ಕಡೆಗೂ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕೊಹ್ಲಿ, ಅನುಷ್ಕಾ…

0
174

ಕದ್ದು ಮುಚ್ಚಿ ಒಡಾಟ.. ಹಲವು ವರ್ಷಗಳಿಂದ ಪ್ರಿಯತಮೆಯ ಜೊತೆ ಸುತ್ತಾಟ.. ಮಾದ್ಯಮಗಳ ತಾರಾ ಸಂಬಂಧದ ಕೆದಕಾಟ.. ಮದುವೆ ಯಾವಾಗ ಎಂಬ ಲೆಕ್ಕಾಚಾರದ ಹುಡುಕಾಟ.. ಇಷ್ಟೆಲ್ಲಾ ಹೇಳಿದ್ಮೇಲೆ ನಿಮ್ಗೆ ಗೊತ್ತಾಗಿರ್ಬೇಕಲ್ವಾ.. ಟೀಂ ಇಂಡಿಯಾ ನಾಯಕ ಕೊಹ್ಲಿ ಹಾಗೂ ನಟಿ ಅನುಷ್ಕಾ ಶರ್ಮ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.. ಈ ಜೋಡಿಗೆ ದೇಶಾದ್ಯಂತ ಕೋಟ್ಯಂತರ ಅಭಿಮಾನಿಗಳು.. ಒಂದು ಕಡೆ ಕ್ರಿಕೆಟ್​ ಅಭಿಮಾನಿಗಳಾದರೆ ಮತ್ತೊಂದು ಕಡೆ ಸಿನಿ ಪ್ರಿಯರು.. ಅಂತೂ ಹಲವು ವರ್ಷಗಳಿಂದ ಬಹಳ ಕುತೂಹಲ ಮೂಡಿಸಿದ್ದ ವಿರಾಟ್​ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಮದುವೆ ಇಟಲಿಯಲ್ಲಿ ವೈಭವೋಪೇರಿತವಾಗಿ ನಡೆದಿದೆ.. ಸಪ್ತಪದಿ ತುಳಿಯುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.. ಈ ಮೂಲಕ ಸುಮಾರು 5 ರಿಂದ 6 ವರ್ಷಗಳ ಲವ್​ ಸ್ಟೋರಿಗೆ ಕಂಕಣ ಭಾಗ್ಯದ ಮುದ್ರೆ ಬಿದ್ದಿದೆ…

ಇಟಲಿಯ ಟಸ್ಕಾನ್‌ ನಗರದ ಸಮೀಪವಿರುವ ಬೊರ್ಗೊ ಫಿನೊಚಿಯೆಟಾ ರೆಸಾರ್ಟ್​ನಲ್ಲಿ ವಿರಾಟ್​ ಮತ್ತು ಅನುಷ್ಕಾ ಸಪ್ತಪದಿ ತುಳಿದಿದ್ದಾರೆ.. ಈ ವಿವಾಹ ಮಹೋತ್ಸವದಲ್ಲಿ 2 ಕುಟುಂಬದ ಸದಸ್ಯರು ಹಾಗೂ ಆಪ್ತರು ಮಾತ್ರ ಭಾಗವಹಿಸಿದ್ದರು. ಇನ್ನು ಮದುವೆ ಫೋಟೊಗಳನ್ನು ವಿರಾಟ್‌ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಇಂದು ನಾವು ಒಬ್ಬರಿಗೊಬ್ಬರು ಪ್ರೀತಿಯಲ್ಲಿ ಬದ್ಧರಾಗಿರುತ್ತೇವೆ ಎಂದು ಭರವಸೆ ನೀಡುತ್ತಿದ್ದೇವೆ. ಈ ಸುದ್ದಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸುತ್ತಿದ್ದೇವೆ. ಈ ಸುಂದರವಾದ ದಿನ ನಮ್ಮ ಅಭಿಮಾನಿಗಳ ಪ್ರೀತಿ ಹಾಗೂ ಕುಟುಂಬದವರ ಬೆಂಬಲ ಹೆಚ್ಚು ವಿಶೇಷವಾಗಿಸಿದೆ. ನಮ್ಮ ಪ್ರಯಾಣದ ಭಾಗವಾಗಿರುವುದಕ್ಕೆ ಎಲ್ಲರಿಗೂ ಧನ್ಯವಾದಗಳು’ ಎಂದು ಕೊಹ್ಲಿ ಟ್ವೀಟ್‌ ಮಾಡಿದ್ದಾರೆ.ಇನ್ನು ಮುಂದಿನ ವಾರ ಮುಂಬೈನಲ್ಲಿ ಅದ್ಧೂರಿ ಆರತಕ್ಷತೆ ಕಾರ್ಯಕ್ರಮ ಕೂಡ ನಡೆಯಲಿದೆ.. ಅಲ್ಲಿ ಮತ್ತಷ್ಟು ಆಪ್ತರು ಬರುವ ನಿರೀಕ್ಷೆ ಇದೆ..
ನ್ಯೂಸ್​ ಬ್ಯೂರೋ ಸುದ್ದಿ ಟಿವಿ…

 Click this button or press Ctrl+G to toggle between Kannada and English