ಮೂಲವ್ಯಾಧಿ ನಿವಾರಣೆಗೆ ಇಲ್ಲಿವೆ ಸುಲಭ ಮನೆ ಪರಿಹಾರಗಳು

0
376

ಭಾರತೀಯರಲ್ಲಿ ಬಹಳ ಸಾಮಾನ್ಯವಾದ ಸಮಸ್ಯೆಯೆಂದರೆ ಅದು ಮೂಲವ್ಯಾಧಿ. ಇದನ್ನು ಪರಿಹಾರಕ್ಕಾಗಿ ನೀವು ಮೊದಲು ಮಸಾಲೆಯುಕ್ತ ಆಹಾರದ ಸೇವನೆಯನ್ನು ತ್ಯಜಿಸಬೇಕು. ಮೂಲವ್ಯಾಧಿಯನ್ನು ಹೆಮಿರೊಯಿಡ್ಸ್ ಎಂದೂ ಕರೆಯುತ್ತಾರೆ. ಇದು ಸಾಮಾನ್ಯವಾಗಿ 45 ರಿಂದ 65 ವರ್ಷ ವಯಸ್ಸಿನವರಲ್ಲಿ ಕಂಡು ಬರುತ್ತದೆ. ಕರುಳುಗಳು ಗುದನಾಳದ ಚಲನೆಯ ಸಮಯದಲ್ಲಿ ಗುದದ ಮತ್ತು ಗುದನಾಳದ ರಕ್ತನಾಳಗಳು ಉಬ್ಬಿಕೊಳ್ಳುತ್ತವೆ ಹಾಗಾಗಿ ತುರಿಕೆ, ನೋವು ಮತ್ತು ಕೆಲವೊಮ್ಮೆ ಗುದನಾಳದ ರಕ್ತಸ್ರಾವಕ್ಕೆ ಕಾರಣವಾಗುತ್ತದೆ. ಈ ಪರಿಸ್ಥಿತಿ ಹೆಚ್ಚಾಗುವುದಕ್ಕೆ ಸಾಮಾನ್ಯವಾದ ಕಾರಣವೆಂದರೆ ಮಸಾಲೆಯುಕ್ತ ಆಹಾರದ ಬಳಕೆ. ಇದು ಕೆಲವು ವಾರಗಳವರೆಗೆ ಮುಂದುವರೆದರೆ ನೀವು ಸೌಮ್ಯವಾದ ಅಸ್ವಸ್ಥತೆಗೆ ಒಳಗಾಗಬಹುದು. ಅದೃಷ್ಟವಶಾತ್ ಇಂತಹ ಹಾನಿಕಾರಕ ಅಸ್ವಸ್ಥತೆಯನ್ನು ನಿವಾರಿಸಲು ಮನೆ ಪರಿಹಾರಗಳು ಸಹಾಯಕವಾಗಿವೆ.

1. ಬೆಚ್ಚಗಿನ ಮತ್ತು ಹಾಯಾದ ಸ್ನಾನ:

ಮಲ ವಿಸರ್ಜನೆಯ ನಂತರ, ಒಂದು ಬಕೆಟ್​​​ ತುಂಬಾ ನೀರನ್ನು ತೆಗೆದುಕೊಮಡು ಅದರಲ್ಲಿ ಒಂದು ಕಪ್ ಎಪ್ಸನ್ ಉಪ್ಪು ಅಥವಾ ಸ್ವಲ್ಪ ಸೇಬುವಿನ ಸೈಡರ್ ವಿನೆಗರ್​​​​ ಅನ್ನು ಸೇರಿಸಿ ಅದರಲ್ಲಿ ಸ್ವಲ್ಪ ಸಮಯ ಕುಳಿತುಕೊಳ್ಳಿ. ಇದು ನಿಮಗೆ ಆಗುತ್ತಿರುವ ಕಿರಿಕಿರಿಯನ್ನು ಕಡಿಮೆ ಮಾಡಲು ಮತ್ತು ರಕ್ತನಾಳಗಳಲ್ಲಿನ ಊತವನ್ನು ನಿವಾರಿಸಲು ಸಹಾಯ ಮಾಡುತ್ತದೆ. ಉತ್ತಮ ಪರಿಣಾಮಕ್ಕಾಗಿ ತೆಂಗಿನ ಎಣ್ಣೆಯನ್ನೂ ಸಹ ಬಳಸಬಹುದು.

2. ಲೋಳೆಸರ:

ಈ ಮನೆಯ ಪರಿಹಾರವು ಇತರ ಅನೇಕ ಕಾಯಿಲೆಗಳನ್ನು ಚಿಕಿತ್ಸೆ ಮಾಡುವಲ್ಲಿ ಸಹಾಯಕವಾಗಿದೆಯೆಂದು ಸಾಬೀತಾಗಿದೆ. ಹಾಗೆಯೇ ಲೋಳೆಸರ ಎಂಬುದು ಮೂಲವ್ಯಾಧಿಗೆ ಉತ್ತಮ ಪರಿಹಾರವಾಗಿದೆ. ಇದು ಮೂಲವ್ಯಾಧಿಯ ಉರಿ, ತುರಿಕೆ ಮತ್ತು ಊತದ ನಿವಾರಣೆಗೆ ಸಹಾಯ ಮಾಡುತ್ತದೆ. ಲೋಳೆಸರವನ್ನು ಆಯ್ಕೆ ಮಾಡುವ ಮೊದಲು ಅದು ಶುದ್ಧವಾಗಿದೆಯೇ ಎಂದು ಖಚಿತ ಪಡಿಸಿಕೊಳ್ಳಿ ನಂತರ ಉಪಯೋಗಿಸಿ ಇಲ್ಲವಾದಲ್ಲಿ ಅದು ನಿಮ್ಮ ಸ್ಥಿತಿಯನ್ನು ಇನ್ನಷ್ಟು ದುರ್ಬಲಗೊಳಿಸುತ್ತದೆ. ನಿಮ್ಮ ಬೆರಳಿನಲ್ಲಿ ಸ್ವಲ್ಪ ಲೋಳೆಸರದ ರಸ ತೆಗೆದುಕೊಂಡು ಮೂಲವ್ಯಾಧಿಯ ಬಾಹ್ಯ ಜಾಗಕ್ಕೆ 2 ರಿಂದ 3 ದಿನಗಳವರೆಗೆ ಹಚ್ಚಿರಿ. ಲೋಳೆಸರವು ತಂಪಾಗಿ ಮತ್ತು ತಾಜಾವಾಗಿರಲು ನೀವು ಇದನ್ನು ಫ್ರಿಡ್ಜ್​​​​​ನಲ್ಲಿ ಇರಿಸಿಕೊಳ್ಳಬಹುದು.

3. ಒರೆಸುವ ಬಟ್ಟೆಗಳು:

ಒದ್ದೆಯಾದ ಬಟ್ಟೆಗಳನ್ನು ಅಥವಾ ಮಕ್ಕಳಿಗೆ ಒರೆಸುವ ಬಟ್ಟೆಗಳನ್ನು ಬಳಸಿ, ನಿರ್ದಿಷ್ಟವಾಗಿ ಲೋಳೆಸರ ಹೊಂದಿರುವ ಬಟ್ಟೆ. ಇದು ಪೀಡಿತ ಪ್ರದೇಶವನ್ನು ಹಿತವಾಗಿಸಲು ಸಹಾಯ ಮಾಡುತ್ತಾರೆ. ಮದ್ಯ ಅಥವಾ ಸುಗಂಧ ದ್ರವ್ಯದೊಂದಿಗೆ ಬೆರೆತಿರುವ ಬಟ್ಟೆಯನ್ನು ಬಳಸುವುದನ್ನು ತಪ್ಪಿಸಿ. ಅದು ಹೆಚ್ಚು ಕೆರಳಿಕೆ ಮತ್ತು ಸುಡುವ ಸಂವೇದನೆಗೆ ಕಾರಣವಾಗಬಹುದು.

4. ಮಂಜುಗಡ್ಡೆ:

ಮೂಲವ್ಯಾಧಿಗೆ ಮಂಜುಗಡ್ಡೆಯು ಉತ್ತಮ ಮನೆಯ ಪರಿಹಾರವೆಂದು ಸಾಬೀತಾಗಿದೆ. ಪೀಡಿತ ಪ್ರದೇಶದಲ್ಲಿನ ನೋವು, ಕಿರಿಕಿರಿಯನ್ನು ಮತ್ತು ಉರಿಯುವಿಕೆಯನ್ನು ಕಡಿಮೆ ಮಾಡುವಲ್ಲಿ ಇದು ಬಹಳ ಸಹಾಯಕವಾಗಿದೆ. ನೀವು ಬಟ್ಟೆಯಲ್ಲಿ ಐಸ್ ಪ್ಯಾಕ್ ಅನ್ನು ಸುತ್ತಿಕೊಂಡು ಬಾಧಿತ ಪ್ರದೇಶದ ಮೇಲೆ 15 ನಿಮಿಷಗಳ ಕಾಲ ಅನ್ವಯಿಸಬಹುದು. ನೋವಿನ ರಕ್ತಸ್ರಾವವನ್ನು ಶಾಂತಗೊಳಿಸಲು ಈ ಸಲಹೆ ತುಂಬಾ ಉಪಯುಕ್ತವಾಗಿದೆ.

5. ಆರಾಮದಾಯಕ ಉಡುಪುಗಳು:

ಬಿಗಿಯಾದ ಮತ್ತು ಮೈಗೆ ಅಂಟಿಕೊಳ್ಳುವಂತಹ ಬಟ್ಟೆಗಳನ್ನು ಧರಿಸುವುದನ್ನು ತಪ್ಪಿಸಿ. ಸಡಿಲವಾದ ಹತ್ತಿ (ಕಾಟನ್​​) ಬಟ್ಟೆ ನಿಮಗೆ ಆರಾಮವಾಗಿ ಉಸಿರಾಡಲು ಅನುಮತಿಸುತ್ತದೆ ಹಾಗಾಗಿ ಈ ಆಯ್ಕೆ ಉತ್ತಮವಾಗಿದೆ. ಹತ್ತಿ ಒಳಉಡುಪುಗಳು ನಿಮ್ಮ ಗುದ ಪ್ರದೇಶವನ್ನು ಸ್ವಚ್ಛವಾಗಿ ಮತ್ತು ಒಣಗಿಸಿ ಇರಿಸುತ್ತದೆ. ಅಲ್ಲದೆ, ಸುವಾಸಿತ ಮಾರ್ಜಕಗಳು (ಸೋಪ್​​) ಮತ್ತು ಫ್ಯಾಬ್ರಿಕ್​​ಗಳ ಬಳಕೆ ತಪ್ಪಿಸಿ. ನಿಮ್ಮ ಜೀವನಶೈಲಿಯಲ್ಲಿ, ಬಟ್ಟೆ ಮತ್ತು ಆಹಾರದಲ್ಲಿ ಬದಲಾವಣೆಯನ್ನು ತಂದರೆ ಮೂಲವ್ಯಾಧಿಯನ್ನು ನಿಭಾಯಿಸಬಹುದು. ಬಹಳ ಕಾಲ ಒಂದೇ ಸ್ಥಳದಲ್ಲಿ ಕುಳಿತುಕೊಳ್ಳಬೇಡಿ, ಮಲವಿಸರ್ಜನೆಗೆ ವಿಳಂಬ ಮಾಡಬೇಡಿ ಮತ್ತು ನಿಯಮಿತವಾಗಿ ವ್ಯಾಯಾಮ ಮಾಡಿ.

 Click this button or press Ctrl+G to toggle between Kannada and English