ಮೋದೀಜೀ ಅಚ್ಚೇ ದಿನ್ ಬಂದವೇ ಎಂದು ಪ್ರಶ್ನಿಸಿದ ಲಾಲು ಪ್ರಸಾದ್ ಯಾದವ್

0
145

ಪಾಟ್ನಾ: ನರೇಂದ್ರ ಮೋದಿಯವರೇ ಕೇಳಿ, ಲಾಲು ಹೆದರುವ ಮನುಷ್ಯನಲ್ಲ ಎಂದು ಬಿಹಾರ ಮಾಜಿ ಸಿಎಂ ಲಾಲು ಪ್ರಸಾದ್ ಯಾದವ್ ಪ್ರಧಾನಿ ವಿರುದ್ಧ ಟ್ವೀಟ್ ಮೂಲಕ ವಾಗ್ದಾಳಿ ನಡೆಸಿದ್ದಾರೆ. ನಿತೀಶ್ ಕುಮಾರ್ ಅವರನ್ನು ಹೆದರಿಸಿದಂತೆ ಬೇರೆ ಯಾರನ್ನಾದರೂ ಹೆದರಿಸಿ ಎಂದು ಅವರು ಸವಾಲೆಸೆದಿದ್ದಾರೆ. ಅಲ್ಲದೇ, ಬಿಹಾರದ 11 ಕೋಟಿ ಜನತೆ ಮತ್ತು ಪ್ರತಿಯೊಂದು ಮಗುವೂ ನನ್ನ ರಕ್ಷಕರಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎನ್​ಎಸ್​ಜಿ ಭದ್ರತೆ ವಾಪಸ್ ಪಡೆದ ಕುರಿತು ಅವರು ಈ ಮೂಲಕ ಪ್ರತಿಕ್ರಿಯಿಸಿದ್ದಾರೆ.ಬಿಹಾರ ಮಾಜಿ ಸಿಎಂ ಲಾಲು ಪ್ರಸಾದ್ ಯಾದವ್ ಅವರಿಗೆ ಟ್ವೀಟ್ ಖಾತೆಯಲ್ಲಿ 3.1 ದಶಲಕ್ಷ ಜನ ಅನುಯಾಯಿಗಳಾಗಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, ಹಲೋ, ಹಲೋ, ಹಲೋ! ದೇವರೇ! ಈಗ ಲಾಲುಗೆ 3 ದಶಲಕ್ಷ ಅನುಯಾಯಿಗಳು. ಎಲ್ಲ ಹಂತಗಳಲ್ಲೂ ನಮ್ಮ ಬೆನ್ನಟ್ಟಲಾಗುತ್ತಿದೆ ಮತ್ತು ನಮಗೆ ಕಿರುಕುಳ ನೀಡಲಾಗುತ್ತಿದೆ. ಆದರೆ, ಎಲ್ಲೆಡೆ ದೇವರು ನಮ್ಮೊಂದಿಗಿದ್ದಾನೆ. ಭದ್ರತೆಯನ್ನು ಹಿಂತೆಗೆದುಕೊಳ್ಳುವುದು ಕಡೆಯಲ್ಲ ಎಂದು ಕೂಡ ಅವರು ಟ್ವೀಟ್ ಮಾಡಿದ್ದಾರೆ.ಮೋದೀಜೀ, ಏನಿದು ಅಚ್ಚೇ ದಿನ್ ಬಂದವೇ? ಎಂದು ಲಾಲು ಪ್ರಸಾದ್ ಯಾದವ್ ಇನ್ನೊಂದು ಟ್ವೀಟ್ ಮಾಡಿದ್ದು, ಅಚ್ಚೇದಿನ್ ಹೌದೋ? ಇಲ್ಲವೋ? ಉತ್ತರಿಸಿ ಎಂದು ಪ್ರಧಾನಿ ನರೇಂದ್ರ ಮೋದಿಯವರನ್ನು ಪ್ರಶ್ನಿಸಿದ್ದಾರೆ. ಗುಜರಾತ್ ಚುನಾವಣೆಯಲ್ಲಿ ಬಿಜೆಪಿ ಸಮಾವೇಶದ ಖಾಲಿ ಕುರ್ಚಿಗಳ ವೀಡಿಯೋ ಒಂದನ್ನು ಅವರು ಟ್ವೀಟ್ ಮಾಡಿದ್ದು, ಲಾಲು ವಿರುದ್ಧ ಮೋದಿ ಬೆಂಬಲಿಗರು ಮುಗಿಬಿದ್ದು ವಾಗ್ದಾಳಿ ನಡೆಸುತ್ತಿದ್ದಾರೆ.

 Click this button or press Ctrl+G to toggle between Kannada and English