಚಾಣಾಕ್ಷ್ಯ ಆಟಗಾರ ಮಹೇಂದ್ರ ಸಿಂಗ್ ಧೋನಿ. ಐಸಿಸಿ ಮೂರು ಕಪ್​ಗಳನ್ನ ಗೆದ್ದಿರೋ ಏಕೈಕ ನಾಯಕನೆಂಬ ಕೀರ್ತಿ ಹೊಂದಿರುವ ಮಾಹಿ, ಇಂದು ಐತಿಹಾಸಿಕ ಹೆಜ್ಜೆಯನ್ನಿಡಲು ಸಜ್ಜಾಗಿದ್ದಾರೆ. ಏಕದಿನ ಕ್ರಿಕೆಟ್​ನಲ್ಲಿ 300ನೇ ಏಕದಿನ ಪಂದ್ಯವನ್ನಾಡಲು ಧೋನಿ ತುದಿಗಾಲಲ್ಲಿ ನಿಂತಿದ್ದಾರೆ.

ಲಂಕಾ ವಿರುದ್ಧ ಇಂದು ಕೊಲಂಬೊದಲ್ಲಿ ನಡೆಯಲಿರುವ 4ನೇ ಏಕದಿನ ಪಂದ್ಯ ಮಾಹಿ ಪಾಲಿಗೆ ಸ್ಮರಣೀಯ ಪಂದ್ಯ. ಈ ಪಂದ್ಯದಲ್ಲಿ ಆಡುವ ಮೂಲಕ ಎಂಎಸ್​ಡಿ 300ರ ಕ್ಲಬ್​ಗೆ ಸೇರ್ಪಡೆಗೊಳ್ಳಲಿದ್ದಾರೆ. ಈ ಮೂಲಕ ಮಾಹಿ ಭಾರತದ ದಿಗ್ಗಜ ಕ್ರಿಕೆಟರ್​​ಗಳ ಸಾಲಿನಲ್ಲಿ ತನ್ನ ಹೆಸರನ್ನು ನಮೂದಿಸಲಿದ್ದಾರೆ. ಹೀಗೆ ಮಾಹಿ ಸೇರಲಿರುವ ಆ 300ರ ಕ್ಲಬ್​​ ಲಿಸ್ಟ್​​ನ ವಿವರ ಇಂತಿದೆ.

300 ಕ್ಕೂ ಹೆಚ್ಚು ಏಕದಿನ ಪಂದ್ಯವನ್ನಾಡಿರುವ ಭಾರತದ ದಿಗ್ಗಜರು

ಆಟಗಾರನ ಹೆಸರು                                               ಪಂದ್ಯ
ಸಚಿನ್ ತೆಂಡೂಲ್ಕರ್​                                              463
ರಾಹುಲ್ ದ್ರಾವಿಡ್​                                                 340
ಮೊಹಮ್ಮದ್ ಅಜರುದ್ದೀನ್​                                        334
ಸೌರವ್​ ಗಂಗೂಲಿ                                                 308
ಯುವರಾಜ್ ಸಿಂಗ್                                                301

ಭಾರತದ ಪರ ಇದುವರೆಗೂ 300ಕ್ಕೂ ಹೆಚ್ಚು ಏಕದಿನ ಪಂದ್ಯಗಳನ್ನಾಡಿದವ್ರಲ್ಲಿ ಕ್ರಿಕೆಟ್ ದೇವರು ಸಚಿನ್​ ತೆಂಡೂಲ್ಕರ್​ ಅಗ್ರ ಸ್ಥಾನದಲ್ಲಿದ್ದಾರೆ. ಸಚಿನ್ 463 ಏಕದಿನ ಪಂದ್ಯಗಳನ್ನಾಡಿದ್ದು ನಂತರದ ಸ್ಥಾನದಲ್ಲಿ ರಾಹುಲ್ ದ್ರಾವಿಡ್​​, ಮೊಹಮ್ಮದ್ ಅಜರುದ್ದೀನ್​, ಸೌರವ್ ಗಂಗೂಲಿ ಸೇರಿದಂತೆ ಇತ್ತೀಚೆಗಷ್ಟೇ 300ರ ಕ್ಲಬ್​ ಸೇರಿದ ಯುವರಾಜ್​ ಸಿಂಗ್ ಇದ್ದಾರೆ. ಈ ದಿಗ್ಗಜರ ಸಾಲಿಗೆ ಇದೀಗ ಮಹೇಂದ್ರ ಸಿಂಗ್ ಧೋನಿ ಸೇರ್ಪಡೆಯಾಗುತ್ತಿದ್ದಾರೆ.ಇನ್ನು 300ಏಕದಿನ ಕ್ರಿಕೆಟ್ ಆಡುವ ಮೂಲಕ ದಾಖಲೆ ಸೃಷ್ಟಿಸಲು ರೆಡಿಯಾಗಿರು ಮಾಹಿ.. ಇಂದು ಮತ್ತೊಂದು ವಿಶ್ವದಾಖಲೆಗೆ ಸಜ್ಜಾಗಿ ನಿಂತಿದ್ದಾರೆ.. ಅದುವೇ ತನ್ನ ನೆಚ್ಚಿನ ಬುಲೆಟ್ ಸ್ಪೀಡ್​ನ ಸ್ಪಂಪಿಂಗ್​. ಹೌದು.. ಭಾರತಕ್ಕೆ ದೀರ್ಘಕಾಲದ ವಿಕೆಟ್​ ಕೀಪಿಂಗ್ ಕೊರತೆಯನ್ನ ನೀಗಿಸಿದ ಮಹೇಂದ್ರ ಸಿಂಗ್ ಧೋನಿ, ಇನ್ನೊಂದು ಸ್ಟಂಪಿಂಗ್ ಮಾಡಿದ್ರೆ ಸಾಕು ಸ್ಟಂಪಿಂಗ್​ನಲ್ಲೇ ಸೆಂಚೂರಿ ಬರೆಯಲಿದ್ದಾರೆ. ಈ ಮೂಲಕ 100 ಸ್ಟಂಪಿಂಗ್ ಮಾಡಿದ ವಿಶ್ವದ ಮೊದಲ ವಿಕೆಟ್ ಕೀಪರ್ ಎಂಬ ಕೀರ್ತಿ ಸಂಪಾದಿಸಲಿದ್ದಾರೆ. ಸದ್ಯ ಕುಮಾರ್ ಸಂಗಕ್ಕಾರ ಹಾಗೂ ಮಾಹಿ ಏಕದಿನ ಕ್ರಿಕೆಟ್​ನಲ್ಲಿ 99 ಸ್ಟಂಪಿಂಗ್​ ಮಾಡಿರುವ ದಾಖಲೆ ಹೊಂದಿದ್ದಾರೆ.

2004ರ ಡಿಸೆಂಬರ್​​ 23ರಂದು ಚಿತ್ತಗಾಂಗ್​ನಲ್ಲಿ ಬಾಂಗ್ಲಾದೇಶ ವಿರುದ್ಧದ ಪಂದ್ಯದ ಮೂಲಕ ಏಕದಿನ ಅಂತರಾಷ್ಟ್ರೀಯ ಕ್ರಿಕೆಟ್​ಗೆ ಕಾಲಿಟ್ಟ ಮಹೇಂದ್ರ ಸಿಂಗ್ ಧೋನಿ, ಸಂತರ ಸೀಮಿತ ಓವರ್​ಗಳಲ್ಲಿ ದೈತ್ಯ ಶಕ್ತಿಯಾಗಿ ಬೆಳೆದು ನಿಂತಿದ್ದು ಎಂತವರಿಗೂ ಬೆರಗು ಹುಟ್ಟಿಸುವಂತದ್ದು.. ಇದೀಗ ಮಾಹಿ 300ನೇ ಏಕದಿನ ಪಂದ್ಯದತ್ತ ಬಂದು ನಿಂತಿದ್ದಾರೆ. ಅಭಿಮಾನಿಗಳಷ್ಟೇ ಅಲ್ಲದೆ ಕ್ರಿಕೆಟ್ ದಿಗ್ಗಜರುಗಳು.. ರಾಂಚಿ ಆಟಗಾರನಿಗೆ ಶುಭ ಹಾರೈಸಿದ್ದಾರೆ.
ಸಾಗರ್​ ಕನ್ನೆಮನೆ, ಸ್ಪೋರ್ಟ್ಸ್​ ಬ್ಯೂರೋ, ಸುದ್ದಿ ಟಿವಿ

 Click this button or press Ctrl+G to toggle between Kannada and English