ಆಂಗ್ಲರ ದಾಳಿಗೆ ತತ್ತರಿಸಿದ ಆಸೀಸ್..!

0
214

ಮೆಲ್ಬೋರ್ನ್ ಅಂಗಳದಲ್ಲಿ ನಡೆಯುತ್ತಿರುವ ಆ್ಯಶಸ್ ಸರಣಿಯ ನಾಲ್ಕನೇ ಟೆಸ್ಟ್​ನ 2ನೇ ದಿನದಾಟದಲ್ಲಿ ಇಂಗ್ಲೆಂಡ್ ತಂಡ ಮೇಲುಗೈ ಸಾಧಿಸಿದೆ. 2ನೇ ದಿನ ಆಂಗ್ಲ ಬೌಲರ್​ಗಳು ಸೂಪರ್ ಸ್ಪೆಲ್ ಮಾಡೋ ಮೂಲಕ ಆಸ್ಟ್ರೇಲಿಯಾವನ್ನ 327 ರನ್​ಗಳಿಗೆ ಕಟ್ಟಿಹಾಕಿದ್ದಾರೆ. ಮೊದಲ ದಿನದಾಟದಲ್ಲಿ 3 ವಿಕೆಟ್ ನಷ್ಟಕ್ಕೆ 244 ರನ್ ಗಳಿಸಿದ್ದ ಆಸೀಸ್, 2ನೇ ದಿನ ಟೀ ಬ್ರೇಕ್​ ಒಳಗಡೆಯೇ ಆಲೌಟ್ ಆಯಿತು. ಅರ್ಧಶತಕ ಸಿಡಿಸಿದ್ದ ನಾಯಕ ಸ್ಟೀವನ್ ಸ್ಮಿತ್ ಹಾಗೂ 31 ರನ್ ಗಳಿಸಿದ್ದ ಶಾನ್ ಮಾರ್ಷ್ ಜೋಡಿಗೆ ಆರಂಭದಲ್ಲೇ ಇಂಗ್ಲೆಂಡ್ ಬೌಲರ್​ಗಳು ಪೆವಿಲಿಯನ್ ದಾರಿ ತೋರಿಸಿದರು. ಟಾಮ್ ಕುರೇನ್​ಗೆ ಸ್ಮಿತ್ ವಿಕೆಟ್ ಒಪ್ಪಿಸಿದ್ರೆ, ಅರ್ಧಶತಕ ಸಿಡಿಸಿದ್ದ ಶಾನ್ ಮಾರ್ಷ್, ಸ್ಟುವರ್ಟ್ ಬ್ರಾಡ್​ಗೆ ಎಲ್​ಬಿಡಬ್ಲೂ ಆದರು.ಬಳಿಕ ಕ್ರೀಸ್​ಗೆ ಬಂದ ಆಲ್​ರೌಂಡರ್ ಮಿಚೆಲ್ ಮಾರ್ಷ್ ಕೂಡ ಎರಡಂಕಿ ಮೊತ್ತ ದಾಟುವಷ್ಟರಲ್ಲಿ ಕ್ರೀಸ್ ವೋಕ್ಸ್ ​ಬೌಲಿಂಗ್​ನಲ್ಲಿ ಔಟಾದರು. 24 ರನ್ ಗಳಿಸಿದ್ದ ಟೀಮ್ ಪೈನೆಗೆ ಜೇಮ್ಸ್ ಆ್ಯಂಡರ್ಸನ್ ಖೆಡ್ಡಾ ತೋಡಿದರು. ಇನ್ನು, ಕೆಳಕ್ರಮಾಂಕದ ಆಟಗಾರರು ಕೂಡ ಎರಡಂಕಿ ಮೊತ್ತ ದಾಟಲಿಲ್ಲ. ಅಂತಿಮವಾಗಿ ಸ್ಮಿತ್ ಪಡೆ ಮೊದಲ ಇನ್ನಿಂಗ್ಸ್​ನಲ್ಲಿ 327 ರನ್​​ಗಳಿಗೆ ಆಲೌಟ್ ಆಯಿತು. ಇಂಗ್ಲೆಂಡ್ ಪರ ವೇಗಿ ಸ್ಟುವರ್ಟ್ ಬ್ರಾಡ್ 4 ವಿಕೆಟ್ ಪಡೆದರೆ, ಜೇಮ್ಸ್ ಆ್ಯಂಡರ್ಸನ್ 3 ಹಾಗೂ ಕ್ರೀಸ್ ವೋಕ್ಸ್ 2 ವಿಕೆಟ್ ಪಡೆದು ಮಿಂಚಿದರು.ಇನ್ನು, ಆಸೀಸ್ ಬಳಿಕ ಮೊದಲ ಇನ್ನಿಂಗ್ಸ್ ಆರಂಭಿಸಿರೋ ಇಂಗ್ಲೆಂಡ್ ತಂಡಕ್ಕೆ ಆಸೀಸ್ ಸ್ಪಿನ್ನರ್ ನಥಾನ್ ಲಿಯಾನ್ ಆಘಾತ ನೀಡಿದರು. ಆರಂಭಿಕ ಆಟಗಾರ ಮಾರ್ಕಸ್ ಸ್ಟೊಯಿನಿಸ್ ಕೇವಲ 15 ರನ್​​ಗೆ ವಿಕೆಟ್ ಒಪ್ಪಿಸಿದರು. ಬಳಿಕ ಕ್ರೀಸ್​ಗೆ ಬಂದ ಜೇಮ್ಸ್ ವಿನ್ಸೆ ಕೂಡ 17 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡರು. ಆದರೆ ಒಂದೆಡೆ ವಿಕೆಟ್ ಬೀಳ್ತಾ ಇದ್ದರೂ ಆಸೀಸ್ ಬೌಲರ್​ಗಳನ್ನ ಕಾಡಿದ ಅಲೆಸ್ಟರ್ ಕುಕ್ ಸ್ಮಿತ್ ಬೌಲರ್​ಗಳ ಮೇಲೆ ಸವಾರಿ ಮಾಡಿದರು. ಅಲ್ಲದೆ ಟೆಸ್ಟ್ ಕ್ರಿಕೆಟ್​ನಲ್ಲಿ 32ನೇ ಶತಕ ಸಿಡಿಸಿ ಮಿಂಚಿದರು. ಕಳೆದ ಮೂರು ಟೆಸ್ಟ್​​ಗಳಲ್ಲೂ ರನ್ ಬರ ಎದುರಿಸಿದ್ದ ಕುಕ್, ಬಾಕ್ಸಿಂಗ್ ಡೇ ಟೆಸ್ಟ್​ನಲ್ಲಿ ಕಂಬ್ಯಾಕ್ ಮಾಡಿದರು. ಅವರ ಇನ್ನಿಂಗ್ಸ್​ನಲ್ಲಿ 15 ಬೌಂಡರಿಗಳಿದ್ದವು.ಅಲ್ಲದೆ 3ನೇ ವಿಕೆಟ್​​ಗೆ ಕುಕ್ ನಾಯಕ ಜೋ ರೂಟ್ ಜೊತೆಗೂಡಿ 112 ರನ್​ಗಳ ಜೊತೆಯಾಟವಾಡಿದರು. ಅಂತಿಮವಾಗಿ 2ನೇ ದಿನದ್ಯಂತಕ್ಕೆ ರೂಟ್ ಪಡೆ 2ವಿಕೆಟ್​ ನಷ್ಟಕ್ಕೆ 192 ರನ್ ಗಳಿಸಿದೆ. ಕ್ರೀಸ್​ನಲ್ಲಿ ಅಜೇಯ ಶತಕ ಸಿಡಿಸಿರೋ ಕುಕ್ ಹಾಗೂ 49 ರನ್ ಗಳಿಸಿರೋ ರೂಟ್ 3ನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ. ಒಟ್ನಲ್ಲಿ ಮೊದಲ ದಿನ ಆಸೀಸ್ ಬ್ಯಾಟಿಂಗ್​ನಲ್ಲಿ ಅಬ್ಬರಿಸಿದ್ರೆ, 2ನೇ ದಿನ ಸಂಪೂರ್ಣ ಇಂಗ್ಲೆಂಡ್ ತಂಡದ್ದೇ ಆಟವಾಗಿತ್ತು. ಮೊದಲಾವಧಿಯಲ್ಲಿ ಬೌಲರ್​​ಗಳು ಮಿಂಚಿದ್ರೆ, 2ನೇ ಅವಧಿಯಲ್ಲಿ ಬ್ಯಾಟ್ಸಮನ್​ಗಳು ಕಮಾಲ್ ಮಾಡಿದರು.

 Click this button or press Ctrl+G to toggle between Kannada and English