ಅಂಗಡಿಗಳ ಬಾಗಿಲು ಮುರಿದು ದುಷ್ಕರ್ಮಿಗಳಿಂದ ಸರಣಿ ಕಳ್ಳತನ

0
141

ಮಂಡ್ಯ: ಕೆ.ಆರ್.ಪೇಟೆ ಪಟ್ಟಣದಲ್ಲಿ ನಿನ್ನೆ ತಡರಾತ್ರಿ ವಿವಿಧ ಅಂಗಡಿಗಳ ಬಾಗಿಲು ಮುರಿದು ದುಷ್ಕರ್ಮಿಗಳು ಸರಣಿ ಕಳ್ಳತನ ನಡೆಸಿದ್ದಾರೆ. ಸಾರ್ವಜನಿಕ ಅಸ್ಪತ್ರೆಯ ಮುಂಭಾಗದ ದೀಪ್ತಿ ಮೆಡಿಕಲ್ಸ್, ಗಣೇಶ ಮೆಡಿಕಲ್ಸ್ ಮೈಸೂರು ರಸ್ತೆಯ ಜನನಿ ಮೆಡಿಕಲ್ಸ್ ಮತ್ತು ಹೊಸಹೊಳಲು ಗ್ರಾಮದ ವ್ಯವಸಾಯ ಸೇವಾ ಸಹಕಾರ ಸಂಘದ ಗೊಬ್ಬರ ವಿಭಾಗದ ಬಾಗಿಲು ಮುರಿದು ಚಾಲಾಕಿ ಕಳ್ಳರು ಕಳ್ಳತನ ಮಾಡಿದ್ದಾರೆ. ಕೆ.ಆರ್.ಪೇಟೆ ಪಟ್ಟಣ ಪೋಲಿಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಹೆಚ್.ಎಸ್. ವೆಂಕಟೇಶ್ ಮತ್ತು ಸರ್ಕಲ್ ಇನ್ಸ್ ಪೆಕ್ಟರ್ ಹೆಚ್.ಬಿ.ವೆಂಕಟೇಶಯ್ಯ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಳ್ಳರ ಬಂಧನಕ್ಕೆ ಪೋಲಿಸರು ಬಲೆ ಬೀಸಿದ್ದಾರೆ.

 Click this button or press Ctrl+G to toggle between Kannada and English