ಟಿ-20 ಸ್ಪೆಷಲಿಸ್ಟ್​ನಿಂದ ಮತ್ತೊಂದು ದಾಖಲೆ..

0
210

ಶ್ರೀಲಂಕಾದಲ್ಲಿ ನಡೆಯುತ್ತಿರುವ ಟಿ-20 ಸರಣಿಯಲ್ಲಿ 50 ಸಿಕ್ಸರ್​ಗಳನ್ನು ಪೂರೈಸಿ ದಾಖಲೆ ನಿರ್ಮಿಸಿದ್ದ ರೈನಾ , ಮೊನ್ನೆ ಶ್ರೀಲಂಕಾ ವಿರುದ್ಧ ನಡೆದ ಪಂದ್ಯದಲ್ಲಿ ಮತ್ತೊಂದು ದಾಖಲೆ ನಿರ್ಮಿಸಿದ್ದಾರೆ….ಟೀಂ ಇಂಡಿಯಾದಿಂದ ಒಂದು ವರ್ಷ ಕಾಲ ಹೊರಗುಳಿದಿದ್ದ ಟಿ-20 ಸ್ಪೆಷಲಿಸ್ಟ್​ ಸುರೇಶ್​ ರೈನಾ, ದಕ್ಷಿಣ ಆಫ್ರಿಕಾ ವಿರುದ್ಧ ಟಿ-20 ಸರಣಿಗೆ ತಂಡಕ್ಕೆ ವಾಪಸ್ಸಾಗಿದ್ರು..ಹರಿಣಗಳ ನಾಡಿನಲ್ಲಿ ನಡೆದ ಅ ಸರಣಿಯಲ್ಲಿ ರೈನಾ ಅಷ್ಟಾಗಿ ಅಬ್ಬರಿಸಿದೆ ಹೋದ್ರು, ತಮ್ಮ ಖ್ಯಾತಿಗೆ ತಕ್ಕ ಆಟ ಆಡುವಲ್ಲಿ ಯಶಸ್ವಿಯಾಗಿದ್ರು. ಹೀಗಾಗಿ ಶ್ರೀಲಂಕಾದಲ್ಲಿ ನಡೆಯುತ್ತಿರುವ ಟಿ-20 ತ್ರಿಕೋನ ಸರಣಿಗೆ ಆಯ್ಕೆಯಾದ್ರು.

ಈ ತ್ರಿಕೋನ ಸರಣಿಯಲ್ಲಿ ಸುರೇಶ್​ ರೈನಾ ಆಡಿದ ಮೂರು ಪಂದ್ಯಗಳಿಂದ ಹೆಚ್ಚಿನ ರನ್​ಗಳನ್ನು ಕಲೆ ಹಾಕಿಲ್ಲ. ಆದ್ರೆ ಅದಾಗಲೇ ಎರಡು ಮಹತ್ವದ ದಾಖಲೆಗಳನ್ನ ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.ಕಳೆದ ಸೋಮವಾರ ಶ್ರೀಲಂಕಾ ವಿರುದ್ಧ ನಡೆದ ಸರಣಿಯ 4ನೇ ಟಿ-20 ಪಂದ್ಯದಲ್ಲಿ. ಸುರೇಶ್​ ರೈನಾ ಹೊಸದೊಂದು ಮೈಲಿಗಲ್ಲು ತಲುಪಿದ್ರು. ನಾಲ್ಕನೇ ಕ್ರಮಾಂಕದಲ್ಲಿ ಆಡಲು ಬಂದ ರೈನಾ ತಮ್ಮ ನಿರ್ಭೀತಿಯ ಆಟದ ಮೂಲಕ, ಕೇವಲ 15 ಬಾಲ್​ಗಳಲ್ಲಿ 2 ಬೌಂಡರಿ ಹಾಗು 2 ಭರ್ಜರಿ ಸಿಕ್ಸರ್​ಗಳ ನೆರವಿನಿಂದ 27 ರನ್ ಸಿಡಿಸಿದ್ರು. ಈ ಪಂದ್ಯದಲ್ಲಿ ರೈನಾ 19ರನ್ ಕಲೆಹಾಕಿದ್ದ ವೇಳೆ , ಟೀಂ ಇಂಡಿಯಾ ಪರ ಟಿ-20 ಕ್ರಿಕೆಟ್​ನಲ್ಲಿ, ಅತಿಹೆಚ್ಚು ರನ್​ಗಳಿಸಿದ ಮೂರನೇ ಆಟಗಾರ ಎಂಬ ಕೀರ್ತಿಗೆ ಪಾತ್ರರಾದ್ರು. ಅಲ್ಲದೆ ಟೀಂ ಇಂಡಿಯಾದ ಗ್ರೇಟ್​ ಫಿನಿಶರ್ ಮಹೇಂದ್ರ ಸಿಂಗ್ ಧೋನಿ ಅವರನ್ನ ಎಂಟು ರನ್​ಗಳಿಂದ ಹಿಂದಿಕ್ಕಿದ್ರು.

ಇನ್ನು ಭಾರತದ ಪರ ಟಿ-20ಯಲ್ಲಿ ಅತಿ ಹೆಚ್ಚು ರನ್​ಗಳಿಸಿದ ಆಟಗಾರರ ಪೈಕಿ, ಟೀಮ್ ಇಂಡಿಯಾ ನಾಯಕ ವಿರಾಟ್​ ಕೊಹ್ಲಿ ಮೊದಲನೇ ಸ್ಥಾನ ಹಾಗೂ ಹಿಟ್​ಮ್ಯಾನ್ ರೋಹಿತ್​ ಶರ್ಮಾ ಎರಡನೇ ಸ್ಥಾನದಲ್ಲಿದ್ದಾರೆ. ಈ ದಾಖಲೆಗೂ ಮುನ್ನ ರೈನಾ ಇದೇ ಸರಣಿಯಲ್ಲಿ 50 ಸಿಕ್ಸರ್​ ಪೂರೈಸಿದ್ರು. ಈ ಮೂಲಕ ಟಿ-20ಯಲ್ಲಿ 50 ಸಿಕ್ಸರ್ ಬಾರಿಸಿದ ಮೂರನೇ ಆಟಗಾರ ಎಂಬ ದಾಖಲೆಗೆ ಪಾತ್ರರಾದ್ರು. ಅಲ್ಲದೆ ಈ ದಾಖಲೆಯಲ್ಲು ರೈನಾ ಧೋನಿಯನ್ನ ಹಿಂದಿಕ್ಕಿದ್ದರು ಅನ್ನೋದು ಇನ್ನೊಂದು ವಿಶೇಷ.ಒಟ್ನಲ್ಲಿ ರೈನಾ ದೊಡ್ಡ ಇನ್ನಿಂಗ್ಸ್ ಆಡದೆ ಹೋದ್ರು. ಕಲೆ ಹಾಕುತ್ತಿರುವ ಸಣ್ಣ ಮೊತ್ತದಲ್ಲೇ ಮಹತ್ವದ ದಾಖಲೆಗಳಿಗೆ ಪಾತ್ರರಾಗುತ್ತಿದ್ದಾರೆ. ರೈನಾರ ಈ ದಾಖಲೆಗಳು ಹೀಗೆ ಮುಂದುವರೆಯಲಿ. ಅದರ ಜೊತೆಗೆ ಬೃಹತ್​ ಇನ್ನಿಂಗ್ಸ್​ ಆಡಲಿ ಅನ್ನೋದೆ ಅಭಿಮಾನಿಗಳ ಆಶಯ

ಮಹೇಶ್​ ಗುರಣ್ಣನವರ್ ಸ್ಪೋರ್ಟ್ಸ್ ಬ್ಯುರೊ ಸುದ್ದಿ ಟಿವಿ

 Click this button or press Ctrl+G to toggle between Kannada and English