ಕಮಲ್ ಹೊಸ ಪಕ್ಷ ಘೋಷಣೆ

0
113

ಇತ್ತೀಚೆಗೆ ರಾಜಕೀಯದಲ್ಲಿ ಸಂಚಲನ ಮೂಡಿಸುತ್ತಿರುವ ನಟ ಕಮಲ್​ ಹಾಸನ್​ ಇದಕ್ಕೆ ಇಂಬು ಕೊಡುವಂತೆ ಇಂದು ತಮ್ಮ ಹುಟುಹಬ್ಬದ ದಿನದಂದು ಮಹತ್ವದ ಘೋಷಣೆ ಮಾಡಲಿದ್ದಾರೆ. ರಾಜಕೀಯಕ್ಕೆ ಎಂಟ್ರಿ ಕೊಡಲು ಸಕಲ ರೀತಿಯಲ್ಲೂ ಸಜ್ಜಾಗಿರುವ ಕಮಲ್​ ಹಾಸನ್​ ತಮ್ಮ ಹೊಸ ಪಕ್ಷದ ಕುರಿತು ಇಂದು ಮಹತ್ವದ ಘೋಷಣೆ ಮಾಡಲಿದ್ದಾರೆ. ಒಂದೆಡೆ ಹಲವು ರಾಜಕೀಯ ಪಕ್ಷಗಳ ನಾಯಕರೊಂದಿಗೆ ಕಮಲ್​ ಹಾಸನ್​ ಭೇಟಿ ನೀಡ್ತಿದ್ರೆ, ಇನ್ನೊಂದೆಡೆ ಕೇಂದ್ರದ ವಿರುದ್ಧ ಹಾಗೂ ತಮಿಳುನಾಡು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸ್ತಿದ್ದಾರೆ. ಹಾಗೆ ಯುವಕರನ್ನು ಒಗ್ಗೂಡಿಸಿ ಅವರಿಗೊಂದು ಸರಿಯಾದ ಮಾರ್ಗದರ್ಶನ ನೀಡಲು ತಾನು ಸಜ್ಜಾಗಿದ್ದೇನೆ. ಯುವಕರೇ ಸಿದ್ಧರಾಗಿ ಎಂದೂ ಕೂಡ ಕಮಲ್​ ಹಾಸನ್​ ಕರೆ ನೀಡಿದ್ದಾರೆ.ಈ ಮೂಲಕ ನಾಳೆಯ ಬೆಳವಣಿಗೆ ಹಲವು ಕುತೂಹಲಗಳನ್ನು ಹುಟ್ಟುಹಾಕಿದೆ.

 Click this button or press Ctrl+G to toggle between Kannada and English