ನಿದಹಾಸ್​ ತ್ರಿಕೋನ ಟಿ-20 ಟೂರ್ನಿ..

0
182

ಶ್ರೀಲಂಕಾದಲ್ಲಿ ನಡೆಯುತ್ತಿರುವ ನಿದಹಾಸ್​​ ತ್ರಿಕೋನ ಟಿ-20 ಸರಣಿಯ 4ನೇ ಪಂದ್ಯದಲ್ಲಿ ಶ್ರೀಲಂಕಾ-ಭಾರತ ತಂಡಗಳು ಕಾದಾಟ ನಡೆಸಿದವು. ಆರಂಭದಲ್ಲಿ ಪಂದ್ಯಕ್ಕೆ ಮಳೆ ಅಡ್ಡಿ ಪಡಿಸಿದ್ದರಿಂದ ಓವರ್​​​ಗಳಿಗೆ ಕತ್ತರಿ ಬಿದ್ದಿತು. ಪರಿಣಾಮ 19 ಓವರ್​​ಗಳಿಗೆ ಪಂದ್ಯ ನಿಗದಿ ಪಡಿಸಲಾಯಿತು. ಟಾಸ್​​ ಸೊತರೂ ಮೊದಲು ಬ್ಯಾಟ್​ ಮಾಡುವ ಅವಕಾಶ ಪಡೆದ ಶ್ರೀಲಂಕಾ ಕಳಪೆ ಆರಂಭವನ್ನು ಕಂಡಿತು. ಧನುಷ್ಕಾ ಗುಣತಿಲಕ, ಕುಸಾಲ್​ ಪೆರೆರಾ ಜವಾಬ್ದಾರಿ ಮರೆತರು. 3ನೇ ವಿಕೆಟ್​​ಗೆ ಜೊತೆಯಾದ ಕುಸಾಲ್​​ ಮೆಂಡಿಸ್​​ ಹಾಗೂ ಉಪುಲ್​ ತರಂಗಾ ತಂಡವನ್ನು ಸಂಕಷ್ಟದಿಂದ ಪಾರು ಮಾಡಿದ್ರು. ಈ ಜೋಡಿ ಟೀಮ್​ ಇಂಡಿಯಾದ ಬೌಲರ್​​ಗಳ ಮೈ ಚಳಿ ಬಿಡಿಸಿತು. 46 ಎಸೆತಗಳಲ್ಲಿ ಜೋಡಿ ತಂಡಕ್ಕೆ 62 ರನ್​ ಕಾಣಿಕೆ ನೀಡಿತು.

ಮಧ್ಯಮ ಕ್ರಮಾಂಕದಲ್ಲಿ ತಿಸಾರ್​ ಪೆರೆರಾ, ಜೀವನ್​​ ಮೆಂಡಿಸ್​​, ದಸುನ್​ ಶನಕ್​​ ದೊಡ್ಡ ಇನ್ನಿಂಗ್ಸ್​ ಕಟ್ಟಲಿಲ್ಲ.ಆದ್ರೆ ಆರಂಭಿಕ ಕುಸಾಲ್​ ಮೆಂಡಿಸ್​​ ಸಮಯೋಚಿತ ಬ್ಯಾಟಿಂಗ್​​ ನಡೆಸಿದ್ರು. 38 ಎಸೆತಗಳಲ್ಲಿ ಮೆಂಡಿಸ್​​ 3 ಬೌಂಡರಿ, 3 ಸಿಕ್ಸರ್​ ನೆರವಿನಿಂದ 58 ರನ್​ ಬಾರಿಸಿ ಔಟಾದ್ರು.ಅಂತಿಮವಾಗಿ ಶ್ರೀಲಂಕಾ 19 ಓವರ್​​ಗಳಲ್ಲಿ 9 ವಿಕೆಟ್​​ಗೆ 152 ರನ್​ ಕಲೆ ಹಾಕಿತು. ಟೀಮ್​ ಇಂಡಿಯಾ ಪರ ಶಾರ್ದೂಲ್​ 4, ವಾಶಿಂಗ್ಟನ್​ ಸುಂದರ್​ 2 ವಿಕೆಟ್​ ಪಡೆದ್ರೆ, ಜಯದೇವ್​ ಉನ್​​ದ್ಕಟ್​​, ವಿಜಯ್​ ಶಂಕರ್​, ಯಜುವೇಂದ್ರ ಚಹಾಲ್​​ ತಲಾ ಒಂದು ವಿಕೆಟ್​ ಪಡೆದ್ರು. ಇನ್ನು ಸಾಧಾರಣ ಗುರಿಯನ್ನು ಹಿಂಬಾಲಿಸಿದ ಟೀಮ್ ಇಂಡಿಯಾದ ಓಪನರ್ಸ್​​​ ರನ್​​ ಕಲೆ ಹಾಕುವಲ್ಲಿ ವಿಫಲರಾದ್ರು. ರೋಹಿತ್​ ಶರ್ಮಾ ಹಾಗೂ ಶಿಖರ್​ ಧವನ್​​ ಜವಾಬ್ದಾರಿ ಮರೆತರು.

ಮೂರನೇ ಕ್ರಮಾಂಕದಲ್ಲಿ ಆಡುವ ಅವಕಾಶ ಪಡೆದ ಕನ್ನಡಿಗ ಕೆ.ಎಲ್​ ರಾಹುಲ್​​ 18 ರನ್​​ಗಳಿಸಿ ಔಟಾದ್ರು. 3ನೇ ವಿಕೆಟ್​​ಗೆ ಸುರೇಶ್​ ರೈನಾ ಹಾಗೂ ಮನೀಶ್​ ಪಾಂಡೆ ತಂಡಕ್ಕೆ ಕೊಂಚ ಚೇತರಿಕೆ ನೀಡಿದ್ರು. ಈ ಜೋಡಿ 40 ರನ್​ ಜೊತೆಯಾಟ ನೀಡಿ ತಂಡಕ್ಕೆ ನೆರವಾಯಿತು. ಇಲ್ಲದ ಹೊಡೆತಕ್ಕೆ ಮುಂದಾದ ರೈನಾ 27 ರನ್​​ಗಳಿಗೆ ಪೆವಿಲಿಯನ್​ ಸೇರಿದ್ರು. ಇನ್ನು ಒತ್ತಡದಲ್ಲಿದ್ದ ತಂಡಕ್ಕೆ ದಿನೇಶ್​ ಕಾರ್ತಿಕ್​ ಹಾಗೂ ಮನೀಶ್​ ಪಾಂಡೆ ಆಧಾರವಾದ್ರು. ಈ ಜೊಡಿ ಶ್ರೀಲಂಕಾ ಬೌಲರ್​​ಗಳ ಮೈಚಳಿ ಬಿಡಿಸಿತು. ಅಲ್ಲದೆ ತಂಡಕ್ಕೆ ಅಗತ್ಯ ರನ್​ ಕಲೆ ಹಾಕುವಲ್ಲಿ ಪ್ರಮುಖ ಪಾತ್ರ ವಹಿಸಿದ್ರು. ದಿನೇಶ್​ ಕಾರ್ತಿಕ 25 ಎಸೆತಗಳಲ್ಲಿ 39 ರನ್​ ಬಾರಿಸಿದ್ರೆ, ಮನೀಶ್​ ಪಾಂಡೆ 42 ರನ್​ ಬಾರಿಸಿ ಗೆಲುವಿನಲ್ಲಿ ಮಿಂಚಿದ್ರು. ಈ ಮೂಲಕ ಎರಡೂ ಪಂದ್ಯಗಳನ್ನು ಗೆದ್ದು ಕೊಂಡ ಟೀಮ್​ ಇಂಡಿಯಾ ಫೈನಲ್​​ ಕನಸು ಕಾಣುತ್ತಿದೆ.
ಸ್ಪೋರ್ಟ್ಸ್​​ ಬ್ಯೂರೋ, ಸುದ್ದಿಟಿವಿ

 Click this button or press Ctrl+G to toggle between Kannada and English