ಪ್ರಯಾಣಿಕರಿಗೆ ಶಾಕ್ ಕೊಟ್ಟ ಕೆಎಸ್ ಆರ್ ಟಿಸಿ..!!

0
139

ಕೆಎಸ್ ಆರ್ ಟಿಸಿ ನಿಗಮ‌, ಜನ ಮೆಚ್ಚಿದ ಸಾರಿಗೆ ಎಂದು ಹೆಸರು ಗಳಿಸಿದೆ..‌ ಪ್ರಯಾಣಿಕರು ತಮ್ಮ ಸುಖಕರ ಪ್ರಯಾಣಕ್ಕೆ ಮೊದಲ ಪ್ರಾಶಸ್ತ್ಯ ಕೊಡೊದನ್ನೆ ಲಾಭ ಮಾಡಿಕೊಂಡ ನಿಗಮ, ಪ್ರಯಾಣಿಕರ ಜೇಬಿಗೆ ಕತ್ತರಿ ಹಾಕಲು ಮುಂದಾಗಿದೆ….ನಮ್ ಕೆಎಸ್ ಆರ್ ಟಿಸಿ ನಿಗಮ, ಈ ಯುಗಾದಿ ಹಬ್ಬಕ್ಕೆ ಸಿಹಿ ಸುದ್ದಿ ನೀಡೋ ಬದಲು ಬಿಗ್ ಶಾಕಿಂಗ್ ನ್ಯೂಸ್ ನ್ನ ಕೊಟ್ಟಿದೆ.. ಯುಗಾದಿ ಹಬ್ಬಕ್ಕೆ ಊರುಗಳಿಗೆ ತೆರಳೋ ಪ್ರಯಾಣಿಕರ ಜೇಬಿಗೆ ಕತ್ತರಿ ಹಾಕಲು‌‌ ಸಜ್ಜಾಗಿದ್ದು, ಟಿಕೆಟ್ ದರದಲ್ಲಿ ಬಾರಿ ಹೆಚ್ಚಳ ‌ಮಾಡಲಾಗಿದೆ..‌ ರಾಜ್ಯದ ವಿವಿಧ ಮೂಲೆಗಳಿಗೆ ತೆರಳುವಂತ ಕೆಎಸ್ ಆರ್ ಟಿಸಿ ಐಷಾರಾಮಿ ಬಸ್ ಗಳ ಟಿಕೆಟ್ ದರದಲ್ಲಿ ಶೇಕಡಾ ೨೦ ರಿಂದ ೩೦ ರಷ್ಟು ಹೆಚ್ವಳ ಮಾಡಲಾಗಿದ್ದು, ಪ್ರಯಾಣಿಕರ ಕೆಂಗಣ್ಣಿಗೆ ಗುರಿಯಾಗಿದೆ.ಕೆಎಸ್ ಆರ್ ಟಿಸಿ ಪ್ರಯಾಣಿಕರಿಗೆ ಶಾಕಿಂಗ್ ನ್ಯೂಸ್ ಕೊಟ್ಟಿದ್ರೂ ನಿಗಮ‌ದ ಆಡಳಿತ ಮಂಡಳಿ ಸಮರ್ಥನೆ ಮಾಡೋ ಕೆಲಸ ಮುಂದುವರೆಸಿದೆ.. ಅಂದಹಾಗೆ ರಾಜಹಂಸ, ವೋಲ್ವೋ, ಮಲ್ಟಿ, ಸ್ಕ್ಯಾನಿಯಾ ಬಸ್‌ ಗಳ ೪೦೦ ಹೆಚ್ಚುವರಿ ಬಸ್ ಗಳಲ್ಲಿ ಮಾತ್ರ ಟಿಕೆಟ್ ದರದಲ್ಲಿ ಹೆಚ್ಚಳ ಮಾಡಲಾಗಿದೆ..

ಹೆಚ್ಚಳವಾಗಿರುವ ನೂತನ ಟಿಕೆಟ್ ದರ ಇಂತಿದೆ

– ಬೆಂಗಳೂರು -ಮೈಸೂರು ಪ್ರಯಾಣ ದರದಲ್ಲಿ ಶೇ. 20 ರಷ್ಟು ಹೆಚ್ಚಳ.

– ಬೆಂಗಳೂರು – ಮಂಗಳೂರು ದರದಲ್ಲಿಯೂ ಶೇ.20 ರಷ್ಟು ಹೆಚ್ಚಳ.

– ಬೆಂಗಳೂರು- ಹುಬ್ಬಳ್ಳಿ, ಹಾಲಿ ದರ- 790ರೂ. ಇದ್ರೆ, ವಿಶೇಷ ದರ- 948ರೂ ನಿಗದಿ

– ಇನ್ನುಳಿದಂತೆ ಕೆಂಪು ಬಸ್ ಗಳಲ್ಲಿ ಸಾಮಾನ್ಯ ದರ ಮುಂದುವರಿಕೆ..!!

ಬೆಂಗಳೂರಿನಿಂದ ತೆರಳುವ ಎಲ್ಲಾ ಐಷಾರಾಮಿ ‌ಬಸ್ ಗಳು ವಾಪಸ್ ಬರುವ ಸಂದರ್ಭದಲ್ಲಿ ಪ್ರಯಾಣಿಕರಿಲ್ಲದೆ ಬರಬೇಕಾದ ಪರಿಸ್ಥಿತಿ ಇದೆ.. ಈ ಕಾರಣಕ್ಕಾಗಿ ೪೦೦ ಬಸ್ ಗಳಲ್ಲಿ ಒಂದುಷ್ಟು ಪರ್ಸೆಂಟ್ ಹೆಚ್ವಿನ‌ದರ ನಿಗದಿ ಪಡಿಸಲಾಗಿದ್ದು, ಲಾಸ್ ನಲ್ಲಿ ತೂಗಾಡುವ ಪರಿಸ್ಥಿತಿಯನ್ನ ತಪ್ಪಿಸಲು ಈ ಕ್ರಮ‌ಕ್ಕೆ ಮುಂದಾಗಲಾಗಿದೆ ಎಂದು ನಿಗಮವೇ ಹೇಳಿಕೊಂಡಿದೆ..‌.

ಮಂಜುನಾಥ್ ಹೊಸಹಳ್ಳಿ ಸುದ್ದಿಟಿವಿ ಬೆಂಗಳೂರು.

 Click this button or press Ctrl+G to toggle between Kannada and English