ಸಖತ್​ ವೈರಲ್ ಆಗಿದೆ ವಿರಾಟ್ -ಅನುಷ್ಕಾ ಪೋಟೋ..

0
161

ಶ್ರೀಲಂಕಾದಲ್ಲಿ ನಡೆಯುತ್ತಿರುವ ಟಿ-20 ತ್ರಿಕೋನ ಸರಣಿಯಿಂದ ವಿರಾಟ್​ ಹೇಗೆಲ್ಲಾ ರಜೆಯ ಮಜಾ ಪಡೆಯುತ್ತಿದ್ದಾರೆ. ವಿರಾಟ್​ ಕೊಹ್ಲಿ, ಕ್ರಿಕೆಟ್​ ಜಗತ್ತಿನ ಸದ್ಯದ ಟ್ರೆಂಡಿಂಗ್ ಸ್ಟಾರ್​. ಮೈದಾನದಲ್ಲಿ ತಮ್ಮ ಅಬ್ಬರದ ಬ್ಯಾಟಿಂಗ್ ಮೂಲಕ ಪಂದ್ಯದಿಂದ ಪಂದ್ಯಕ್ಕೆ ಹೊಸ ದಾಖಲೆ ಬರಿತಿದಾರೆ. ಹಳೆಯ ದಾಖಲೆಗಳನ್ನು ತಮ್ಮ ಹೆಸರಿಗೆ ವರ್ಗಾಯಿಸಿಕೊಳ್ಳುತ್ತಿದ್ದಾರೆ. ಕ್ರಿಕೆಟ್ ಕಿಂಗ್, ಚೇಸಿಂಗ್ ಕಿಂಗ್, ರನ್ ಮಷಿನ್ ಎಂದೆಲ್ಲಾ ಕರೆಸಿಕೊರಳುತ್ತಿರುವ ವಿರಾಟ್​​​ ಯುವಕರ ಹಾಟ್​ ಫೆವರೀಟ್​​​. ಇಷ್ಟೆಲ್ಲಾ ಸಾಧನೆ ಮಾಡಿರುವ ವಿರಾಟ್ ಈಗ ನಿಂತ್ರು ಸುದ್ದಿ ಕುಂತ್ರು ಸುದ್ದಿ ಎನ್ನುವಂತಾಗಿದೆ.ದೇಶ, ವಿದೇಶ ಎಂಬ ಭೇಧ ಭಾವ ಮಾಡದೆ ರನ್​ಗಳನ್ನು ಗುಡ್ಡೆ ಹಾಕುವ ವಿರಾಟ್​ ಫ್ಯಾನ್​​ ಫಾಲೋವರ್ಸ್​​ ಹೆಚ್ಚು. ವಿರಾಟ್​ ಟ್ವಿಟ್ಟರ್​ನಲ್ಲಿ ಅತಿಹೆಚ್ಚು ಹಿಂಬಾಲಕರನ್ನು ಹೊಂದಿರುವ ಭಾರತದ ಟಾಪ್​ 10 ಸೆಲೆಬ್ರಿಟಿಗಳಲ್ಲಿ ಒಬ್ಬರಾಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ವಿರಾಟ್​​ರ ಪ್ರತಿ ಪೋಟೋಗೆ ಕ್ಷಣಾರ್ಧದಲ್ಲಿ ಲಕ್ಷಾಂತರ ಲೈಕ್​ಗಳು, ಸಾವಿರಾರು ಕಾಮೆಂಟ್​ಗಳು, ಶೇರ್​ಗಳು ಬರುತ್ವೆ, ಅದೇ ರೀತಿಯಲ್ಲಿ ವಿರಾಟ್​ ಸಾಮಾಜಿಕ ತಾಣದಲ್ಲಿ ಅಪಲೋಡ್ ಮಾಡಿರುವ ಒಂದು ಪೋಟೊ ಈಗ ಸಖತ್​ ವೈರಲ್ ಆಗಿದೆ.

ಜಗತ್ತಿನಲ್ಲಿ ಅತಿಹೆಚ್ಚು ಸಂಭಾವನೆ ಪಡೆಯುವ ಅಥ್ಲೀಟ್​ಗಳಲ್ಲಿ ಒಬ್ಬರಾಗಿರುವ ವಿರಾಟ್, ಹಾಗೂ ಬಾಲಿವುಡ್​ನ ಬಹುಬೇಡಿಕೆಯ ನಾಯಕ ನಟಿಯಾಗಿರುವ ಅನುಷ್ಕಾ ಶರ್ಮಾ, ಐದು ವರ್ಷಗಳಿಂದ ಪ್ರಣಯ ಪಕ್ಷಿಗಳಾಗಿ ಸುತ್ತಾಡಿ, ಕೊನೆಗೆ ಕಳೆದ ವರ್ಷ ಡಿಸೆಂಬರ್​ನಲ್ಲಿ ಗುರುಹಿರಿಯರ ತಮ್ಮ ಜೀವನದ ಹೊಸ ಇನ್ನಿಂಗ್ಸ್ ಶುರಮಾಡಿದ್ರು. ಆದ್ರೆ ಮದುವೆಯಾಗಿ ಕೆಲ ದಿನಕ್ಕೆ ಟೀಮ್ ಇಂಡಿಯಾ ಹರಿಣಗಳ ನಾಡಿಗೆ ಪ್ರವಾಸ ಬೆಳೆಸಿದ್ದರಿಂದ, ಈ ನವಜೋಡಿ ಜೊತೆಯಾಗಿ ಕಳೆಯೋದಿಕ್ಕೆ ಹೆಚ್ಚಿನ ಸಮಯ ಸಿಕ್ಕಿರಲಿಲ್ಲ. ಫ್ಯಾಮಿಲಿ ಹಾಗೂ ಆಟ ಎರಡನ್ನೂ ಬ್ಯಾಲೆನ್ಸ್​ ಮಾಡಿಕೊಂಡು ನಡೆದಿರುವ ವಿರಾಟ್​​, ಸದ್ಯ ರೆಸ್ಟ್​​​ನಲ್ಲಿದ್ದಾರೆ..ಟೀಮ್ ಇಂಡಿಯಾ ಈಗ ಶ್ರೀಲಂಕಾದಲ್ಲಿ ತ್ರಿಕೋನ ಟಿ-20 ಸರಣಿ ಆಡುವಲ್ಲಿ ಬ್ಯುಸಿಯಾಗಿದೆ. ಆದ್ರೆ ಈ ಸರಣಿಯಿಂದ ವಿಶ್ರಾಂತಿ ಪಡೆದಿರುವ ವಿರಾಟ್ ಮಾತ್ರ ತಮ್ಮ ಮನದನ್ನೆಯ ಜೊತೆಗೆ ಮಜಾ ಮಾಡುವ ಮೂಡ್​ನಲ್ಲಿದ್ದಾರೆ..

ವಿರಾಟ್ ತಮ್ಮ ಟ್ವಿಟ್ಟರ್​ ಖಾತೆಯಲ್ಲಿ ಅಭಿಮಾನಿಗಳೊಂದಿಗೆ ಹಂಚಿಕೊಂಡಿರುವ ಪೋಟೋ ಸಖತ್​ ವೈರಲ್​ ಆಗಿದೆ. ತನ್ನ ಮುದ್ದಿನ ಹೆಂಡತಿ ಜೊತೆ ಸೆಲ್ಫಿಗೆ ಪೋಸ್​ ನೀಡಿರುವ ವಿರಾಟ್​, ಅದಕ್ಕೆ ಚಿಲ್ಲಿಂಗ್ ಆ್ಯಂಡ್ ಹೌ..!ಎಂಬ ಅಡಿಬರಹ ನೀಡಿದ್ದಾರೆ. ಈ ಪೋಟೊಗೆ ಈವರೆಗೂ 93ಸಾವಿರ ಜನ ಲೈಕ್ ಬಟನ್ ಒತ್ತಿದ್ರೆ. 5 ಸಾವಿರಕ್ಕೂ ಹೆಚ್ಚಿನ ಜನ ರಿ ಟ್ವೀಟ್​ ಮಾಡಿದ್ದಾರೆ. ಬರೀ ವಿರಾಟ್ ಮಾತ್ರವಲ್ಲ ಅನುಷ್ಕಾ ಶರ್ಮಾ ಕೂಡ, ತಮ್ಮ ಇನ್ಸ್​ಟ್ರಗ್ರಾಮ್​ ಅಕೌಂಟಿನಲ್ಲಿ ಹಾಕಿರುವ ಪೋಟೊಗು ನೆಟಿಜನ್​ಗಳು ಫಿಧಾ ಆಗಿದ್ದಾರೆ. ವಿರಾಟ್​​​ ಗಲ್ಲಕ್ಕೆ ಸಿಹಿ ಮುತ್ತು ನೀಡುವ ಅನುಷ್ಕಾ ಫೋಟೋಗೆ 25 ಲಕ್ಷ ಜನ ಲೈಕ್​​ ಹಾಗೂ ಕಮೆಂಟ್​ ಮಾಡಿದ್ದಾರೆ. ವಿರಾಟ್​, ಅನುಷ್ಕಾ ಫುಲ್ ರೊಮ್ಯಾಂಟಿಕ್ ಮೂಡ್​ನಲ್ಲಿದ್ದಾಗ ಕ್ಲಿಕ್ಕಿಸಿರುವ ಪೋಟೋ ಇದಾಗಿದ್ದು, ಈ ಪೋಟೋವನ್ನ ಸಾವಿರಾರು ಜನ ಇಷ್ಟಪಟ್ಟಿದ್ದಾರೆ. ಹಲವರು ಕ್ಯುಟ್​ ಕಪಲ್, ಬ್ಯುಟಿಫುಲ್ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಚುಟುಕು ಕ್ರಿಕಿಟ್​ ಹಬ್ಬ ಐಪಿಎಲ್​ಗು ಮುನ್ನ ವಿರಾಟ್​​ ಫುಲ್​ ​​​ ಜೋಶ್​​ನಲ್ಲಿದಾರೆ. ಇದೇ ಜೋಶ್​ ಐಪಿಎಲ್​ನಲ್ಲು ಇರಲಿ, ವಿರಾಟ್ ಬ್ಯಾಟ್​ನಿಂದ ರನ್​ಗಳ ಹೊಳೆ ಹರಿದು, ಈ ಬಾರಿ ಕಪ್​ ನಮ್ದೆ ಅನ್ನೋ ಆರ್​ಸಿಬಿ ಅಭಿಮಾನಿಗಳ ಆಸೆ ಈಡೇರಿಸಲಿ ಅನ್ನೋದೆ ನಮ್ಮ ಆಶಯ

ಮಹೇಶ್ ಗುರಣ್ಣವರ, ಸ್ಪೋರ್ಟ್ಸ್​​ ಬ್ಯೂರೋ, ಸುದ್ದಿಟಿವಿ

 Click this button or press Ctrl+G to toggle between Kannada and English