ಟ್ರಂಪ್ ಜೊತೆ ಕಿಮ್ ಜಾಂಗ್ ಉನ್ ಮಾತುಕತೆಗೆ ಸಿದ್ಧ: ದಕ್ಷಿಣ ಕೊರಿಯಾ ಹೇಳಿಕೆ

0
125

ವಾಷಿಂಗ್ಟನ್: ಉತ್ತರ ಕೊರಿಯಾದ ಅಧ್ಯಕ್ಷ ಕಿಮ್ ಜಾಂಗ್ ಉನ್ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿಯಾಗಲು ಮುಂದಾಗಿದ್ದಾರೆ. ಈ ವಿಷಯವನ್ನು ವೈಟ್​ಹೌಸ್​​ನಲ್ಲಿ ಸುದ್ದಿ ಗೋಷ್ಠಿ ನಡೆಸಿದ ದಕ್ಷಿಣ ಕೊರಿಯಾ ರಾಷ್ಟ್ರೀಯ ಭದ್ರತಾ ಸಲಹೆಗಾರ ಚುಂಗ್ ಯು ಯಾಂಗ್ ತಿಳಿಸಿದ್ದಾರೆ. ಕಿಮ್ ಜಾಂಗ್ ಉನ್ ಅವರನ್ನು ಮೇ ತಿಂಗಳಲ್ಲಿ ಭೇಟಿಯಾಗಲು ಸಹಮತ ವ್ಯಕ್ತಪಡಿಸಿದ್ದಾರೆ ಎಂದರು. ಭೇಟಿಯಿಂದಾಗಿ ಕಳೆದ ಕೆಲ ತಿಂಗಳಿಂದ ಅಮೆರಿಕ – ಕೊರಿಯಾ ನಡುವೆ ನಡೆಯುತ್ತಿದ್ದ ಶೀತಲ ಸಮರಕ್ಕೆ ತಡೆ ಬೀಳುವ ನಿರೀಕ್ಷೆ ಇದೆ.

ಉತ್ತರ ಕೊರಿಯಾ ಅಣ್ವಸ್ತ್ರ ನಿಷೇಧ ಕುರಿತು ಮಾತನಾಡಲು ಉದ್ದೇಶಿಸಿದ ಕ್ರಮ ಆ ದೇಶದಲ್ಲಿ ಪರಿವರ್ತನೆ ತರಲಿದೆ ಎಂದು ಜಪಾನ್ ಪ್ರಧಾನಿ ಶಿಂಜೋ ಅಬೆ ಹೇಳಿದ್ದಾರೆ. ಈ ಕುರಿತು ಅಮೆರಿಕ – ಜಪಾನ್ ಶೃಂಗಸಭೆ ವೇಳೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ಮಾತನಾಡಿದ್ದೆ ಎಂದ ಅವರು, ಇದು ಅಮೆರಿಕ, ಜಪಾನ್, ದಕ್ಷಿಣ ಕೊರಿಯಾ ಮತ್ತು ಅಂತಾರಾಷ್ಟ್ರೀಯ ಸಮುದಾಯ ಉತ್ತರ ಕೊರಿಯಾದ ಮೇಲೆ ನಿರಂತರವಾಗಿ ಹಾಕಿದ ಒತ್ತಡದ ಪರಿಣಾಮ ಎಂದು ಅಭಿಪ್ರಾಯಪಟ್ಟಿದ್ದಾರೆ.

 Click this button or press Ctrl+G to toggle between Kannada and English