ಬೆಂಗಳೂರಿನಲ್ಲಿ ವಿವಿಧ ಕಾಮಗಾರಿಗಳಿಗೆ ಸಿಎಂ ರಿಂದ ಚಾಲನೆ

0
143

ಬೆಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯ ಇವತ್ತು ಹಲವು ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ.. ಬೆಳಿಗ್ಗೆ 11 ಕ್ಕೆ ಕೃಷಿ ಇಲಾಖೆ ಅಧೀನದಲ್ಲಿ ಹೆಬ್ಬಾಳದ ಅಂತರಾಷ್ಟ್ರೀಯ ಪುಷ್ಪ ಹರಾಜು ಬೆಂಗಳೂರು ವತಿಯಿಂದ ನಿರ್ಮಾಣಗೊಂಡಿರುವ ‘ ಪುಷ್ಪ ಸ್ಟುಡಿಯೋ ಮತ್ತು ತರಬೇತಿ ಕೇಂದ್ರ ‘ ಕಟ್ಟಡಗಳಿಗೆ ಉದ್ಘಾಟನೆ ಹಾಗೂ ಪುಷ್ಪ ಹರಾಜು ವೀಕ್ಷಿಸಲಿದ್ದಾರೆ. ಬಳಿಕ ಕರ್ನಾಟಕ ರಾಜ್ಯ ಬೀಜ ನಿಗಮ ನಿಯಮಿತದ ‘ಬೀಜ ಭವನ ‘ ಕಟ್ಟಡದ ಉದ್ಘಾಟನೆ ನೆರವೇರಿಸಿ, ಸಾರ್ವಜನಿಕ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ. ಇನ್ನು ಕೃಷ್ಣಾದಲ್ಲಿ ಚೀನಾ-ಭಾರತ ರಾಯಭಾರಿ ಹೆಚ್.ಇ.ಲೂ ಝಾಹುಲ್​ರ ಸೌಹಾರ್ಧ ಭೇಟಿ ನಡೆಯಲಿದ್ದಾರೆ. ಬಳಿಕ ಸಂಜೆ 6.30 ಗೆ ಸರ್ಕಾರದ ಮಿಷನ್ 2025 ಪ್ರಾಜೆಕ್ಟ್ ಆಫೀಸ್​ ವತಿಯಿಂದ ಆಯೋಜನೆಗೊಂಡಿರುವ ನವಕರ್ನಾಟಕ 2025 ಉದ್ಘಾಟನಾ ಸಮಾರಂಭದಲ್ಲಿ ಮುಖ್ಯಮಂತ್ರಿ ಭಾಗವಹಿಸಲಿದ್ದಾರೆ.

 Click this button or press Ctrl+G to toggle between Kannada and English