ಮಾರ್ಚ್ 22ಕ್ಕೆ ಮೇಟ್ರೋ ಸಿಬ್ಬಂದಿ ಮುಷ್ಕರ..

0
203

ಮಾರ್ಚ್ 22ಕ್ಕೆ ಮೆಟ್ರೋ ಸಿಬ್ಬಂದಿ ಮುಷ್ಕರಕ್ಕೆ ಕರೆ ನೀಡಿದ್ದಾರೆ.. ಈ ಹಿನ್ನೆಲೆಯಲ್ಲಿ ಬಿಎಂಆರ್​​ಸಿಎಲ್ ತರಾತುರಿಯಲ್ಲಿ ಪರ್ಯಾಯ ವ್ಯವಸ್ಥೆಗೆ ಮುಂದಾಗಿದೆ. ಆರೇಶನಲ್ ಕಂಟ್ರೋಲ್ ಸೆಂಟರ್​​ಗೆ ತರಾತುರಿಯಲ್ಲಿ ನೇಮಕ ಮಾಡಲಾಗಿದೆ. ತರಬೇತಿ ಪಡೆಯದ ಸಿಬ್ಬಂದಿ ಆಪರೇಶನ್ ಕಂಟ್ರೋಲ್​​​ಗೆ ವರ್ಗಾವಣೆ ಮಾಡಲಾಗಿದೆ. ಮಾಜಿ ಸೈನಿಕರನ್ನು ಬಿಎಮ್ ಆರ್ ಸಿ ಎಲ್ ವರ್ಗಾವಣೆಗೆ ಮುಂದಾಗಿದೆ. ಅಪರೇಶನ್ ಕಂಟ್ರೋಲ್ ಸೆಂಟರ್ ಮೇಟ್ರೂ ಸಂಚಾರ ದಲ್ಲಿ ಬಹಳ ಪ್ರಮುಖ ಪಾತ್ರ ವಹಿಸುತ್ತೆ. ಅಪರೇಶನ್ ಕಂಟ್ರೋಲ್ ನಲ್ಲಿ ಕೆಲಸ ಮಾಡಲು ಕನಿಷ್ಠ ಎರಡು ತಿಂಗಳ ತರಬೇತಿ ಪಡೆದಿರಬೇಕು. ಆದ್ರೆ ಸ್ಟೇಷನ್ ಕಂಟ್ರೋಲ್ ಸಿಬ್ಬಂದಿಗಳನ್ನು ಅಪರೇಶನ್ ಕಂಟ್ರೋಲ್ ಸೆಂಟರ್​​ಗೆ ವರ್ಗಾವಣೆ ಮಾಡಲಾಗಿದೆ. 22 ಕ್ಕೆ ಮೆಟ್ರೋ ಟ್ರೈನ್ ಕಂಟ್ರೂಲ್ ಮಾಡಲು ತರಬೇತಿ ಪಡೆಯದ ಸಿಬ್ಬಂದಿ ಗಳಮನ್ನು ನೇಮಕಾತಿ ಮಾಡಲಾಗಿದೆ.. ಈ ನೇಮಕಾತಿಯ ಪ್ರತಿ ಸುದ್ದಿ ಟಿವಿಗೆ ಲಭ್ಯವಾಗಿದೆ. ತರಬೇತಿ ಪಡೆಯದ ಸಿಬ್ಬಂದಿ ಗಳಿಂದ ಹೆಚ್ಚು ಕಡಿಮೆಯಾದ್ರೆ ಯಾರು ಹೊಣೆ ಅನ್ನೋ ಪ್ರಶ್ನೆ ಎದ್ದಿದೆ.. ಬಿಎಮ್ ಆರ್ ಸಿ ಎಲ್ ಬೇಜಾವದ್ದಾರಿ ನಡೆ ಚರ್ಚೆಗೆ ಗ್ರಾಸವಾಗಿದೆ..

 Click this button or press Ctrl+G to toggle between Kannada and English