‘ವಿವೇಕಾನಂದರ ಭಾಷಣ ಭಾರತಕ್ಕೆ ಹೊಸ ಆಯಾಮ ನೀಡಿದೆ’..

0
130

ದೀನ್​ ದಯಾಳ್​ ಉಪಾಧ್ಯಾಯರ 100 ನೇ ಜನ್ಮದಿನಾಚರಣೆ , ಸ್ವಾಮಿ ವಿವೇಕಾನಂದರ ಏಳಿ ಏದ್ದೇಳಿ ಭಾಷಣಕ್ಕೆ 125 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿ ಪ್ರಧಾನಿ ಮೋದಿ ಭಾಷಣ ಮಾಡಿದ್ರು..ಯಂಗ್​ ಇಂಡಿಯಾ,ನ್ಯೂ ಇಂಡಿಯಾಗೆ ಕರೆ ನೀಡಿ ಭಾಷಣ ಪ್ರಾರಂಭಿಸಿದ ಮೋದಿ ಸ್ವಾಮಿ ವಿವೇಕಾನಂದರಿಗೆ ತಮ್ಮ ಗೌರವ ನಮನ ಸಲ್ಲಿಸಿದ್ರು..1893 ಸೆಪ್ಟೆಂಬರ್​ 9 ರಂದು ಇಡೀ ವಿಶ್ವವೇ ಭಾರತದತ್ತ ತಿರುಗಿ ನೋಡುವಂತೆ ಮಾಡಿದ್ದು ವಿವೇಕಾನಂದರ ಭಾಷಣ..ಅಮೆರಿಕದ ಸಹೋದರ,ಸಹೋದರಿಯರೇ ಅಂತ ಹೇಳಿ ಭಾಷಣ ಮಾಡಿದ ವಿವೇಕಾನಂದರು ಪಾಶ್ಚಿಮಾತ್ಯರು ಕೂಡ ಭಾರತಕ್ಕೆ ತಲೆದೂಗುವಂತೆ ಮಾಡಿದ್ದರು.. 2001 ಸೆಪ್ಟೆಂಬರ್​ 11 ಕ್ಕಿಂತ ಮೊದಲು ಭಾರತದ ಮಹತ್ವದ ಬಗ್ಗೆ ಯಾರಿಗೂ ತಿಳಿದಿರಲಿಲ್ಲ..ಆದ್ರೆ ವಿವೇಕಾನಂದರ ಭಾಷಣ ಇಡೀ ವಿಶ್ವದಲ್ಲೇ ಭಾರತಕ್ಕೆ ಒಂದು ಹೊಸ ಆಯಾಮ ಕಲ್ಪಿಸಿಕೊಟ್ಟಿತ್ತು..ವಿವೇಕಾನಂದರು ನಮ್ಮಲ್ಲಿನ ದೌರ್ಬಲ್ಯವನ್ನು ಅಳಿಸಿಹಾಕಿದ್ದಾರೆ..ವಿವೇಕಾನಂದರು ಸತ್ಯದ ಶೋಧನೆಯಲ್ಲಿ ತಮ್ಮನ್ನು ಮುಡುಪಾಗಿಟ್ಟಿದ್ದರು..ಅಮೆರಿಕಕ್ಕೆ ಪ್ರೀತಿ ಮಾಡುವುದನ್ನು ಕಲಿಸಿದ್ದು ಸ್ವಾಮಿ ವಿವೇಕಾನಂದರು..ಇಂದಿಗೂ ಕೂಡ ಸ್ವಾಮಿ ವಿವೇಕಾನಂದರ ಭಾಷಣ ನಮಗೆಲ್ಲ ಆದರ್ಶಪ್ರಾಯವಾಗಿ ಉಳಿದಿದೆ ಅಂತ ಹೇಳಿದ್ರು..

 Click this button or press Ctrl+G to toggle between Kannada and English