ವಿಷ್ಣು ಸ್ಮಾರಕ ಸ್ಥಳಾಂತರಕ್ಕೆ ಅಭಿಮಾನಿಗಳಿಂದ ವಿರೋಧ

0
144

ನೆಲಮಂಗಲ: ವಿಷ್ಣು ಸಮಾಧಿಯ ವಿಚಾರದಲ್ಲಿ ಕಿಚ್ಚ ಸುದೀಪ್​​​ ಮುಂದಾಳತ್ವಕ್ಕೆ ವಿಷ್ಣು ಅಭಿಮಾನಿಗಳು ಬೆಂಬಲ ಸೂಚಿಸಿದ್ದಾರೆ. ಬೆಂಗಳೂರು ಹೊರವಲಯದ ನೆಲಮಂಗಲ ಪಟ್ಟಣದ ಹೊನ್ನಗಂಗಯ್ಯನಪಾಳ್ಯದ ವಿಷ್ಣುಮಂದಿರದ ಬಳಿ ಪ್ರತಿಭಟನೆ ನಡೆಸಿದ ಅಭಿಮಾನಿಗಳು, ಸ್ಮಾರಕ ಸ್ಥಳಾಂತರಕ್ಕೆ ವಿರೋಧ ವ್ಯಕ್ತಪಡಿಸಿದರು. ಸುದೀಪ್​​ ನಿಲುವಿಗೆ ಬೆಂಬಲ ಸೂಚಿಸಿ, ಅಭಿಮಾನ್ಯು ಸ್ಟುಡಿಯೋದಲ್ಲಿ ಸ್ಮಾರಕ ನಿರ್ಮಾಣ ಮಾಡಿ, ಪುಣ್ಯಭೂಮಿ ಎಂದು ಘೋಷಿಸಬೇಕು ಎಂದು ಸರ್ಕಾರಕ್ಕೆ ಆಗ್ರಹಿಸಿದರು. ಕಿಚ್ಚ ಸುದೀಪ ಪರ ಹೋರಟಕ್ಕೆ ಬೆಂಬಲ ಸೂಚಿಸುವುದಾಗಿ ಅಭಿಮಾನಿಗಳು ತಿಳಿಸಿದ್ದು, ಸರ್ಕಾರ ಕೂಡಲೇ ಮಧ್ಯ ಪ್ರವೇಶಿಸಿಸಬೇಕೆಂದು ಆಗ್ರಹಿಸಿದರು.

 Click this button or press Ctrl+G to toggle between Kannada and English