ಆಪ್ತಮಿತ್ರರ 2 ಚಿತ್ರದ ನಾಯಕ ಕಾರ್ತಿಕ್ ವಿಕ್ರಂ ಮೇಲೆ ಹಲ್ಲೆ…

0
177

ನಾಗವಲ್ಲಿ ವರ್ಸಸ್‌ ಆಪ್ತಮಿತ್ರರು’ ಚಿತ್ರದಲ್ಲಿ ನಾಯಕನಾಗಿ ನಟಿಸಿರುವ ಕಾರ್ತಿಕ್ ವಿಕ್ರಂ ಮೇಲೆ ಹಲ್ಲೆ ನಡೆಸಲಾಗಿದೆ. ನಿನ್ನೆ ತಡರಾತ್ರಿ ಕಾರ್ತಿಕ್ ವಿಕ್ರಂ ತಮ್ಮ ಕಾರಿನಲ್ಲಿ ಮನೆಗೆ ಹೋಗುತ್ತಿದ್ದಾಗ ಎಂಟು ಮಂದಿ ದುಷ್ಕರ್ಮಿಗಳ ಗ್ಯಾಂಗ್ ಕಾರು ಅಡ್ಡಗಟ್ಟಿ ಹಲ್ಲೆ ನಡೆಸಿದ್ದಾರೆ. ಕಾರಿನಿಂದ ಕಾರ್ತಿಕ್ ವಿಕ್ರಮ್‌ನನ್ನು ಹೊರಗೆಳೆದು ಹಲ್ಲೆ ಮಾಡಿ ಆತನ ಬಳಿ ಇದ್ದ ಐವತ್ತು ಸಾವಿರ ಹಣ, ಒಂದು ಮೊಬೈಲ್ ಮತ್ತು ಸ್ವಿಫ್ಟ್ ಕಾರು ಕಸಿದುಕೊಂಡು ಪರಾರಿಯಾಗಿದ್ದಾರೆ. ಸದ್ಯ ಆಸ್ಪತ್ರೆಯಲ್ಲಿ ಕಾರ್ತಿಕ್ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಬಸವೇಶ್ವರ ನಗರ ಪೋಲೀಸ್ ಠಾಣೆಯಲ್ಲಿ ಈ ಸಂಬಂಧ ದೂರು ದಾಖಲಾಗಿದೆ.

 Click this button or press Ctrl+G to toggle between Kannada and English