ನ್ಯಾಯ ನೀಡಿ ಇಲ್ಲ ದಯಾಮರಣ ಕೊಡಿಸಿ…

0
175

ಮೈಸೂರು ವಿಶ್ವವಿದ್ಯಾನಿಲಯದ ಹಾಸ್ಟೆಲ್ ಒಂದರಲ್ಲಿ ಅಡಿಗೆ ಕೆಲಸದವರಾಗಿ ಕಾರ್ಯನಿರ್ವಹಿಸುತ್ತಿದ್ದ ವ್ಯಕ್ತಿಯೊಬ್ಬರು ನ್ಯಾಯ ಕೊಡಿಸಿ ಇಲ್ಲವೇ ದಯಾಮರಣ ನೀಡಿ ಎಂದು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸುತ್ತಿದ್ದಾರೆ.ಮೈಸೂರಿನ ಉದ್ಬೂರು ನಿವಾಸಿ ಲಕ್ಷ್ಮಿನಾರಾಯಣ್ ಎಂಬ ದಲಿತ ಯುವಕ ಮೈಸೂರು ವಿಶ್ವವಿದ್ಯಾನಿಲಯಕ್ಕೆ ಸಂಬಂಧಪಟ್ಟ ಹಾಸ್ಟೆಲ್ ಒಂದರಲ್ಲಿ ಅಡುಗೆ ಕೆಲಸಕ್ಕೆ ನಿಯುಕ್ತಿಗೊಂಡಿದ್ದರು. ಆದರೆ ಇಲ್ಲಿ ಹಾಸ್ಟೆಲ್ ಗೆ ಸಂಬಂಧಪಡದ ವ್ಯಕ್ತಿಗಳು ಬಂದು ತನಗೆ ಊಟ ಕೊಡು, ಶರಾಬು ತಂದು ಕೊಡು, ಗಾಂಜಾ ತರಿಸಿಕೊಡು ಎಂದು ಪೀಡಿಸುವುದಲ್ಲದೇ, ತನ್ನ ಮೇಲೆ ಹಲ್ಲೆ ನಡೆಸುತ್ತಾರೆ ಎಂದು ಲಕ್ಷ್ಮಿನಾರಾಯಣ್ ಸರಸ್ವತಿಪುರಂ ಠಾಣೆಗೆ ಈಗಾಗಲೇ ದೂರು ನೀಡಿದ್ದರು. ಆದರೆ ಪೊಲೀಸರು ದೂರು ಕೇಳಿದರೇ ವಿನಃ ಸ್ಥಳಕ್ಕೆ ಬಂದು ನೋಡುವುದಾಗಲಿ, ಪ್ರಕರಣ ದಾಖಲಿಸಿಕೊಳ್ಳುವುದಾಗಲಿ ಏನನ್ನೂ ಮಾಡಿರಲಿಲ್ಲ. ಹಾಸ್ಟೆಲ್ ಗೆ ಬರುವ ಪುಂಡರ ಹಾವಳಿ ದಿನೇ ದಿನೇ ಹೆಚ್ಚುತ್ತ ಹೋಯಿತೇ ವಿನಃ ಕಡಿಮೆಯಾಗಲಿಲ್ಲ. ಇದರಿಂದ ನೊಂದ ಲಕ್ಷ್ಮಿನಾರಾಯಣ್ ಇಂದು ಜಿಲ್ಲಾಧಿಕಾರಿಗಳ ಕಚೇರಿ ಎದುರು ತನಗೆ ದಯಾಮರಣ ನೀಡುವಂತೆ ಪ್ರತಿಭಟನೆ ನಡೆಸುತ್ತಿದ್ದಾರೆ.

 Click this button or press Ctrl+G to toggle between Kannada and English