ನಿದಹಾಸ್​​ ಕಪ್​​ನಲ್ಲಿ ಇಂದು ಭಾರತ-ಬಾಂಗ್ಲಾ ಫೈಟ್​​..

0
274

ನಿದಹಾಸ್​ ಕಪ್​ ತ್ರಿಕೋನ ಟಿ-20 ಸರಣಿಯಲ್ಲಿ ಇಂದು ಭಾರತ- ಬಾಂಗ್ಲಾದೇಶ ತಂಡಗಳು ಕಾದಾಟ ನಡೆಸಲಿವೆ. ಈಗಾಗಲೇ ಎರಡು ಪಂದ್ಯ ಗೆದ್ದ ಭಾರತ ಫೈನಲ್​ ಹತ್ತಿರಕ್ಕೆ ಬಂದು ನಿಂತರೆ, ಇತ್ತ ಬಾಂಗ್ಲಾ ಸಹ ಫೈನಲ್​​ಗೆ ಏರುವ ಕನಸು ಕಾಣುತ್ತಿದೆ. ಶ್ರೀಲಂಕಾದಲ್ಲಿ ನಡೆಯುತ್ತಿರುವ ನಿದಹಾಸ್​ ಕಪ್​ ತ್ರಿಕೋನ ಟಿ-20 ಸರಣಿಯ 5ನೇ ಪಂದ್ಯದಲ್ಲಿ ಟೀಮ್​ ಇಂಡಿಯಾ ಹಾಗೂ ಬಾಂಗ್ಲಾದೇಶ ತಂಡಗಳು ಕಾದಾಟವನ್ನು ನಡೆಸಲಿವೆ. ಈ ಪಂದ್ಯದಲ್ಲಿ ಗೆಲುವು ಸಾಧಿಸಿ ಫೈನಲ್​​ ಹಾದಿ ಸುಗಮ ಗೊಳಿಸುವ ಲೆಕ್ಕಾಚಾರ ರೋಹಿತ್​ ಶರ್ಮಾ ಬಳಗದ್ದು. ಇನ್ನು ಬಾಂಗ್ಲಾ ತಂಡ ಈ ಪಂದ್ಯ ಗೆದ್ದು ಪ್ರಶಸ್ತಿ ಸುತ್ತು ಪ್ರವೇಶಿಸುವ ಆಸೆಯನ್ನು ಜೀವಂತವಾಗಿರಿಸಿಕೊಳ್ಳುವ ಪ್ಲಾನ್​ ಮಾಡಿಕೊಂಡಿದೆ. ಅಂಕಿ ಅಂಶಗಳ ಲೆಕ್ಕಾಚಾರದಲ್ಲಿ ಬ್ಲ್ಯೂ ಬಾಯ್ಸ್​ ಬಲಾಡ್ಯವಾಗಿದೆ.

ಟೂರ್ನಿಯಲ್ಲಿ ಈಗ ಆಡಿರುವ 3 ಪಂದ್ಯಗಳಲ್ಲಿ 2 ಜಯ ಹಾಗೂ 1 ಸೋಲು ಕಂಡಿರುವ ರೋಹಿತ್​​ ಪಡೆ 4 ಅಂಕಗಳೊಂದಿಗೆ, ಮೊದಲ ಸ್ಥಾನದಲ್ಲಿದೆ. ಇನ್ನು ಲಂಕಾ ಎರಡನೇ ಸ್ಥಾನ ಹಾಗೂ ಬಾಂಗ್ಲಾ ತಂಡ ಮೂರನೇ ಸ್ಥಾನದಲ್ಲಿದೆ. ಈ ಪಂದ್ಯವನ್ನು ಬಾಂಗ್ಲಾದೇಶ ಗೆದ್ದು ಕೊಂಡಲ್ಲಿ ಅಂಕ ಪಟ್ಟಿಯಲ್ಲಿ ಬಡ್ತಿ ಪಡೆಯಲಿದೆ. ಟೀಮ್​ ಇಂಡಿಯಾ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ 6 ವಿಕೆಟ್​ ಜಯ ಸಾಧಿಸಿ, ಫೈನಲ್​ ಪ್ರವೇಶಿಸುವ ಕನಸು ಕಾಣುತ್ತಿದೆ. ಈ ನಿಟ್ಟಿನಲ್ಲಿ ಇಂದಿನ ಪಂದ್ಯದಲ್ಲಿ ಗೆಲುವು ತಂಡಕ್ಕೆ ಬೂಸ್ಟ್​ ನೀಡಲಿದೆ. ಟೀಮ್​ ಇಂಡಿಯಾದ ಚಿಂತೆಯನ್ನು ಆರಂಭಿಕ ರೋಹಿತ್​ ಶರ್ಮಾ ಹೆಚ್ಚಿಸಿದ್ದಾರೆ. ಈ ಪಂದ್ಯದಲ್ಲಿ ರೋಹಿತ್​ ಬಿಗ್​ ಇನ್ನಿಂಗ್ಸ್​ ಕಟ್ಟಿದ್ರೆ, ದೊಡ್ಡ ಮೊತ್ತ ಫಿಕ್ಸ್​​. ಪ್ರಸ್ತುತ ಭರ್ಜರಿ ಫಾರ್ಮ್​​​ನಲ್ಲಿರುವ ಶಿಖರ್​ ಧವನ್​, ಆರ್ಭಟಿಸ ಬೇಕಿದೆ. ಮಧ್ಯಮ ಕ್ರಮಾಮಕದಲ್ಲಿ ಕರ್ನಾಟಕದ ಮನೀಶ್​ ಪಾಂಡೆ ತಂಡಕ್ಕೆ ನೆರವಾಗಬಲ್ಲ ಆಟಗಾರ. ಸುರೇಶ್​ ರೈನಾ, ಕೆಎಲ್​ ರಾಹುಲ್​, ದಿನೇಶ್​ ಕಾರ್ತಿಕ್​​ ಜವಾಬ್ದಾರಿಯುತ ಆಟ ಆಡಿದ್ರೆ ಗೆಲುವಿನ ನಗಾರಿ ಊದಬಹುದು.

ಇನ್ನು ಟೀಮ್​ ಇಂಡಿಯಾದ ಯಂಗ್ ಬೌಲರ್​ ಶಾರ್ದೂಲ್​ ಠಾಕೂರ್​, ಶ್ರೀಲಂಕಾ ವಿರುದ್ಧ 4 ವಿಕೆಟ್​ ಕಬಳಿಸಿ ಮಿಂಚಿದ್ದಾರೆ. ಈ ಆಟಗಾರನ ಮೇಲೆ ಎಲ್ಲರ ದೃಷ್ಠಿ ನೆಟ್ಟಿದೆ. ಜಯದೇವ್​ ಉನದ್ಕಟ್​​, ಯಜುವೇಂದ್ರ ಚಹಾಲ್​, ವಿಜಯ್​ ಶಂಕರ್​, ವಾಶಿಂಗ್ಟನ್​ ಸುಂದರ್​​ ಶಿಸ್ತು ಬದ್ಧ ದಾಳಿಯನ್ನು ನಡೆಸಿದ್ರೆ ಎದುರಾಳಿಗಳನ್ನು ಕಟ್ಟಿ ಹಾಕಬಹುದು. ಬಾಂಗ್ಲಾ ದೇಶ ಟೂರ್ನಿಯ ಮೂರನೇ ಪಂದ್ಯದಲ್ಲಿ ಗೆಲುವಿನ ವಿಶ್ವಾಸ ಹೊಂದಿದೆ. ಆಡಿದ ಎರಡು ಪಂದ್ಯಗಳಲ್ಲಿ 1ರಲ್ಲಿ ಸೋಲು, 1 ಜಯ ಸಾಧಿಸಿರುವ ಬಾಂಗ್ಲಾ, ಪಂದ್ಯ ಗೆದ್ದು, ಪಾಯಿಂಟ್ಸ್​​ ಕಲೆ ಹಾಕುವ ಪ್ಲಾನ್​ನಲ್ಲಿದೆ. ಅಲ್ಲದೆ ಭರ್ಜರಿ ಅಂತರದ ಗೆಲುವು ಮೊಹಮ್ಮದುಲ್ಲ ತಂಡಕ್ಕೆ ಬೂಸ್ಟ್​ ನೀಡಲಿದೆ. ತಮೀಮ್​ ಇಕ್ಬಾಲ್​​, ಲಿಟನ್​ ದಾಸ್​ ಶ್ರೀಲಂಕಾ ವಿರುದ್ಧದ ಲಯವನ್ನು ಮುಂದುವರೆಸಲಿದ್ದಾರೆ. ಇನ್ನು ಮಧ್ಯಮ ಕ್ರಮಾಂಕದಲ್ಲಿ ಸೌಮ್ಯ ಸರ್ಕಾರ, ಮುಷ್ಫಿಕರ್​ ರಹೀಮ್​ ದೊಡ್ಡ ಇನ್ನಿಂಗ್ಸ್​ ಕಟ್ಟುವ ಲೆಕ್ಕಚಾರ ಹಾಕಿಕೊಂಡಿದ್ದಾರೆ. ಇನ್ನು ಬೌಲಿಂಗ್​​ನಲ್ಲಿ ಕಟರ್​ ಸ್ಪೇಷಲಿಸ್ಟ್​​ ಮುಷ್ತಫಿಜುರ್​​ ರೆಹಮಾನ್​, ಹಾಗೂ ನಾಯಕ ಮೊಹಮ್ಮದುಲ್ಲಾ ವಿಕೆಟ್​ ಬೇಟೆ ನಡೆಸಬಲ್ಲರು. ಇವರಿಗೆ ಉಳಿದ ಬೌಲರ್ಸ್​​ಗಳು ಉತ್ತಮ ಸಾಥ್​ ನೀಡಿದ್ರೆ, ಗೆಲುವು ಫಿಕ್ಸ್​​. ಟೀಮ್​ ಇಂಡಿಯಾದ ಫೈನಲ್​ ಹಾದಿ ಸುಗಮವಾಗುತ್ತಾ.. ಅಥವಾ ಬಾಂಗ್ಲಾ ಪ್ರಶಸ್ತಿ ಸುತ್ತಿಗೆ ಸನಿಹವಾಗುತ್ತಾ ಎಂಬುದಕ್ಕೆ ಫಲಿತಾಂಶದ ಬಳಿಕವಷ್ಟೇ ಗೊತ್ತಾಗಲಿದೆ.
ಸ್ಪೋರ್ಟ್ಸ್​​ ಬ್ಯೂರೋ, ಸುದ್ದಿಟಿವಿ

 Click this button or press Ctrl+G to toggle between Kannada and English