ಪ್ರೊ. ಸ್ಟೀಫನ್‌ ಹಾಕಿಂಗ್‌​ ಇನ್ನಿಲ್ಲ..!

0
141

ನೋಬೆಲ್ ಪುರಸ್ಕೃತ ಭೌತವಿಜ್ಞಾನಿ ಸ್ಟೀಫನ್ ವಿಲಿಯಂ ಹಾಕಿಂಗ್ ನಿಧನರಾಗಿದ್ದಾರೆ. ಪಾರ್ಶ್ವವಾಯುಗೆ ಒಳಗಾಗಿದ್ದ ಹಾಕಿಂಗ್ ವಿಶೇಷ ಯಂತ್ರದ ಮೂಲಕ ಮಾತನಾಡುತ್ತಿದ್ದರು. ಬ್ಲಾಕ್ ಹೋಲ್, ಕ್ವಾಂಟಮ್ ಮೆಕ್ಯಾನಿಸಮ್ ಹಾಗೂ ಸಾಪೇಕ್ಷತಾ ಸಿದ್ಧಾಂತದ ಕುರಿತ ಸಂಶೋಧನೆಗೆ ಹಾಕಿಂಗ್ ಪ್ರಸಿದ್ಧಿ ಪಡೆದುಕೊಂಡಿದ್ದರು. 1988ರಲ್ಲಿ ಪ್ರಕಟಿಸಿದ ಅವರ `ಎ ಬ್ರೀಫ್ ಇಸ್ಟರಿ ಆಫ್ ಟೈಂ’ ಪುಸ್ತಕ ವಿಶ್ವದ ಅತ್ಯುತ್ತಮ ಪುಸ್ತಕಗಳಲ್ಲಿ ಒಂದು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಪತ್ನಿ, ಮಕ್ಕಳನ್ನು ಹಾಕಿಂಗ್ ಅಗಲಿದ್ದಾರೆ. 1942 ಜನವರಿ 8ರಂದು ಇಂಗ್ಲೆಂಡ್‌ನ ಆಕ್ಸ್‌ಫರ್ಡ್‌ನಲ್ಲಿ ಜೀವಶಾಸ್ತ್ರಜ್ಞ, ಸಂಶೋಧಕ ಡಾ. ಫ್ರಾಂಕ್‌ ಹಾಕಿಂಗ್ ಹಾಗೂ ಐಸೊಬೆಲ್ ಮಗನಾಗಿ ಸ್ಟೀಫನ್‌ ಹಾಕಿಂಗ್‌ ಜನಿಸಿದ್ದರು. ಸ್ಟೀಫನ್‌ ಅವರ ಜೀವನಾಧಾರಿತ ಕಥೆಯು 2014ರಲ್ಲಿ ಎಡ್ಡಿ ರೆಡಿಮೇನ್‌ ನಟನೆಯಲ್ಲಿ ‘ದ ಥಿಯರಿ ಆಫ್‌ ಎವೆರಿಥಿಂಗ್‌’ ಸಿನಿಮಾವಾಯಿತು.

 Click this button or press Ctrl+G to toggle between Kannada and English