11ನೇ ಆವೃತ್ತಿ ಐಪಿಎಲ್​​​ನ ಸಾಂಗ್​ ಬಿಡುಗಡೆ…

0
219

ಭಾರತದಲ್ಲಿ ಇನ್ನೇನು ಕೆಲವೇ ದಿನಗಳಲ್ಲಿ ಐಪಿಎಲ್​ ರಂಗು ಆರಂಭವಾಗಲಿದೆ. ಚುಟುಕು ಕ್ರಿಕೆಟ್​​ನ ಫೀಯರ್​ ಈ ಬಾರಿ ದುಪಟ್ಟಾಗಲಿದೆ. 8 ತಂಡಗಳ ನಡುವಿನ ಕಾದಾಟಕ್ಕೆ ಪ್ರಸಾರಕರು ಭರ್ಜರಿ ವೇದಿಕೆ ಒದಗಿಸಿದ್ದಾರೆ. ಇನ್ನು 11ನೇ ಆವೃತ್ತಿಯ ಐಪಿಎಲ್​​ನ ಥೀಮ್​ ಸಾಂಗ್​ ಸಖತ್​ ವೈರಲ್​​ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡ್ತಾ ಇದೆ.ಇನ್ನೇನು ಕೆಲವೇ ದಿನಗಳಲ್ಲಿ ಭಾರತ ಪ್ರೀಮಿಯರ್​ ಲೀಗ್​ ಆರಂಭವಾಗಲಿದೆ. ಈ ಚುಟುಕು ಕ್ರಿಕೆಟ್​​ ಟೂರ್ನಿಯ ಮಜಾ ಸವಿಯಲು ಅಭಿಮಾನಿಗಳು ಕಾತುರರಾಗಿದ್ದಾರೆ. 8 ತಂಡಗಳು ಐಪಿಎಲ್​​​ ಪ್ರಶಸ್ತಿಗೆ ಮುತ್ತಿಡಲು ಕಾದಾಟವನ್ನು ನಡೆಸಲಿವೆ. ವರ್ಷದಿಂದ ವರ್ಷಕ್ಕೆ ಭಾರೀ ರೋಚಕತೆಯನ್ನು ಹುಟ್ಟಿಸಿರುವ ಈ ಕಾದಾಟದಲ್ಲಿ, ಸ್ಟಾರ್​ ಆಟಗಾರರ ದಂಡೇ ಇದೆ. ದೇಶ ವಿದೇಶದ ಆಟಗಾರರ ಆಟ ನೋಡಲು ಕ್ರಿಕೆಟ್​ ಪ್ರೀಯರು ರೆಡಿಯಾಗಿದ್ದಾರೆ.

ಈ ಬಾರಿ ಐಪಿಎಲ್​​ ನೇರ ಪ್ರಸಾರದ ಹಕ್ಕನ್ನು ಸ್ಟಾರ್​​ ಹೊತ್ತುಕೊಂಡಿದೆ. ಬಿಸಿಸಿಐ ಹಾಗೂ ಸ್ಟಾರ್​ ನೆಟ್​ವರ್ಕ್​​ ಈ ರಂಗು ರಂಗಿನ ಟೂರ್ನಿಯನ್ನು ಇನ್ನಷ್ಟು ವೈಭವಿಕರಿಸೊಕೆ ಪ್ಲಾನ್​ ಮಾಡಿಕೊಂಡಿದೆ. ಅಂದಹಾಗೆ ಈ ಬಾರಿ ಬೆಸ್ಟ್​​ VS ಬೆಸ್ಟ್​​ ಅಡಿ ಬರಹದಲ್ಲಿ ಐಪಿಎಲ್​ ನಡೆಯಲಿದೆ. ವಿಶ್ವದ ಶ್ರೇಷ್ಠ ಆಟಗಾರರನ್ನು ಒಂದೇ ಸೂರಿನಡಿ ನೋಡುವ ಅವಕಾಶ ಅಭಿಮಾನಿಗಳದ್ದಾಗಲಿದೆ. ಐದು ಭಾಷೆಗಳಲ್ಲಿ ಈ ಬಾರಿಯ ಐಪಿಎಲ್​​ನ ಥೀಮ್​ ಸಾಂಗ್​​ ರೆಡಿಯಾಗಿದೆ. ಹಿಂದಿಯಲ್ಲಿ ಯೇ ಖೇಲ್​​ಹೈ ಜವಾನೋಕಾ ಎಂಬ ಹಾಡು, ಈಡಿ ಐಪಿಎಲ್​​ ಚಿತ್ರಣವನ್ನೇ ಕಣ್ಣು ಮುಂದೆ ತೆರೆದಿಡಲಿದೆ. ಫುಲ್​​ ಜೋಶ್​​ನಿಂದ ಕೂಡಿರುವ ಹಾಡು ಅಭಿಮಾನಿಗಳನ್ನು ರಂಜಿಸಿದೆ. ಈ ಹಾಡನ್ನು ತಯಾರಿಸಲು ನುರಿತ ತಂಡ ಶ್ರಮಿಸಿದೆ. ದಕ್ಷಿಣ ಆಫ್ರಿಕಾದ ಚಿತ್ರತಯಾರಕ ಡ್ಯಾನ್​​ ಮಸಿ, ಸಂಗಿತ ನಿರ್ದೇಶಕ ರಾಜೀವ್​​, ಬಲ್ಲಾ, ಹಾಡುಗಾರ ಸಿದ್ದಾರ್ಥ್​​​​, ಹಾಡಿಗೆ ಕಂಠದಾನ ಮಾಡಿದ್ದಾರೆ. ಅಲ್ಲದೆ 5 ಭಾಷೆಗಳಲ್ಲಿ ಥೀಮ್​ ಸಾಂಗ್​ ಅಭಿಮಾನಿಗಳನ್ನು ಸೆಳೆಯೋಕೆ ತಯಾರಾಗಿದೆ. ಐಪಿಎಲ್​​ ಥೀಮ್​ ಮ್ಯೂಸಿಕ್​ ನಿಂದಲೇ ಹಾಡು ಆರಂಭವಾಗಲಿದೆ. ಇನ್ನು ಕಳೆದ ಬಾರಿಗಿಂತಲೂ ಹೆಚ್ಚು ಜನಪ್ರೀಯತೆಯನ್ನು ಈ ಬಾರಿ ನೀಡುವ ಉದ್ದೇಶದಿಂದ ಶ್ರಮಿಸುತ್ತಿರುವ ತಂಡದ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದೆ.
ಸ್ಪೋರ್ಟ್ಸ್​​ ಬ್ಯೂರೋ, ಸುದ್ದಿಟಿವಿ

 Click this button or press Ctrl+G to toggle between Kannada and English