ಸಂಜೆಯಾಗುತಿದ್ದಂಗೆ ಆಕ್ಟೀವ್ ಆಗ್ತಾರೆ ಕಳ್ಳರು.!

0
174

ಸಿಲಿಕಾನ್​ ಸಿಟಿಯಲ್ಲಿ ಅಕ್ಟೀವ್ ಆಗಿದ್ದಾರೆ ದರೋಡೆಕೋರರು.. ರಾತ್ರಿಯಾದ್ರೆ ಸಾಕಿ ಗುಂಪು ಗುಂಪುಗಳಾಗಿ ರಸ್ತೆಗಿಳಿಯುತ್ತಾರೆ ಖತರ್ನಾಕ್​ ಕಳ್ಳರು.. ಆಯಾಕಟ್ಟಿನ ಸ್ಥಳಗಳಲ್ಲಿ ಓಡಾಡುವ ಜನ್ರನ್ನಾ ಟಾರ್ಗೆಟ್​ ಮಾಡ್ತಾರೆ ಖದೀಮರು.. ಕಳ್ಳರ ಕಾಟಕ್ಕೆ ಬೇಸತ್ತು ಖಾಕಿಗಳ ರಕ್ಷಣೆಗೆ ಮೊರೆಹೋದ ಸಾರ್ವಜನಿಕರು…ಇದ್ಯಾನನಗರಿ ಐಟಿಬಿಟಿ ಸೇರಿದಂತೆ ಹತ್ತು ಹಲವು ವಿಶೇಷತೆಗಳಿಗೆ ಹೆಸರು ವಾಸಿ.. ಆದ್ರೆ ಇತ್ತಿಚ್ಚಗೆ ಅಪರಾಧ ಕೃತ್ಯಗಳಿಂದಲೂ ಸಹ ಅಷ್ಟೇ ಪ್ರಖ್ಯಾತಿಗೆ ಪಾತ್ರವಾಗ್ತಿದೆ.. ಒಂದು ಕಡೆ ಸಿಟಿಯಲ್ಲಿ ಸರಣಿಸರಗಳ್ಳತನಗಳು ದಾಖಲಾಗ್ತಿದ್ರೆ.. ಮತ್ತೊಂದು ಕಡೆ ದಾರಿ ಹೋಕರ ಅಡ್ಡಗಟ್ಟಿ ಮೊಬೈಲ್​ ಸೇರಿದಂತೆ, ನಗದು ಚಿನ್ನಾಭರಣ ದೋಚುವವರ ಕಾಟ ಜೋರಾಗಿದೆ.. ನಗರದ ಸ್ಯಾಂಕಿಟ್ಯಾಂಕಿಯಿಂದ ಮಾರಮ್ಮ ಸರ್ಕಲ್ ವರೆಗೆ ಸಾಗು ಮಾರ್ಗದಲ್ಲಿ ಸಂಜೆ ವೇಳೆ ಕಳ್ಳರ ಕಾಟ ಹೆಚ್ಚಾಗಿದೆಯಂತೆ.. ಇನ್ನು ಇದೇ ರಸ್ತೆಯ ಪಕ್ಕದಲ್ಲಿ ಬಿಬಿಎಂಪಿ ಆಟದ ಮೈದಾನ ಇದ್ದು ಇದು ಕಳ್ಳಕಾರ ಅಡ್ಡ ಆಗಿದೆ.. ಈ ಮೈದಾನದಲ್ಲೇ ಕುಳಿತು ಫ್ಲಾನ್ ಮಾಡುವ ಕಳ್ಳರು ಒಂಟಿಯಾಗಿ ಯಾರಾದ್ರೂ ಬಂದ್ರೆ ಸಾಕು ಅಡ್ಡಗಟ್ಟಿ ದೋಚಿ ಕ್ಷಣಾರ್ಧದಲ್ಲೇ ಪರಾರಿಯಾಗ್ತಾರೆ.. ಇದ್ರಿಂದ ಒಂಟಿಯಾಗಿ ಈ ರಸ್ತೆಯಲ್ಲಿ ಓಡಾಡೋಕ್ಕೆ ನಮಗೆ ಭಯವಾಗುತ್ತೆ ಅಂತಾರೆ ಸಾರ್ವಜನಿಕರು..

ಇನ್ನು ರಸ್ತೆಯ ಸದಾಶಿವನಗರ ಹಾಗೂ ಮಲ್ಲೇಶ್ವರಂ ಪೊಲೀಸ್ ಠಾಣೆಗಳ ಸುಪರ್ಧಿಗೆ ಸೇರಿದ್ದು, ಯಾವ ಠಾಣೆಗೆ ಹೋಗಿ ದೂರು ನೀಡಿದ್ರು ಪ್ರಯೋಜನವಾಗ್ತಿಲ್ಲ.. ಎರಡು ಠಾಣೆಗಳಿಗೆ ವಿಚಾರ ಮುಟ್ಟಿಸಿದ್ರು ಇಲ್ಲಿನ ಕಳ್ಳರ ಕಾಟ ಮಾತ್ರ ನಮಗೆ ಇನ್ನೂ ತಪ್ಪಿಲ್ಲ.. ಮತ್ತೊಂದು ಈ ರಸ್ತೆಯ ಎರಡು ಕಡೆ ದೊಡ್ಡ ತಡೆ ಗೋಡೆಗಳಿರೋದ್ರಿಂದ.. ಸಾಮಾನ್ಯ ಜನ್ರು, ಮಹಿಳೆಯರು ಅಷ್ಟು ಸುಲಭವಾಗಿ ತಪ್ಪಿಸಿಕೊಳ್ಳು ಆಗೊದಿಲ್ಲ.. ಹಾಗಾಗಿ ರಾತ್ರಿಪಾಳಿಯ ಪೊಲೀಸ್ ಗಸ್ತು ಮತ್ತಷ್ಟು ಬಿಗಿಗೊಳಿಸಬೇಕು ಆಮೂಲಕ ನಮಗೆ ಹೆಚ್ಚಿನ ರಕ್ಷಣೆ ಒದಗಿಸಬೇಕು ಅಂತಿದ್ದಾರೆ..ಅಪರಾಧ ಕೃತ್ಯಗಳ ತಡೆಗೆ ಖಾಕಿಪಡೆ ತಲೆಕೆಡಿಸಿಕೊಂಡು ತಿರುಗಾಡುತ್ತಿದ್ರೆ.. ಇತ್ತ ಕ್ರಿಮಿನಲ್ಸ್ ನಿರಾಯಸವಾಗಿ ತಮ್ಮ ಕೈಚಳಕ ತೋರಿಸಿ ತಲೆ ಮರೆಸಿಕೊಳ್ತಿದ್ದಾರೆ.. ಸದ್ಯ ಪೊಲೀಸರು ಮತ್ತಷ್ಟು ಅಲಾರ್ಟ್ ಆಗೋದ್ರ ಮೂಲಕ ಇಂತಹ ಚಟುವಟಿಕೆಗಳಿಗೆ ಬ್ರೇಕ್ ಹಾಕ್ತಾರಾ ಅನ್ನೋದನ್ನ ಕಾದು ನೋಡಬೇಕು..

ಲಕ್ಷ್ಮೀಪತಿ ಕ್ರೈಂ ಬ್ಯೂರೋ ಸುದ್ದಿಟಿವಿ ಬೆಂಗಳೂರು

 Click this button or press Ctrl+G to toggle between Kannada and English